More

    ಪರ್ವತಗಳು ನದಿಗಳ ಉಗಮತಾಣ


    ಚಾಮರಾಜನಗರ : ಪರ್ವತಗಳು ಪರಿಸರದಲ್ಲಿ ಪ್ರಮುಖವಾಗಿದ್ದು ನದಿಗಳ ಉಗಮತಾಣಗಳಾಗಿವೆ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.

    ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪರ್ವತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


    ಪರಿಸರದಲ್ಲಿ ಪರ್ವತಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಭೂ ಭಾಗದ 27 ಪ್ರತಿಶತ ಪರ್ವತವಿದ್ದು, ಇವು ಸಮುದ್ರದಲ್ಲೂ ಕಾಣಬರುತ್ತವೆ. ಭಾರತದಲ್ಲಿ ಅರಾವಳಿ ಪ್ರದೇಶ ಪುರಾತನ ಪರ್ವತವಾಗಿದ್ದು, ಇವು ಮಧ್ಯಪ್ರದೇಶದಿಂದ ರಾಜಸ್ಥಾನದವರೆಗೆ ಹಬ್ಬಿದೆ. ನಮ್ಮ ಪಶ್ಚಿಮ ಘಟ್ಟವೂ ಹಿಮಾಲಯಕ್ಕಿಂತ ಹಳೆಯ ಪರ್ವತವಾಗಿದೆ ಎಂದರು.


    ಇತ್ತೀಚೆಗೆ ರೂಪುಗೊಂಡಿರುವ ಹಿಮಾಲಯವು ಯುವ ಪರ್ವತವಾಗಿದ್ದು, ಎರಡು ಭೂ ಭಾಗಗಳ ಸೇರುವ ಸ್ಥಳವಾಗಿರುವುದರಿಂದ ಭೂಕಂಪನ ಕೇಂದ್ರ ಸ್ಥಳವಾಗಿದೆ. ಟಿಬೆಟ್‌ನ 75 ಭಾಗ ಹಿಮಾಲಯವೇ ಆವರಿಸಿದ್ದು, ಇವು ನದಿಗಳ ಮೂಲವಾಗಿದೆ. ಕಾರ್ಗಿಲ್ ಅತಿ ಎತ್ತರದ ಗ್ಲೇಷಿಯರ್ ಪ್ರದೇಶವಾಗಿದೆ ಎಂದರು. ಮುಖ್ಯ ಶಿಕ್ಷಕ ಮಹದೇಶ್ವರ ಸ್ವಾಮಿ, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts