More

    ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

    ಮಂಡ್ಯ: ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿರುವ ಐದು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಚಾಲನೆ ನೀಡಿದರು.


    ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜ.26ರಿಂದ 30 ರವರೆಗೆ ಪ್ರದರ್ಶನ ನಡೆಯಲಿದೆ. ವೈವಿಧ್ಯಮಯ ಅಲಂಕಾರಿಕ ಹೂಕುಂಡಗಳು ಮತ್ತು ಹೂವಿನ ಪಿರಮಿಡ್‌ಗಳ ಜೋಡಣೆ, 25ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಪೆಟೊನಿಯಾ, ಅಂಟಿರೈನಂ, ಸಾಲ್ವಿಯಾ, ಸೆಲೋಶಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಗುಲಾಬಿ, ಪಾಯ್ನಿಸೆಟಿಯಾ ಮತ್ತು ಇತರ ವರ್ಣದ 20 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಹೂ ಕುಂಡಗಳನ್ನು ವಿವಿಧ ವಿನ್ಯಾಸಗಳಲ್ಲಿ ಜೋಡಣೆ ಮಾಡಿ ಪ್ರದರ್ಶಿಸಲಾಗಿದೆ.


    ಜಿಲ್ಲೆಯ ನೋಂದಾಯಿತ ಬೋನ್ಸಾಯ್ ಕ್ಲಬ್ನ ಸದಸ್ಯರು ಅಭಿವೃದ್ಧಿಪಡಿಸಿರುವ ವಿವಿಧ ಬಗೆಯ ಫೈಕಸ್ ಮತ್ತು ಬೋನ್ಸಾಯ್ ಗಿಡಗಳ ಪ್ರದರ್ಶನ, ನುರಿತ ತರಕಾರಿ ಕೆತ್ತನೆ ತಜ್ಞರಾದ ಹರೀಶ್ ಬ್ರಹ್ಮಾವರ್ ಮತ್ತು ತಂಡದವರಿಂದ ಕಲ್ಲಂಗಡಿ, ಕುಂಬಳ, ಕ್ಯಾರೆಟ್ ಮತ್ತು ಇತರ ತರಕಾರಿಗಳಲ್ಲಿ ವಿವಿಧ ಆಕೃತಿಗಳನ್ನು ಕೆತ್ತನೆ ಮಾಡಿ ಅಲಂಕಾರಿಕವಾಗಿ ಜೋಡಣೆ ಮಾಡಲಾದ ಪ್ರದರ್ಶನ ಸಾರ್ವಜನಿಕರನ್ನು ಸೆಳೆಯುತ್ತಿದೆ.
    ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಕೃಷಿ ಇಲಾಖೆ ಆತ್ಮ ಯೋಜನೆ ಹಾಗೂ ವಿಕಸನ ಸಂಸ್ಥೆ ಸಹಯೋಗದೊಂದಿಗೆ ಬೆಲ್ಲ, ರಾಗಿ, ಅಕ್ಕಿ ಮತ್ತು ಇತರ ಉತ್ಪನ್ನಗಳ ರಿಟೇಲ್ ಬ್ರಾೃಂಡ್ ಮೇಳ ಆಯೋಜಿಸಲಾಗಿದೆ.


    ಕೌಶಲಾಭಿವೃದ್ಧಿ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಸ್ವಸಹಾಯ ಗುಂಪುಗಳು ಹಾಗೂ ನಲ್ಮ್ ಯೋಜನೆಯಡಿ ನುರಿತ ಕೌಶಲಾಭಿವೃದ್ಧಿ ತರಬೇತಿ ಪಡೆದ ಸದಸ್ಯರು ಅಭಿವೃದ್ಧಿಪಡಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲಾಗಿದೆ. ಇತ್ತ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮೇಳ, ಕಬ್ಬಿನ ಬೇಸಾಯ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ಪ್ರಾತ್ಯಕ್ಷಿಕೆ, ಮೀನುಗಾರಿಕೆ ಇಲಾಖೆಯಿಂದ ವಿವಿಧ ಅಲಂಕಾರಿಕ ಮೀನುಗಳ ಪ್ರದರ್ಶನ ಏರ್ಪಡಿಸಲಾಗಿದೆ.


    ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಎಸ್ಪಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕ ಎನ್.ಸಿ.ಶಶಿಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts