More

    ಪೊಲೀಸ್​ ಠಾಣೆಯೆದುರು ಶಾಸಕಿ ಧರಣಿ

    ಪೊಲೀಸ್​ ಠಾಣೆಯೆದುರು ಶಾಸಕಿ ಧರಣಿ
    ಬೆಂಬಲಿಗರ ಮನೆಗಳ ಮೇಲೆ ಪೊಲೀಸರ ದಾಳಿ ವಿರೋಧಿಸಿ ಬೇತಮಂಗಲ ಪೊಲೀಸ್​ ಠಾಣೆ ಮುಂಭಾಗದಲ್ಲಿ ಶಾಸಕಿ ಎಂ. ರೂಪಕಲಾ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ನಗರಸಭೆ ಅಧ್ಯಕ್ಷ ವಳ್ಳಾಲ್​ ಮುನಿಸ್ವಾಮಿ, ಕೆಪಿಸಿಸಿ ಸದಸ್ಯರಾದ ದುರ್ಗಾಪ್ರಸಾದ್​, ಬೇತಮಂಗಲ ಸೊಸೈಟಿ ಅಧ್ಯಕ್ಷ ಪ್ರಸನ್ನ ಇತರರ ಇದ್ದರು.

    ಬೇತಮಂಗಲ: ಕೆಜಿಎಫ್​​ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದ ಆಹಾರ ಕಿಟ್​ ವಿತರಿಸಲು ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಲಾಗುತ್ತಿದೆ ಎಂದು ತಮ್ಮ ಬೆಂಬಲಿಗರ ಮನೆಗಳು ಮತ್ತು ವಿವಿಧ ಶೆಡ್​ ಗಳ ಮೇಲೆ ಪೊಲೀಸರು ದಾಳಿ ನಡೆಸಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಶಾಸಕಿ ಎಂ. ರೂಪಕಲಾ ಬೇತಮಂಗಲ ಪೊಲೀಸ್​ ಠಾಣೆ ಮುಂಭಾಗದಲ್ಲಿ ಶುಕ್ರವಾರ ಸುಮಾರು ಆರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
    ಈ ಸಂದರ್ಭದಲ್ಲಿ ವ್ಯವಸ್ಥೆಯ ವಿರುದ್ಧ ಶಾಸಕಿ ಗುಡುಗಿದರು. ೇತ್ರದಲ್ಲಿ ಬಹುತೇಕ ಜನರು ಬಡವರಿದ್ದಾರೆ. ಯುಗಾದಿ ಮತ್ತು ಮುಂದೆ ಬರಲಿರುವ ರಂಜಾನ್​ ಹಬ್ಬಕ್ಕಾಗಿ ಆಹಾರ ಕಿಟ್​ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಕೋಲಾರದಲ್ಲಿ ಅಧಿಕಾರಿಗಳು ಅಕ್ರಮವಾಗಿ, ಅನ್ಯಾಯವಾಗಿ ಕಿಟ್​ಗಳನ್ನು ವಶಪಡಿಸಿಕೊಂಡರು. ಕನಿಷ್ಠ ಅದನ್ನು ಜೋಪಾನವಾಗಿ ಸಂರಣೆ ಮಾಡದ ಕಾರಣ ಬಡವರಿಗೆ ಸಿಗಬೇಕಾದ ಆಹಾರ ಪದಾರ್ಥಗಳನ್ನು ನೀರುಪಾಲು, ಮಣ್ಣುಪಾಲು ಮಾಡಿದ್ದಾರೆ. ಇಂತಹ ವ್ಯವಸ್ಥೆ ಕಲ್ಪಿಸಿರುವ ಸರ್ಕಾರ ಮತ್ತು ಅವರ ಕೈಗೊಂಬೆಗಳಾಗಿರುವ ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
    ಪಕ್ಷದ ಕಾರ್ಯಕರ್ತರು ವೃತ್ತಿಗಳನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಅಂತಹವರ ಮನೆಗಳು, ಶೆಡ್​ಗಳು, ತೋಟದ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದರಿಂದಾಗಿ ಅವರ ಕುಟುಂಬಗಳು ಭಯಬೀತವಾಗಿವೆೆ. ಎಲ್ಲಿಯೂ ಏನೂ ಸಿಕ್ಕಿಲ್ಲ ಎಂಬ ಕಾರಣಕ್ಕೆ ವರ್ತಕರೊಬ್ಬರು ಹಬ್ಬಕ್ಕಾಗಿ ದಾಸ್ತಾನು ಮಾಡಿದ್ದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಜನರಿಗೆ ರಣೆ ನೀಡಬೇಕಾದ ರಕರು ಯಾರನ್ನೋ ಮೆಚ್ಚಿಸಲು ಭಕರಾದರೆ ಅವರು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು? ನಮ್ಮ ಜನರಿಗೆ ತೊಂದರೆ ಕೊಟ್ಟವರನ್ನು ಸುಮ್ಮನೆ ಬಿಡಲ್ಲ ಎಂದು ಶಾಸಕಿ ಎಚ್ಚರಿಸಿದರು.


    ನೆಲದಲ್ಲೆ ಪ್ರತಿಭಟನೆಗೆ ಕುಳಿತ ರೂಪಕಲಾ: ಕಾರ್ಯಕರ್ತರ ನೋವು, ಆಕ್ರೋಶಕ್ಕೆ ಸ್ಪಂದಿಸಿದ ರೂಪಕಲಾ ನೂರಾರು ಕಾರ್ಯಕರ್ತರ ಜತೆ ಠಾಣೆಯ ಮುಂಭಾಗದಲ್ಲಿ ನೆಲದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಆರು ತಾಸುಗಳ ನಂತರ ಠಾಣೆಯಿಂದ ಹೊರಬಂದ ಡಿವೈಎಸ್ಪಿ ರಮೇಶ್​ ಶಾಸಕಿ ಎಂ.ರೂಪಕಲಾ ಅವರೊಂದಿಗೆ ಮಾತುಕತೆ ನಡೆಸಿದರು. ಚುನಾವಣಾ ಆಯೋಗ ಮತ್ತು ಪೊಲೀಸ್​ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಕಾನೂನು ರೀತಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
    ಬಳಿಕ ಮಾತನಾಡಿದ ಶಾಸಕಿ, ಇಡೀ ರಾಜ್ಯದಲ್ಲಿ ಒಂದೇ ಕಾನೂನು ಪಾಲಿಸುತ್ತಿದ್ದಾರಾ, ನಮ್ಮ ೇತ್ರದ ಮೇಲೆ ಏಕೆ ಈ ರೀತಿ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿದ್ದೀರಿ. ರಾಜ್ಯಮಟ್ಟದಲ್ಲಿ ನಮ್ಮ ನಾಯಕರಿಗೆ ಇಲ್ಲಿನ ಪರಿಸ್ಥಿತಿ ತಿಳಿಸುತ್ತೇನೆ. ದಬ್ಬಾಳಿಕೆ ನಡೆಸಿರುವ ಅಧಿಕಾರಿಗಳನ್ನು ಅಮಾನತುಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ವಾಪಸ್​ ಪಡೆದರು.


    ಏನೇನಾಯಿತು?: ಫುಡ್​ಕಿಟ್​ಗಳನ್ನು ಕೆಲವು ಮುಖಂಡರ ನೇತೃತ್ವದಲ್ಲಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಮಾಹಿತಿಗಳನ್ನು ಆಧರಿಸಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಧರಣಿದೇವಿ ಮಾರ್ಗದರ್ಶನದಲ್ಲಿ ಎರಡು ದಿನಗಳಿಂದ ಅನುಮಾನ ಬಂದ ಮನೆಗಳು, ಕೋಳಿ ಫಾಮ್​ರ್, ಶೆಡ್​ಗಳಲ್ಲಿ ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ದಾಸ್ತಾನು ಸಿಕ್ಕಿರಲಿಲ್ಲ. ಗುರುವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಬೇತಮಂಗಲ ಸರ್ಕಲ್​ ಇನ್​ಸ್ಪೆಕ್ಟರ್​ ಸುರೇಶ್​ ರಾಜು ನೇತೃತ್ವದ ತಂಡ ಬೇತಮಂಗಲದ ವಿನು ಕಾರ್ತಿಕ್​ ಎನ್ನುವವರ ಗೋದಾಮು ಮೇಲೆ ದಾಳಿ ನಡೆಸಿದಾಗ ಯುಗಾದಿ ಹಬ್ಬಕ್ಕೆ ಉಪಯೋಗಿಸುವ ಬೆಲ್ಲ, ಮೈದಾ, ಬೇಳೆ ಸೇರಿದಂತೆ ಆಹಾರ ಪದಾರ್ಥಗಳ ಮೂಟೆಗಳ ದಾಸ್ತಾನು ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ. ಗೋದಾಮನ್ನು ವಶಕ್ಕೆ ಪಡೆದ ಇನ್​ಸ್ಪೆಕ್ಟರ್​ ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಗಿದೆ ಎಂದು ಅದರ ಮಾಲೀಕ ವಿನು ಕಾರ್ತಿಕ್​ ವಿರುದ್ಧ ದೂರು ದಾಖಲಿಸಲು ಬೇತಮಂಗಲ ಪೊಲೀಸರು ಸಿದ್ಧವಾಗುತ್ತಿದ್ದಂತೆ ಕಾಂಗ್ರೆಸ್​ ಕಾರ್ಯಕರ್ತರು ಶುಕ್ರವಾರ ಪೊಲೀಸ್​ ಠಾಣೆಯ ಮುಂದೆ ಜಮಾಯಿಸತೊಡಗಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಸಕಿ ರೂಪಕಲಾ ಠಾಣೆಯ ಬಳಿ ಬಂದು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಠಾಣೆಯಲ್ಲಿ ದೂರು ದಾಖಲು: ಶಾಸಕರು ಪ್ರತಿಭಟನೆಗೆ ಕುಳಿತಿದ್ದಾರೆ, ದೂರು ದಾಖಲು ಆಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಹೊರಗಡೆ ಸುಮಾರು ಆರು ಗಂಟೆ ಕಾಲ ನೂರಾರು ಕಾರ್ಯಕರ್ತರೊಂದಿಗೆ ಧರಣಿಯಲ್ಲಿ ರೂಪಕಲಾ ಪಾಲ್ಗೊಂಡಿದ್ದರು. ಆದರೆ ಒಳಗಡೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

    ಕಾನೂನು ರೀತಿ ಕ್ರಮ: ಪ್ರತಿಭಟನೆ ನಡೆದ ಅಷ್ಟೂ ಸಮಯ ಠಾಣೆಯ ಒಳಗಡೆಯೇ ಕುಳಿತಿದ್ದ ಡಿವೈಎಸ್ಪಿ ನಿರಂತರ ಮೇಲಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಯಾವುದೇ ಪರಿಸ್ಥಿತಿ ಇದ್ದರೂ ಅಕ್ರಮ ದಾಸ್ತಾನು ಸಂಬಂಧ ದೂರು ದಾಖಲಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದ್ದು ಕೊನೆಗೂ ಪೊಲೀಸರು ದೂರು ದಾಖಲಿಸುವ ಕೆಲಸ ಮುಗಿಸಿದ್ದರು.

    ನಗರಸಭೆ ಮಾಜಿ ಅಧ್ಯಕ್ಷ ರಮೇಶ್​ ಜೈನ್​,ಕೆಪಿಸಿಸಿ ಸದಸ್ಯ ಶ್ರೀನಿವಾಸ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ರಾಧಾಕೃಷ್ಣಾರೆಡ್ಡಿ, ಪದ್ಮನಾಭರೆಡ್ಡಿ, ಪಾಪಣ್ಣ, ಗ್ರಾಪಂ ಮಾಜಿ ಅಧ್ಯ ನಾಗರಾಜ್​, ಉಪಾಧ್ಯ ನಂದೀಶ್​, ಶ್ರೀ ರಾಮಪ್ಪ, ಸದಸ್ಯರಾದ ವಿನುಕಾರ್ತಿಕ್​, ಶ್ರೀರಾಮ್​, ಸುಕನ್ಯಾಮ್ಮ, ಎಜಾಜ್​, ಸುರೇಂದ್ರಗೌಡ, ಮುಖಂಡರಾದ ಬಿ.ಎಂ. ರಾಮಚಂದ್ರ, ಎನ್​ಟಿಆರ್​ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts