More

    ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಿ

    ಬೆಳಗಾವಿ: ರಾಮದುರ್ಗ ತಾಲೂಕಿನ ಉದಪುಡಿಯ ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ತ್ವರಿತವಾಗಿ ಕಬ್ಬಿನ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟಿಸಿದರು.

    ಕಾರ್ಖಾನೆ ಆಡಳಿತ ಮಂಡಳಿಯಲ್ಲಿ ಉಂಟಾದ ಭಿನ್ನಮತದಿಂದಾಗಿ 5-6 ವರ್ಷಗಳಿಂದ ಬೆಳೆಗಾರರಿಗೆ ಕಬ್ಬಿನ ಬಾಕಿ ನೀಡದೆ ಸತಾಯಿಸುತ್ತಿದ್ದಾರೆ. ರೈತರಿಗೆ ಬಿಲ್ ಸಂದಾಯವಾಗುವವರೆಗೆ ಕಾರ್ಖಾನೆ ಆವರಣದಲ್ಲಿ ಯಾವುದೇ ರೀತಿ ಚಟುವಟಿಕೆ ನಡೆಸುವಂತಿಲ್ಲ.

    ಕಾವಲು ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ, ಆಡಳಿತ ಮಂಡಳಿ ಪರವಾದ ಗುಂಪೊಂದು ನ್ಯಾಯಾಲಯದ ಆದೇಶವನ್ನೇ ಗಾಳಿಗೆ ತೂರಿ ಕಾರ್ಖಾನೆ ಚಟುವಟಿಕೆ ಕೈಗೊಳ್ಳುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಈ ಚಟುವಟಿಕೆಗಳನ್ನು ತಡೆಯಬೇಕು.

    ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಚೂನಪ್ಪ ಪೂಜಾರಿ, ಪರಮೇಶ್ವರ ಮುಳ್ಳೂರು, ಮಲ್ಲಿಕಾರ್ಜುನ ರಾಮದುರ್ಗ, ರವಿ ಸಿದ್ದಮ್ಮನವರ, ಯಲ್ಲಪ್ಪ ದೊಡ್ಡಮನಿ, ಶಿವಾನಂದ ದೊಡವಾಡ, ಸುರೇಶ ಗುಂಜೇರಿ, ಈರಣ್ಣ ರಾಜನಾಳ ಇತರ‌್ಟರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts