More

    ಬದುಕಿಗೆ ಶರಣದ ಚಿಂತನೆ ಮಾರ್ಗದರ್ಶನ

    ಕಡೂರು: ಜಗಜ್ಯೋತಿ ಬಸವಣ್ಣನವರು ಜಾತ್ಯತೀತ ಮನೋಭಾವವನ್ನು ಸಮಾಜಕ್ಕೆ ಕೊಡುಗೆ ನೀಡಿದರು. ಮೌಢ್ಯ ತಡೆಗೆ ಅವರು ನೀಡಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

    ವಕೀಲ ಕೆ.ಎನ್.ಬೊಮ್ಮಣ್ಣ ಅವರ ನಿವಾಸದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಶುಕ್ರವಾರ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮ ಸಮಾಜ ನಿರ್ವಣಕ್ಕೆ ಶರಣರ ಚಿಂತನೆಗಳು ಮಾರ್ಗದರ್ಶಕವಾಗಿವೆ. ಈ ಹಿನ್ನೆಲೆಯಲ್ಲಿ ಮನೆಯಂಗಳದ ಕಾರ್ಯಕ್ರಮ ಮೂಲಕ ಸಂದೇಶಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದರು.

    ಸಾಹಿತಿ ಹೊಸೂರು ಪುಟ್ಟರಾಜು ಮಾತನಾಡಿ, 12ನೇ ಶತಮಾನದ ಶರಣರ ವಚನಗಳು ಈಗಿನ ಕಾಲಘಟ್ಟಕ್ಕೂ ಅನ್ವಯವಾಗಲಿವೆ. ಜನರಲ್ಲಿ ಸಾತ್ವಿಕ ಮನೋಭಾವ ಬೆಳೆಸಲು ವಚನಗಳ ಸಾರವನ್ನು ಪಸರಿಸಲು ಶರಣ ಸಾಹಿತ್ಯ ಪರಿಷತ್ ಶ್ರಮವಹಿಸಬೇಕಿದೆ ಎಂದು ಹೇಳಿದರು.

    ತಾಲೂಕು ನೂತನ ಅಧ್ಯಕ್ಷರಾಗಿ ಸೇವಾದೀಕ್ಷೆ ಪಡೆದ ಅಣ್ಣೀಗೆರೆ ವೀರೂಪಾಕ್ಷಪ್ಪ ಮಾತನಾಡಿ, ಮನೆಯಂಗಳದಲ್ಲಿ ಕಾರ್ಯಕ್ರಮ ಮೂಲಕ ಶರಣ ಸಂದೇಶಗಳನ್ನು ತಿಳಿಸುವುದು, ಆದರ್ಶಮಯ ಬದುಕಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಕಾರ್ಯಕ್ರಮ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts