More

    ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಬೆಂಬಲ:ಎಂ. ಶಂಕರಪ್ಪ

    ಹಾಸನ: ಒಂದು ಸಮಾಜ ಅಭಿವೃದ್ಧಿ ಹೊಂದಬೇಕಾದರೆ ರಾಜಕೀಯ ಸಹಕಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ತಿಳಿಸಿದರು.
    ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಮಾದಿಗ ಸಮಾಜವು ಅತ್ಯಂತ ಕೆಳ ಸಮುದಾಯವಾಗಿದೆ. ನಮ್ಮ ಸಮಾಜಕ್ಕೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ತುಂಬಾ ಅನ್ಯಾಯವಾಗಿದೆ. ನಾವು ಸುಮಾರು 30 ವರ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿಗಾಗಿ ಒತ್ತಾಯಿಸಿ ಹಲವಾರು ಹೋರಾಟಗಳನ್ನು ರಾಜ್ಯದೆಲ್ಲೆಡೆ ಮಾಡಿದ್ದೇವೆ. ಇದರ ಪ್ರತಿಫವಾಗಿ ರಾಜ್ಯ ಬಿಜೆಪಿ ಸರ್ಕಾರವು ಎ.ಜೆ.ಸದಾಶವ ಆಯೋಗ ರಚನೆ ಮಾಡಿತು. ಬಳಿಕ ಈ ಸಮಿತಿಗೆ ಯಾವುದೇ ಕಚೇೀರಿ ಅಥವಾ ಹಣಕಾಸು ನೆರವನ್ನು ನೀಡಲಿಲ್ಲ. ಇದನ್ನು ಮನಗಂಡು ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಸಮಿತಿಗೆ ಹಣಕಾಸು ನೆರವನ್ನು ನೀಡಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಮುನ್ನಡೆಯಲು ಸಹಕಾರ ನೀಡಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕಾಂಗ್ರೆಸ್ ಪಕ್ಷವು ನಮ್ಮ ಸಮಾಜದ ಮತಗಳನ್ನು ಪಡೆದುಕೊಂಡು ಇದುವರೆಗೂ ರಾಜಕೀಯವಾಗಿ ನಮ್ಮನ್ನು ತುಳಿದುಕೊಂಡು ಬಂದಿದೆ. ಹಾಗಾಗಿ ನಮ್ಮ ಸಮಿತಿಯು ಜೆಡಿಎಸ್ – ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲವನ್ನು ನೀಡಲು ತೀರ್ಮಾನಿಸಿದೆ. ನಮ್ಮ ತೀರ್ಮಾನವನ್ನು ಜಿಲ್ಲೆಯ ಮಾದಿಗ ಸಮಾಜದವರು ಬೆಂಬಲಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ವತ್ಸಲಾ ಶೇಖರಪ್ಪ, ಆಲೂರು ವೆಂಕಟಯ್ಯ, ಸುರೇಶ್ ಬೆಟ್ಟಸಾತೇನಹಳ್ಳಿ, ಕೆ.ಆರ್. ಲೋಕೇಶ್, ರವಿಕುಮಾರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts