More

    ಬಾಡ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ; ತನಿಖೆ ನಡೆಸುವಂತೆ ಒತ್ತಾಯ

    ವಿಜಯವಾಣಿ ಸುದ್ದಿಜಾಲ ಕಾರವಾರ: ಕುಮಟಾ ತಾಲೂಕಿನ ಬಾಡ ಗ್ರಾಮ ಪಂಚಾಯಿತಿಯಲ್ಲಿ ಹಣದ ಅವ್ಯವಹಾರ ನಡೆದಿದ್ದು, ತನಿಖೆ ನಡೆಸುವಂತೆ ಗ್ರಾಮಸ್ಥರು ಜಿಪಂ ಸಿಇಒ ಎಂ.ರೋಶನ್ ಅವರಿಗೆ ಶುಕ್ರವಾರ ದೂರು ನೀಡಿದರು.

    ಗ್ರಾಮದ 10 ಕ್ಕೂ ಹೆಚ್ಚು ಎಸ್​ಸಿ ಕುಟುಂಬಗಳು ಗ್ರಾಪಂ ಅನುಮತಿ ಪಡೆದು ಶೌಚಗೃಹ ಜಾಗೂ ಎನ್​ಆರ್​ಇಜಿ ಅಡಿ ಕೊಟ್ಟಿಗೆ ಕಟ್ಟಿಕೊಂಡರೂ ಅವರಿಗೆ ಹಣ ಬಿಡುಗಡೆಯಾಗಿಲ್ಲ. ಇನ್ನು ಗ್ರಾಪಂನ ಶಾಸನಬದ್ಧ ಅನುದಾನವನ್ನು ಜಿಪಂ ಅನುಮತಿ ಪಡೆಯದೇ ಸಿಬ್ಬಂದಿ ವೇತನಕ್ಕೆ ಬಳಸಲಾಗಿದೆ. ಇದೇ ರೀತಿ ಸುಮಾರು 15 ಲಕ್ಷಕ್ಕೂ ಅಧಿಕ ಹಣ ನಿಯಮ ಮೀರಿ ಬಳಕೆಯಾಗಿದೆ. ಪಿಯುಸಿ ಓದಿದವರನ್ನು ಡಾಟಾ ಎಂಟ್ರಿ ಆಪರೇಟರ್​ಗಳಾಗಿ ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ, 9ನೇ ತರಗತಿ ಓದಿದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಳೆದ 10 ವರ್ಷಗಳಿಂದ ಪಿಡಿಒ ಇದೇ ಗ್ರಾಪಂನಲ್ಲಿದ್ದಾರೆ ಎಂದು ದೂರಿದರು.

    ದೂರು ಅರ್ಜಿ ಸ್ವೀಕರಿಸಿದ ಸಿಇಒ ಎಂ.ರೋಶನ್, ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಪ್ರಾಥಮಿಕ ತನಿಖೆ ನಡೆಸಿ 24 ಗಂಟೆಗಳಲ್ಲಿ ದೂರುದಾರರಿಗೆ ಮಾಹಿತಿ ನೀಡಲಾಗುವುದು. ಹಾಗೊಮ್ಮೆ ಅವ್ಯವಹಾರ ನಡೆದಿದ್ದು, ಮೇಲ್ನೋಟಕ್ಕೆ ಕಂಡು ಬಂದಲ್ಲಿ ತಕ್ಷಣ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮಸ್ಥರಾದ ಪರಮೇಶ್ವರ ಬೀರಪ್ಪ ನಾಯ್ಕ, ರಾಮಾ ಬಿ.ನಾಯ್ಕ, ಶಿವು ಬೀರಾ ಹಳ್ಳೇರ, ಪರಮೇಶ್ವರ ಶಿವು ಹಳ್ಳೇರ, ತುಳಸು ಹಳ್ಳೇರ, ಈಶ್ವರ ಹಳ್ಳೇರ ಇತರರು ದೂರು ಸಲ್ಲಿಕೆ ಸಂದರ್ಭದಲ್ಲಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts