More

    ಪಿಎಫ್​ಐ, ಎಸ್​ಡಿಪಿಐ ನಿಷೇಧಕ್ಕೆ ಒತ್ತಾಯ

    ಚಿಕ್ಕಮಗಳೂರು: ದೇಶಾದ್ಯಂತ ನಡೆಯುತ್ತಿರುವ ಹಿಂದುಗಳ ಹತ್ಯೆ ತಡೆಯಲು ಕ್ರಮ ಕೈಗೊಳ್ಳುವುದು ಹಾಗೂ ಜಿಹಾದಿಗಳಿಗೆ ನೆರವು ನೀಡುವ ಪಿಎಫ್​ಐ, ಎಸ್​ಡಿಪಿಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್​ಗೆ ಮನವಿ ಸಲ್ಲಿಸಿದರು. ನೂಪೂರ್ ಶರ್ಮಾ ಹೇಳಿಕೆ ನಂತರ ದೇಶಾದ್ಯಂತ ಒಬ್ಬರ ಹಿಂದೆ ಒಬ್ಬರಂತೆ ಹಿಂದುಗಳ ಸರಣಿ ಹತ್ಯೆ ನಡೆಯುತ್ತಿದೆ. ಈ ಹತ್ಯಾಸರಣಿಗಳ ಹಿಂದಿರಬಹುದಾದ ಷಡ್ಯಂತ್ರಗಳನ್ನು ಬಹಿರಂಗಪಡಿಸಬೇಕು. ಸರ್ ತನ್ ಸೆ ಜುದಾ ಅಭಿಯಾನ ನಡೆಸುತ್ತಿರುವವರು, ಜಿಹಾದಿಗಳಿಗೆ ಆರ್ಥಿಕ ನೆರವು ನೀಡಿ ಯಾರು ಪ್ರಚೋದಿಸುತ್ತಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

    ರಾಜ್ಯದಲ್ಲಿ ಹರ್ಷ, ಪ್ರವೀಣ್ ನೆಟ್ಟಾರು, ಅನ್ಯ ರಾಜ್ಯಗಳಲ್ಲಿ ಕನ್ಹಯ್ಯ ಲಾಲ್, ಉಮೇಶ್ ಹತ್ಯೆ ಸುದ್ದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಬೆದರಿಕೆ ಹಾಕಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್​ನ ಡಾಸನಾ ದೇವಿ ದೇವಸ್ಥಾನದ ಮಹಾಂತ ಯತಿ ನರಸಿಂಹಾನಂದ ಸರಸ್ವತಿ ಮಹಾರಾಜ್ ಸೇರಿದಂತೆ ಹಲವು ಮುಖಂಡರಿಗೆ ಸರ್ ತನ್ ಸೆ ಜುದಾ ಬೆದರಿಕೆ ಹಾಕಿದೆ. ಹಾಗಾಗಿ ರಾಷ್ಟ್ರೀಯ ತನಿಖಾ ದಳದ ಮೂಲಕ ಇದುವರೆಗೆ ಹತ್ಯೆಗೀಡಾದ ಹಿಂದು ನಾಯಕರ ಹತ್ಯೆಗಳ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

    ಅನೇಕ ದೇಶವಿರೋಧಿ ಚಟುವಟಿಕೆಗಳ ಹಿನ್ನೆಲೆ ಹೊಂದಿರುವ ಪಿಎಫ್​ಐ, ಎಸ್​ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಈ ಪಿತೂರಿ ಹಿಂದಿರುವ ಮುಖಂಡರು, ಧರ್ಮ ಗುರುಗಳ ವಿರುದ್ಧ ಅಪರಾಧ ಕಾಯ್ದೆಯಡಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಯುಎಪಿಎ ಅಡಿ ಅಪರಾಧಗಳನ್ನು ದಾಖಲಿಸಬೇಕು. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts