More

    ಪೊಲೀಸ್ ಸಿಬ್ಬಂದಿಗೆ ನಗದು ಬಹುಮಾನ

    ಕಾರವಾರ: ಉತ್ತಮವಾಗಿ ಕಾರ್ಯನಿರ್ವಹಿಸಿದ ಜಿಲ್ಲೆಯಲ್ಲಿ 11 ಪೊಲೀಸ್ ಅಧಿಕಾರಿಗಳು ಹಾಗೂ 41 ಸಿಬ್ಬಂದಿಗೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರವನ್ನು ನೀಡಿದ್ದಾರೆ.

    ಬೀಟ್ ವ್ಯವಸ್ಥೆ, ಮಾದಕ ದ್ರವ್ಯ ಪ್ರಕರಣ ಪತ್ತೆ ಹಾಗೂ ಲೋಕ ಅದಾಲತ್​ನಲ್ಲಿ ಪ್ರಕರಣಗಳನ್ನು ಇತ್ಯರ್ಥ ವಿಷಯಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಗೋಕರ್ಣ ಪಿಎಸ್​ಐ ನವೀನ ನಾಯ್ಕ ಹಾಗೂ 10 ಸಿಬ್ಬಂದಿ ತಂಡ, ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳಿ, ಪಿಎಸ್​ಐ ಯಲ್ಲಪ್ಪ ಎಸ್., ಮಹಿಳಾ ಪಿಎಸ್​ಐ ಮಾದೇವಿ ನಾಯ್ಕೋಡಿ, ಎಎಸ್​ಐ ಬಸವರಾಜ ಒಕ್ಕುಂದ ಹಾಗೂ 9 ಸಿಬ್ಬಂದಿ, ಶಿರಸಿ ನಗರ ಪಿಎಸ್​ಐ ಶಿವಾನಂದ ನಾವದಗಿ, ಎಎಸ್​ಐ ವಿ.ಜಿ.ರಾಜೇಶ, ಹಾಗೂ ನಾಲ್ವರು ಸಿಬ್ಬಂದಿಗೆ, ಜಿಲ್ಲಾ ಅಪರಾಧ ಗುಪ್ತವಾರ್ತೆ ದಳದ ಇನ್ಸ್​ಪೆಕ್ಟರ್ ನಿಶ್ಚಲಕುಮಾರ್ ಹಾಗೂ ಮೂವರು ಸಿಬ್ಬಂದಿಗೆ ಮಾದಕ ದ್ರವ್ಯ ಪ್ರಕರಣ ಭೇದಿಸಿದ್ದಕ್ಕಾಗಿ ಬಹುಮಾನ ನೀಡಿದ್ದಾರೆ.

    ಲೋಕ ಅದಾಲತ್​ನಲ್ಲಿ ಪ್ರಕರಣ ಇತ್ಯರ್ಥ ಮಾಡಿದ್ದಕ್ಕಾಗಿ ದಾಂಡೇಲಿ ಗ್ರಾಮೀಣ ಪಿಎಸ್​ಐ ಹನುಮಂತ ಬಿರಾದಾರ, ಸಿದ್ದಾಪುರ ಪಿಎಸ್​ಐ ಪ್ರಕಾಶ, ಶಿರಸಿ ನಗರ ಪಿಎಸ್​ಐ ಶಿವಾನಂದ ನಾವಗಿ ಹೊನ್ನಾವರ ಪಿಎಸ್​ಐ ಅಶೋಕ ಕುಮಾರ್ ಹಾಗೂ 18 ಸಿಬ್ಬಂದಿಗೆ ಬಹುಮಾನ ಘೊಷಿಸಲಾಗಿದೆ ಎಂದು ಎಸ್​ಪಿ ಕಚೇರಿ ಪ್ರಕಟಣೆ ತಿಳಿಸಿದೆ.

    ಐವರಿಗೆ ಗೌರವ: ಹೊಸ ಬೀಟ್ ವ್ಯವಸ್ಥೆಯಂತೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಶಿರಸಿ ಗ್ರಾಮೀಣ ಠಾಣೆಯ ರಮೇಶ ಮುಚ್ಚುಂಡಿ, ದಾಂಡೇಲಿ ನಗರ ಠಾಣೆಯ ಮಲ್ಲಿಕಾರ್ಜುನ ಸೌದತ್ತಿ, ಹಳಿಯಾಳದ ಎಂ.ಎಂ. ಮುಲ್ಲಾ, ಕಾರವಾರದ ಶಿವಾನಂದ ಆರ್.ಕಲ್ಗುಟಕರ್, ಗೋಕರ್ಣದ ಸಚಿನ್ ನಾಯ್ಕ ಅವರಿಗೆ ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts