More

    ಪ್ರತಿಯೊಬ್ಬರಿಗೆ ಕಾನೂನು ಮಾಹಿತಿ ಅಗತ್ಯ

    ಅಥಣಿ ಗ್ರಾಮೀಣ, ಬೆಳಗಾವಿ: ಪ್ರತಿಯೊಬ್ಬರು ಕಾನೂನು ಮಾಹಿತಿ ಪಡೆದರೆ ಕೋರ್ಟ್‌ಗೆ ಬರುವುದು ತಪ್ಪಿಸಬಹುದು ಎಂದು ಅಥಣಿ ಜೆಎಂಎಫ್‌ಸಿ ಮತ್ತು ಪ್ರಧಾನ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೆರೊಟ್ಟಿ ಹೇಳಿದರು.

    ಅಥಣಿ ತಾಲೂಕಿನ ನಂದಗಾಂವ ಗ್ರಾಪಂನಲ್ಲಿ ಅಥಣಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜವಾಬ್ದಾರಿ ಮರೆತು ಕಾನೂನು ಸಮರ್ಪಕವಾಗಿ ಪಾಲನೆ ಮಾಡದಿರುವುದರಿಂದ ಅಪರಾಧ, ಕಾನೂನು ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಮನುಷ್ಯ ಹುಟ್ಟುವ ಮುನ್ನ ಭ್ರೂಣದಿಂದ ಹಿಡಿದು ಸಾಯುವವರೆಗೂ ಕಾನೂನು ಅನ್ವಯವಾಗುತ್ತದೆ ಎಂದರು.

    ಸಾಮಾನ್ಯ ವ್ಯಕ್ತಿ ನ್ಯಾಯದಿಂದ ವಂಚಿತವಾಗಬಾರದು. ಜನರಲ್ಲಿ ಕಾನೂನಿನ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ಬಂದಿದೆ ಎಂದು ತಿಳಿಸಿದರು.

    ವಕೀಲ ವಿ.ಟಿ.ಬಿದರಿ ಮಾತನಾಡಿ, ಕಾನೂನು ಕಾಯ್ದೆಗಳು ಮನುಷ್ಯನ ರಕ್ಷಣೆಯ ಆಯುಧಗಳು. ಇವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆ ಹೊರತು ದುರ್ಬಳಕೆ ಮಾಡಿಕೊಳ್ಳಬಾರದು. ಜ್ಞಾನದ ಕೊರತೆಯಿಂದ
    ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿವೆ. ಇದರಿಂದ ದೂರ ಉಳಿಯಬೇಕಾದರೆ ಕನಿಷ್ಠ ಕಾನೂನು ಅರಿವು ಹೊಂದಬೇಕು ಎಂದು ತಿಳಿಸಿದರು.

    ತಾಲೂಕು ವಕೀಲ ಸಂಘದ ಅಧ್ಯಕ್ಷ ಎಸ್.ಜಿ.ಪೂಜಾರಿ, ಎಸ್.ಎಸ್.ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುರೇಖಾ ಹುಡೇದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಸುರೇಶ ಮುಂಜೆ, ವಕೀಲರಾದ ವಿ.ಎಸ್. ಪಾಟೀಲ, ಶಾರದಾ ಗಲಗಲಿ, ರೇಖಾ ಕುಳ್ಳೊಳ್ಳಿ, ಅರುಣ ಮೇಲ್ಗಡೆ, ಪಿಡಿಒ ವಿನೋದ ಪಾಯಕ, ಬಸಪ್ಪ ಗುಟಿ, ರಾವಸಾಬ ಪಾಟೀಲ, ದಲೀಪ ಕಾಂಬಳೆ, ಪ್ರಕಾಶ ಮೋಹಿತೆ, ಮಲ್ಲಪ್ಪ ಹುಡೇದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts