More

    ಪೊಲೀಸರ ಪಾತ್ರ ಪ್ರಮುಖ

    ಶಿರಸಿ: ವಿಶ್ವದೆಲ್ಲೆಡೆ ಹರಡಿದ ಕರೊನಾ ವ್ಯಾಧಿ ರಾಜ್ಯದಲ್ಲಿ ವ್ಯಾಪಕವಾಗಿ ಹರಡದಂತೆ ತಡೆಯುವಲ್ಲಿ ಪೊಲೀಸ್ ಇಲಾಖೆ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

    ಕರೊನಾ ಸೇನಾನಿಗಳಾದ ಪೊಲೀಸರನ್ನು ಸ್ವರ್ಣವಲ್ಲೀ ಮಠದಲ್ಲಿ ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು. ಕೋವಿಡ್- 19 ಹರಡದಂತೆ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿ ಅನೇಕರು ಶ್ರಮಿಸಿದ್ದಾರೆ. ಅದರಲ್ಲಿ ಪೊಲೀಸರ ಪಾತ್ರ ಮೆಚ್ಚುವಂತಹದ್ದು ಎಂದರು.

    ಕರೊನಾ ನಿಯಂತ್ರಣಕ್ಕೆ ಮಠವೂ ತನ್ನದೇ ಆದ ಮಾರ್ಗದಲ್ಲಿ ಪ್ರಯತ್ನ ನಡೆಸಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಧಾರ್ವಿುಕ ಮಾರ್ಗದಿಂದ ರೋಗ ಮುಕ್ತರಾಗಲು ನಿರಂತರ ಹೋಮ- ಹವನಗಳನ್ನು ಮಾಡುತ್ತಿದೆ. ಪೊಲೀಸರು ಸೇರಿ ಪ್ರತಿಯೊಬ್ಬರೂ ನಿತ್ಯ ಯೋಗ, ಧ್ಯಾನ, ಪೂಜೆ ಮಾಡುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಿವೈಎಸ್​ಪಿ ಜಿ.ಟಿ. ನಾಯಕ ಮಾತನಾಡಿ, ಲಾಕ್​ಡೌನ್ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ನೀಡಿದ ಸಹಕಾರ ನಮ್ಮ ಕಾರ್ಯದಕ್ಷತೆ ಹೆಚ್ಚಿಸಿತು. ನಮ್ಮ ದೇಶದ ಧಾರ್ವಿುಕ ಪರಂಪರೆಯ ಶಕ್ತಿಯೇ ರೋಗ ನಿಯಂತ್ರಣದಲ್ಲಿರಲು ಮುಖ್ಯ ಕಾರಣ ಎಂದರು.

    ಲಾಕ್​ಡೌನ್ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಜನ ಸೇವೆ ಮಾಡಿದ ಜಾಗೃತ ನಾಗರಿಕರ ತಂಡದ ಸದಸ್ಯರು, ಸಿಪಿಐ ಬಿ.ಯು. ಪ್ರದೀಪ, ಪಿಎಸ್​ಐ ನಾಗಪ್ಪ ಬಿ., ನಂಜಾ ನಾಯ್ಕ, ಶಿವಾನಂದ ನಾವಲಗಿ, ಉಮೇಶ ಪಾವಸ್ಕರ, ರಘು ಕಾನಡೆ, ಶ್ಯಾಮ ಪಾವಸ್ಕರ ಅವರನ್ನು ಶ್ರೀಗಳು ಸನ್ಮಾನಿಸಿದರು. ಈ ವೇಳೆ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts