More

    ಬಂಜಾರ ನಿಗಮಕ್ಕೆ ಅನುದಾನ ಬಿಡುಗಡೆ

    ಹುಬ್ಬಳ್ಳಿ: ಬಂಜಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಆಲ್ ಇಂಡಿಯಾ ಬಂಜಾರ ಸೇವಾ ಸಂಘ ರಾಜ್ಯ ಘಟಕದ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆ, ನೂತನ ಕಾರ್ಯಾಲಯದ ಉದ್ಘಾಟನೆ ಹಾಗೂ ಕೆಎಎಸ್​ಗೆ ಹೊಸದಾಗಿ ಆಯ್ಕೆಗೊಂಡ ಬಂಜಾರ ಅಧಿಕಾರಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಈ ಹಿಂದಿನ ಬಿಜೆಪಿ ಸರ್ಕಾರ 700-800 ಕೋಟಿ ರೂ.ಗಳನ್ನು ನಿಗಮಕ್ಕೆ ನೀಡಿದೆ. ಈ ಬಾರಿಯೂ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಯವರೊಂದಿಗೆ ರ್ಚಚಿಸಲಾಗುವುದು. ಬಂಜಾರಾ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

    1994-95ರಲ್ಲಿ ಹುಬ್ಬಳ್ಳಿ ಕುಸುಗಲ್ಲ ರಸ್ತೆಯಲ್ಲಿದ್ದ ಬಂಜಾರಾ ಸಮುದಾಯದ ಗುಡಿಸಲುಗಳನ್ನು ತೆರವುಗೊಳಿಸಲಾಗಿತ್ತು. ಆ ಸಮಯದಲ್ಲಿ ಗೋಕುಲ ಗ್ರಾಮದ ಬಳಿ 10 ಎಕರೆ ಜಮೀನಿನನ್ನು ಬಂಜಾರಾ ಸಮುದಾಯಕ್ಕೆ ನೀಡಲಾಗಿತ್ತು. 400ಕ್ಕೂ ಹೆಚ್ಚು ಕುಟುಂಬಗಳು ಅಲ್ಲಿ ನೆಲೆಸಿದ್ದು, ರಾಜ್ಯದಲ್ಲಿಯೇ ಮಾದರಿಯಾದ ಬಂಜಾರಾ ಕಾಲನಿ ನಿರ್ವಣಗೊಂಡಿದೆ ಎಂದು ಹೇಳಿದರು.

    ರಾಜಸ್ಥಾನ ಜೋಧಪುರದ ಶ್ರೀ ಚೈತನ್ಯಗಿರಿ ಮಹಾರಾಜ ಹಾಗೂ ಹುಬ್ಬಳ್ಳಿಯ ಶ್ರೀ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ರಾಷ್ಟ್ರೀಯ ಅಧ್ಯಕ್ಷ ಅಮರಸಿಂಗ್ ತಿಲಾವತ, ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕ ಮನೋಹರ ಐನಾಪುರ, ವಿಧಾನ ಪರಿಷತ್ ಮಾಜಿ ಸದಸ್ಯೆ ಜಲಜಾ ನಾಯಕ, ಡಾ. ರಾಮಾ ನಾಯಕ, ಮಾನಸಿಂಗ್ ಚವ್ಹಾಣ, ಆರ್.ಟಿ. ರಾಠೋಡ ಮತ್ತಿತರರಿದ್ದರು.

    ರಾಷ್ಟ್ರೀಯ ಬಂಜಾರ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹ

    ಹುಬ್ಬಳ್ಳಿ: ದೇಶದ ಬಂಜಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ರಾಷ್ಟ್ರೀಯ ಬಂಜಾರ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ಅಧ್ಯಕ್ಷ ಅಮರಸಿಂಗ್ ತಿಲಾವತ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ 13 ಕೋಟಿ ಜನಸಂಖ್ಯೆ ಇದೆ. 22 ರಾಜ್ಯಗಳಲ್ಲಿ 27 ಹೆಸರಿನ ಈ ಸಮುದಾಯದವರು ಒಂದೇ ಭಾಷೆ ಮಾತನಾಡುತ್ತಾರೆ. ಬಂಜಾರ ಸಮಾಜದ ಕಲೆ, ಸಂಸ್ಕೃತಿ, ಸಂಪ್ರದಾಯ ಉಳಿಯಬೇಕೆಂದರೆ ಬಂಜಾರ ಭಾಷೆಗೆ ಮಾನ್ಯತೆ ಸಿಗಬೇಕು. ಶೀಘ್ರವೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಯೋಗ ಭೇಟಿಯಾಗಲಿದೆ. ದೆಹಲಿಯಲ್ಲಿ ಬಂಜಾರ ಭವನ ನಿರ್ವಿುಸಿ ನಮ್ಮ ಸಂಸ್ಕೃತಿ ಉಳಿಯಲು ವಸ್ತು ಸಂಗ್ರಹಾಲಯ ಸ್ಥಾಪನೆ ಕುರಿತು ಮನವಿ ಮಾಡಲಾಗುವುದು ಎಂದರು.

    ರಾಜ್ಯದ 4,488ರಲ್ಲಿ 1,345 ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಲಾಗಿದ್ದು, ಅನುಷ್ಠಾನಗೊಳಿಸಿಲ್ಲ. 30 ದಿನಗಳೊಳಗೆ ಅನುಷ್ಠಾನಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಕಂದಾಯ ಸಚಿವರ ಮನೆ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಪ್ರತಿ ವರ್ಷ 500 ಕೋಟಿ ರೂ. ನೀಡಲು ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಏಪ್ರಿಲ್​ನಲ್ಲಿ ದೆಹಲಿಯಲ್ಲಿ ಬಂಜಾರ ಸಮಾಜದ ಮಹಾ ಅಧಿವೇಶನ ಹಾಗೂ ಬಂಜಾರ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts