More

    ಬಿಗಿಯಾದ ಪೊಲೀಸ್ ಪಹರೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ಸೀಲ್ ಡೌನ್ ಆದೇಶ ಉಲ್ಲಂಘನೆಯಾಗುತ್ತಿದ್ದ ನಗರದ ಕೇಶ್ವಾಪುರ ಆಜಾದ್ ಕಾಲನಿ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

    ಆಜಾದ್ ಕಾಲನಿಯ ಬಾಲಕಿಯೊಬ್ಬಳಿಗೆ ಕರೊನಾ ಸೋಂಕು ದೃಢಪಟ್ಟ ಕಾರಣ ಸುತ್ತಲಿನ ಪ್ರದೇಶವನ್ನು ಸೀಲ್ ಮಾಡಲಾಗಿತ್ತು. ಆದರೂ ಕೆಲವು ಜನರು ಹಾಗೂ ವಾಹನ ಸವಾರರು ಪೊಲೀಸರ ಕಣ್ಣು ತಪ್ಪಿಸಿ ಬ್ಯಾರಿಕೇಡ್​ಗಳನ್ನು ತಳ್ಳಿ ಸೀಲ್​ಡೌನ್ ಪ್ರದೇಶದಲ್ಲಿ ಮನಬಂದಂತೆ ತಿರುಗುತ್ತಿದ್ದರು.

    ಈ ಕುರಿತು ‘ವಿಜಯವಾಣಿ’ ಪತ್ರಿಕೆ ಭಾನುವಾರದ ಸಂಚಿಕೆಯಲ್ಲಿ ‘ಬ್ಯಾರಿಕೇಡ್ ಇಟ್ಟಿರೋದು ಸರಿಸೋಕಾ?’ ಶೀರ್ಷಿಕೆಯಡಿ ಪ್ರತ್ಯಕ್ಷ ವರದಿ ಪ್ರಕಟಿಸಿತ್ತು.

    ಇದಕ್ಕೆ ಸ್ಪಂದಿಸಿದ ಮಹಾನಗರ ಪೊಲೀಸ್ ಕಮಿಷನರೇಟ್ ಕೇಶ್ವಾಪುರ ಸೀಲ್​ಡೌನ್ ಪ್ರಾರಂಭದ ಬ್ಯಾರಿಕೇಡ್ ಬಳಿ ಒಬ್ಬರು ಎಎಸ್​ಐ ಹಾಗೂ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದೆ.

    ಸೀಲ್​ಡೌನ್ ಪ್ರದೇಶದಲ್ಲಿ ವಾಹನ ಸಂಚಾರ ಭಾನುವಾರ ಸಂಪೂರ್ಣ ಬಂದ್ ಆಗಿದ್ದು, ಜನಸಂಚಾರ ವಿರಳವಾಗಿತ್ತು. ಕುಸುಗಲ್ ರಸ್ತೆ, ಸ್ಟೇಶನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ವಿದ್ಯಾನಗರ, ಉಣಕಲ್ಲ ಇತರ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.

    ಕಣ್ಗಾವಲು: ನಗರದ ಮುಲ್ಲಾ ಹಾಗೂ ಕರಾಡಿ ಓಣಿಯಲ್ಲಿ ಸೀಲ್​ಡೌನ್ ಆದೇಶದ ಪ್ರಯುಕ್ತ ಪೊಲೀಸ್ ಸರ್ಪಗಾವಲು ಮುಂದುವರಿದಿದೆ. ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸಿಬಂದಿ ಹಾಗೂ ಪೊಲೀಸರು ಇಲ್ಲಿ ಬೀಡುಬಿಟ್ಟಿದ್ದಾರೆ. ಸೀಲ್​ಡೌನ್ ಪ್ರದೇಶದಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ದವಸ ಧಾನ್ಯವನ್ನು ವಿತರಿಸಲು ಪಾಲಿಕೆ ಈಗಾಗಲೇ ಪಾಸ್ ನೀಡಿದೆ. ಮುಲ್ಲಾ ಓಣಿ ಹಾಗೂ ಕರಾಡಿ ಓಣಿಯಲ್ಲಿ ವಿತರಿಸುತ್ತಿದ್ದವರಿಗೇ ಪಾಸ್ ನೀಡಿದೆ. ಅಗತ್ಯ ವಸ್ತುಗಳು ಏನೇ ಬೇಕಿದ್ದರೂ ಪಾಲಿಕೆ ಸ್ಥಾಪಿತ ಕಂಟ್ರೋಲ್ ರೂಮ್ೆ ಕರೆ ಮಾಡಲು ಈಗಾಗಲೆ ಸೂಚನೆ ನೀಡಲಾಗಿದೆ. ನಿಷೇಧಿತ ಪ್ರದೇಶವಾಗಿದ್ದರಿಂದ ಜನರು ಹೊರಗೆ ಹಾಗೂ ಒಳಗಡೆ ಹೋಗದಂತೆ ಎಲ್ಲೆಡೆ ಬ್ಯಾರಿಕೇಡ್ ಹಾಕಲಾಗಿದೆ.

    ಅಲ್ಲೊಂದು.. ಇಲ್ಲೊಂದು ತೆರೆದ ಅಂಗಡಿ: ಲಾಕ್​ಡೌನ್ ಮಧ್ಯೆಯೂ ನಗರದ ಜನತಾ ಬಜಾರ ಸೇರಿ ಕೆಲವು ಕಡೆ ಭಾನುವಾರ ಅಲ್ಲೊಂದು ಇಲ್ಲೊಂದು ಅಂಗಡಿಗಳು ತೆರೆದಿದ್ದವು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ರಿಲೈಯನ್ಸ್ ಮಾರ್ಟ್, ಮೋರ್, ಬಿಗ್ ಬಜಾರ್​ನಲ್ಲಿಯೂ ಜನರು ಸರದಿಯಲ್ಲಿ ನಿಂತು ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts