More

    ಪೊಲೀಸರ ಚುರುಕಿನ ಕಾರ್ಯಾಚರಣೆ

    ಕುಮಟಾ: ತಾಲೂಕಿನಲ್ಲಿ ಲಾಕ್​ಡೌನ್ ಉಲ್ಲಂಘಿಸಿ ಅನಗತ್ಯ ರಸ್ತೆಯಲ್ಲಿ ಓಡಾಡುವವರನ್ನು ಸಿಬ್ಬಂದಿ ಕೊರತೆಯ ನಡುವೆಯೂ ಪೊಲೀಸರು ಚುರುಕಿನ ಕಾರ್ಯಾಚರಣೆಗಳ ಮೂಲಕ ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ.

    ಕುಮಟಾ ಸಿಪಿಐ ಪರಮೇಶ್ವರ ಗುನಗಾ, ಪಿಎಸ್​ಐಗಳಾದ ಆನಂದಮೂರ್ತಿ, ಸುಧಾ ಅಘನಾಶಿನಿ, ಎಎಸ್​ಐ ಹಾಗೂ ಅಗತ್ಯಕ್ಕೆ ತಕ್ಕಂತೆ ಹೋಮ್ಾರ್ಡ್ ಸಹಿತ ಸುಮಾರು 50 ಸಿಬ್ಬಂದಿಯಿದ್ದಾರೆ. ಗೋಕರ್ಣಕ್ಕೆ ಪ್ರತ್ಯೇಕ ಠಾಣೆ ಹೊರತುಪಡಿಸಿ ಬೇರೆಲ್ಲೂ ಗ್ರಾಮೀಣ ಠಾಣೆಗಳಿಲ್ಲ. ಹೀಗಾಗಿ ಇರುವ ವ್ಯವಸ್ಥೆಯಲ್ಲೇ ಪ್ರತಿನಿತ್ಯ ಬೆಳಗ್ಗೆಯಿಂದ ಪಟ್ಟಣದ ಗಿಬ್ ವೃತ್ತ, ಹೆಗಡೆ ವೃತ್ತ, ಬಸ್ ನಿಲ್ದಾಣದ ಎದುರು ಹಾಗೂ ಮಾರುಕಟ್ಟೆ ಪ್ರದೇಶ ಮುಂತಾದೆಡೆ ಹಠಾತ್ ತಪಾಸಣೆಗೆ ನಿಲ್ಲುತ್ತಾರೆ. ಇದರಿಂದ ಪಟ್ಟಣದ ಒಳರಸ್ತೆಗಳ ಮೂಲಕ ಅಡ್ಡಾಡುವವರಿಗೂ ಪೊಲೀಸರ ಕಣ್ಗಾವಲು ತಪ್ಪಿಸಿ ಅಡ್ಡಾಡುವುದು ಕಷ್ಟಸಾಧ್ಯವಾಗಿ ಸಿಕ್ಕಿ ಬೀಳುವ ಭಯದಿಂದ ಅಗತ್ಯ ಅಡ್ಡಾಡುವುದು ನಿಯಂತ್ರಣವಾಗಿದೆ. ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಕರೊನಾ ತಡೆ ಕಾರ್ಯಪಡೆಗಳು ಸಕ್ರಿಯವಾಗಿ ನಿಗಾವಹಿಸಿವೆ.

    ಈವರೆಗೆ ತಪಾಸಣೆಯ ಸಂದರ್ಭದಲ್ಲಿ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ ಮೂರು ಲಘು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಸಾಗಿಸಿದ್ದಾರೆ. ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದವರಿಗೆ ಅನಿವಾರ್ಯವಾಗಿ ಬಿಸಿ ಮುಟ್ಟಿಸಿದ್ದಾರೆ. ಇದೆಲ್ಲದರ ನಡುವೆ ಸಾರ್ವಜನಿಕರಿಗೆ ಮಾನವೀಯತೆಯಿಂದ ಸಹಾಯವನ್ನೂ ಮಾಡಿದ್ದಾರೆ.

    ಕುಮಟಾದಲ್ಲಿ ಸಾರ್ವಜನಿಕರು ಲಾಕ್​ಡೌನ್ ಪಾಲನೆಯ ವಿಚಾರದಲ್ಲಿ ಉತ್ತಮವಾಗಿ ಸ್ವಯಂ ನಿಯಂತ್ರಣ ಪ್ರದರ್ಶಿಸಿದ್ದಾರೆ. ಎಲ್ಲಿಯೂ ಲಾಕ್​ಡೌನ್ ಪಾಲನೆ ನಿರತ ಪೊಲೀಸರಿಗೆ ತಲೆನೋವಾಗುವಂತೆ ವರ್ತಿಸಿಲ್ಲ. ಬಹುತೇಕ ಜನರು ಅನಗತ್ಯ ರಸ್ತೆಗೆ ಬಂದಿಲ್ಲ. ಆದರೆ ಕಿರಾಣಿ, ತರಕಾರಿ ಇನ್ನಿತರ ಜೀವನಾವಶ್ಯಕ ಸಾಮಗ್ರಿಗಳ ಪೂರೈಕೆ ಇನ್ನಷ್ಟು ಸಮರ್ಪಕವಾಗಿದ್ದರೆ ಸಾರ್ವಜನಿಕರು ಯಾರೂ ಮನೆಬಿಟ್ಟು ಹೊರಬರುವ ಪ್ರಶ್ನೆಯೇ ಇರುತ್ತಿರಲಿಲ್ಲ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts