More

    ಪೌಷ್ಟಿಕ ಆಹಾರದಂತೆ ಲಸಿಕೆ ಕೊಡಿಸಿ -ದಾವಣಗೆರೆಯಲ್ಲಿ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ

    ದಾವಣಗೆರೆ: ಮಗು ಆರೋಗ್ಯವಾಗಿರಲು ಪೌಷ್ಟಿಕ ಆಹಾರದಂತೆ ಲಸಿಕೆ ಕೊಡಿಸುವುದು ಸಹ ಮುಖ್ಯ ಎಂದು ನಗರ ಕುಟುಂಬ ಕಲ್ಯಾಣ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಎಂ.ರಾಘವೇಂದ್ರ ಹೇಳಿದರು.
    ರಾಮನಗರದ ನಗರ ಕುಟುಂಬ ಕಲ್ಯಾಣ ಕೇಂದ್ರ-3ರ ವ್ಯಾಪ್ತಿಯ ಬಸವ ಬುದ್ಧ ಭೀಮ ನಗರ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಎರಡನೇ ಸುತ್ತಿನ ತೀವ್ರತರ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಲಸಿಕೆ ವಂಚಿತ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರನ್ನು ಗುರುತಿಸಿ ಚುಚ್ಚುಮದ್ದು ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ. ಇದರಿಂದ ಇಂದಿನ ಆರೋಗ್ಯವಂತ ಮಗು ಭವಿಷ್ಯದಲ್ಲಿ ಆದರ್ಶ ಪ್ರಜೆಯಾಗಲಿದೆ ಎಂದು ತಿಳಿಸಿದರು.
    ದೇಶಾದ್ಯಂತ ಸೆ.11ರಿಂದ 16ರ ವರೆಗೆ ಎರಡನೇ ಸುತ್ತಿನ ಕಾರ್ಯಕ್ರಮ ನಡೆಯುತ್ತಿದ್ದು, ಸರ್ಕಾರ ಪ್ರತಿ ಮಗು 12 ಮಾರಕ ರೋಗಗಳಿಗೆ ತುತ್ತಾಗದಂತೆ ತಡೆಗಟ್ಟುವ ಜತೆಗೆ ದಡಾರ ಮತ್ತು ರುಬೆಲ್ಲಾ ಮಾರಕ ರೋಗಗಳ ನಿರ್ಮೂಲನೆಯತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಆರೋಗ್ಯ ಕಾರ್ಯಕ್ರಮ ಯಶಸ್ವಿಯಾಗಲು ಸಮುದಾಯದ ಸಹಭಾಗಿತ್ವ ಬಹಳ ಮುಖ್ಯ ಎಂದರು.
    ಯು ವಿನ್ ತಂತ್ರಾಂಶದಲ್ಲಿ ಲಸಿಕೆ ಹಾಕಿಸಿಕೊಂಡ ಮಗುವಿನ ವಿವರ ನಮೂದಿಸಲಾಗುವುದು. ಪ್ರಮಾಣ ಪತ್ರ ಸಹ ಪಡೆಯಬಹುದು ಎಂದು ತಿಳಿಸಿದರು.
    ಪಾಲಿಕೆ ಸದಸ್ಯೆ ಗೀತಾ ಕುಂಬಾರ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ. ವಿನೋದಮ್ಮ, ವಿ.ಇ. ನಂದಿನಿ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಆರೋಗ್ಯ ಸಮಿತಿ ಅಧ್ಯಕ್ಷರು, ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts