More

    ಪರಿಹಾರ ಪ್ಯಾಕೇಜ್ ನೀಡಲು ಆಗ್ರಹ

    ಶಿರಸಿ: ಭೂಕುಸಿತದ ತೀವ್ರ ಆತಂಕದಲ್ಲಿರುವ ತಾಲೂಕಿನ ಬಾಳೆಕಾಯಿಮನೆ ಗ್ರಾಮದ ಜಾಜಿಗುಡ್ಡೆಗೆ ಸೋಂದಾ ಸ್ವರ್ಣವಲ್ಲೀ ಮಠದ ]ೕ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

    ಈ ವೇಳೆ ಮಾತನಾಡಿದ ಶ್ರೀಗಳು, ಸಮಾಜ ಹಾಗೂ ಸರ್ಕಾರ ನಿಮ್ಮ ನೆರವಿಗೆ ಇದೆ. ತಾಳ್ಮೆ, ಸಮಾಧಾನ, ಪ್ರಾರ್ಥನೆ ಮುಖ್ಯ. ಇಲ್ಲಿ ನೆಲೆ ಕಳೆದು ಕೊಂಡವರಿಗೆ ಮನೆ ನಿರ್ವಣಕ್ಕೆ ಸ್ಥಳವನ್ನು ಸರ್ಕಾರ ತಕ್ಷಣ ಗುರುತಿಸಿಕೊಡಬೇಕು. ಇಲ್ಲಿ ಭೂಕುಸಿತದಿಂದ ಗದ್ದೆ ತೋಟಗಳಿಗೆ ಅಪಾರ ಹಾನಿ ಆಗಿದೆ. ಇದಕ್ಕೂ ಪರಿಹಾರ ಪ್ಯಾಕೇಜ್ ನೀಡಲು ಸರ್ಕಾರವನ್ನು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾ ಸಚಿವರು, ವಿಧಾನಸಭಾಧ್ಯಕ್ಷರ ಗಮನ ಸೆಳೆಯುತ್ತೇವೆ ಎಂದು ತಿಳಿಸಿದರು.

    ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಯಾವುದೇ ಕಾರಣಕ್ಕೂ ಮಳೆಗಾಲ ಇರುವವರೆಗೆ ಜಾಜಿಗುಡ್ಡೆ ಮನೆಗಳಲ್ಲಿ ವಸತಿ ಮಾಡಬಾರದು. ಭೂಕುಸಿತ ಭಾರಿ ಅವಘಡದಿಂದ ಜೀವ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಮಲೆನಾಡಿನ ರೈತರು ಎದುರಿಸುವ ಭೂಕುಸಿತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ವಿಧಾನ ಪರಿಷತ್​ನಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭರವಸೆ ನೀಡಿದರು.

    ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ, ಪ್ರಮುಖರಾದ ಯಶೋಧಾ ಗೌಡ, ಪಿ.ಜಿ. ಹೆಗಡೆ ಜಾಜಿಗುಡ್ಡೆ, ವಿ.ಆರ್.ಹೆಗಡೆ ಮಣ್ಮನೆ, ಗಣಪತಿ ಹೆಗಡೆ ಗೊಡವೆಮನೆ, ತಹಸೀಲ್ದಾರ್ ಎಂ.ಆರ್.ಕುಕರ್ಣಿ, ಆರ್​ಎಫ್​ಒ ಬಸವರಾಜ್ ಬೋಚಳ್ಳಿ ಇದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts