More

    ಬಸ್, ನಿಲ್ದಾಣಗಳಲ್ಲಿ ಪರಸ್ಪರ ಅಂತರ ಮಾಯ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಬಸ್​ಗಳಲ್ಲಿ ಪರಸ್ಪರ ಅಂತರ ಮಾಯವಾಗಿದ್ದು, ಇಲ್ಲಿನ ಹಳೆಯ ಬಸ್ ನಿಲ್ದಾಣದಲ್ಲಿ ಮಾರ್ಗದರ್ಶನ, ಸಲಹೆ ನೀಡುವವರು ಇಲ್ಲವಾಗಿದ್ದಾರೆ.

    ನಗರ ಸಾರಿಗೆ ಬಸ್​ಗಳನ್ನು ಕಂಡಕೂಡಲೇ ಜನರು ಸೀಟ್​ಗಾಗಿ ಮುಗಿ ಬೀಳುತ್ತಿದ್ದಾರೆ. ಸೀಟ್​ಗಳಲ್ಲಿ ಪರಸ್ಪರ ಅಂತರವಿಲ್ಲ. ಮಾಸ್ಕ್ ಧರಿಸಿದವರೂ ಕಂಡಬರುತ್ತಿಲ್ಲ. ಕೆಲವರು ನಿಂತು ಹೋಗುತ್ತಿದ್ದು, ನಿಗದಿತ ಸ್ಥಳ ಭರ್ತಿ ಇಲ್ಲಿ ಪಾಲನೆಯಾಗುತ್ತಿಲ್ಲ. ಇದರಿಂದಲೂ ಕರೊನಾ ಸೋಂಕು ಎಲ್ಲರಿಗೂ ಹರಡಿದರೆ ಹೇಗೆ ? ಎಂಬ ಆತಂಕ ಕೆಲ ಪ್ರಯಾಣಿಕರದು. ಹೊಸ ಬಸ್ ನಿಲ್ದಾಣದಿಂದ ಇತರ ಊರುಗಳಿಗೆ ತೆರಳಲು ಬಸ್​ಗಳನ್ನು ಬಿಡಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಬೆಳಗ್ಗೆಯಿಂದ ಬಸ್​ಗಳು ಓಡಾಡುತ್ತಿವೆ. ಬೆರಳೆಣಿಕೆಯ ಪ್ರಯಾಣಿಕರಿದ್ದರೂ ಬಸ್​ಗಳನ್ನು ಬಿಡಲಾಗುತ್ತಿದೆ.

    94 ಬಸ್ ಓಡಾಟ: ಹುಬ್ಬಳ್ಳಿ ಗ್ರಾಮಾಂತರ ಸಾರಿಗೆ ವಿಭಾಗದಿಂದ 94 ಬಸ್​ಗಳು ಗುರುವಾರ ಕಾರ್ಯಾಚರಿಸಿವೆ. ಬೆಂಗಳೂರು 16, ಬೆಳಗಾವಿ 7, ಹಾವೇರಿ 8, ಹಾನಗಲ್ 2, ವಿಜಯಪುರ 7, ಬಾಗಲಕೋಟೆ 7, ಗಂಗಾವತಿ 2, ಗದಗ 9, ಲಕ್ಷೆ್ಮೕಶ್ವರ 1, ಶಿರಸಿ 3 ಹಾಗೂ ಧಾರವಾಡ ಜಿಲ್ಲೆಯೊಳಗೆ 32 ಬಸ್​ಗಳು ಸಂಚರಿಸಿವೆ ಎಂದು ಪ್ರಕಟಣೆ ತಿಳಿಸಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts