More

    ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಡಿಸಿ ಮನವಿ

    ಚಿತ್ರದುರ್ಗ: ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾ ರೆ. ಹಸಿರು ಪಟಾಕಿ ಹೊರತುಪಡಿಸಿ,ಇತರೆ ಪಟಾಕಿಗಳ ಮಾರಾಟ,ಬಳಕೆ ನಿಷೇಧಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಶಬ್ಧ,ವಾಯು ಮಾ ಲಿನ್ಯ ಉಂಟು ಮಾಡುವ ಹಾಗೂ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಪಟಾಕಿಗಳನ್ನು ಜನರು ಸಿಡಿಸಬಾರದು. ಹಬ್ಬವನ್ನು ಹಣತೆಗ ಳನ್ನು ಬೆಳಗುವುದರೊಂದಿಗೆ ಸರಳ,ಮಾಲಿನ್ಯ ರಹಿತ ಮತ್ತು ಶ್ರದ್ಧಾಭಕ್ತಿಯೊಂದಿಗೆ ಆಚರಿಸ ಬೇಕಿದೆ.
    ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯಸರ್ಕಾರದ ಹೊರಡಿಸಿರುವ ಮಾರ್ಗಸೂಚಿಗಳಾನುಸಾರ ನಾಗರಿಕರು ಹಸಿರು ಪಟಾಕಿ ಗ ಳನ್ನು ಬಳಸ ಬೇಕು. ಪಟಾಕಿ ಬಾಕ್ಸ್‌ಗಳ ಮೇಲೆ ಸಿಎಸ್‌ಐಆರ್,ಎನ್‌ಇಇಆರ್‌ಐ ಲೋಗೊ ಹಾಗೂ ನೋದಾಯಿತ ಸಂಖ್ಯೆಗಳಿರಬೇಕು. ಅಧಿಕೃತ ಮಾರಾಟ ಗಾರರು ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ,ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳಲ್ಲಿ ಮಾ ರಾಟ ಮಾಡಬೇಕು.
    ನಿಷೇಧಿತ ಪಟಾಕಿಗಳಿದ್ದರೆ ಅವುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಮಯದಲ್ಲಿ ರಾತ್ರಿ 8 ರಿಂದ 10ರವರೆಗೆ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶವಿದೆ. ಶಿಕ್ಷಣ ಸಂಸ್ಥೆಗಳು,ಆಸ್ಪತ್ರೆ,ವೃದ್ಧಾಶ್ರಮಗಳ ಹತ್ತಿರ ಪಟಾಕಿ ಸಿಡಿಸುವಂತಿಲ್ಲ.
    ಪರಿಸರ ಅಧಿಕಾರಿಗಳು ಪಟಾಕಿ ಅಂಗಡಿ ಮಾಲೀಕರೊಂದಿಗೆ ಸಭೆ ನಡೆಸಿ,ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ಹಾಗೂ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ ಡಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


    (ಡಿಸಿ ಮಗ್ ಶಾಟ್)


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts