More

    ಪರಿಶ್ರಮಕ್ಕೆ ತಕ್ಕ ಫಲ, ಎಸ್ಸೆಸ್ಸೆಲ್ಸಿ ಟಾಪರ್ ಸನ್ನಿಧಿ ಮನದಾಳ

    ಶಿರಸಿ: ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿ ಕೀರ್ತಿ ತಂದಿದ್ದಾಳೆ.

    ಶಿರಸಿಯ ಪ್ರಗತಿ ನಗರದ ಮಹಾಬಲೇಶ್ವರ ಹೆಗಡೆ ಹಾಗೂ ವೀಣಾ ಹೆಗಡೆ ಪುತ್ರಿಯಾಗಿರುವ ಇವರು ಯಾವುದೇ ಟ್ಯೂಷನ್ ಸಹಾಯವಿಲ್ಲದೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮನಸಿಟ್ಟು ಓದುವ, ಪಾಠಗಳ ಮನನ ಮಾಡುವುದರಿಂದ ಈ ಹಿರಿಮೆ ಸಾಧ್ಯವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಳು. ತಂದೆ ಡಾ.ಮಹಾಬಲೇಶ್ವರ ಹೆಗಡೆ ಕಾರವಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಮಗಳ ಸಾಧನೆ ಕೇಳಿ ಎಲ್ಲಿಲ್ಲದ ಖುಷಿಯಾದೆ. ಆಕೆ ಪರೀಕ್ಷೆಗಾಗಿ ತುಂಬಾ ಶ್ರಮಪಟ್ಟಿದ್ದಳು. ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಂತಾಗಿದೆ. ಆಕೆಯ ಈ ಸಾಧನೆ ಹಿಂದೆ ಶಾಲೆಯ ಶಿಕ್ಷಕರು, ತಾಯಿ ಹಾಗೂ ಸಹಪಾಠಿಗಳ ಸಹಕಾರ ತುಂಬಾ ಇದೆ. | ಡಾ.ಮಹಾಬಲೇಶ್ವರ ಹೆಗಡೆ, ಸನ್ನಿಧಿ ತಂದೆ

    ಮನದಾಳದ ಮಾತು: ಪ್ರಥಮ ಸ್ಥಾನ ಬರುವ ನಿರೀಕ್ಷೆಯಿತ್ತು. ಅದಕ್ಕೆ ತಕ್ಕಂತೆ ಅಭ್ಯಾಸವನ್ನೂ ಮಾಡಿದ್ದೆ. ಕರೊನಾ ಸಂದರ್ಭದಲ್ಲಿ ಶಾಲೆಯಲ್ಲಿ ರಚಿಸಿದ ವಾಟ್ಸ್ ಆಪ್ ಗ್ರೂಪ್, ಜೂಮ್ ಮೀಟಿಂಗ್ ಮೂಲಕ ನಿರಂತರತೆ ಕಾಪಾಡಿಕೊಂಡು, ಪಾಠಗಳ ಪುನರ್ ಮನನ ಮಾಡಿಕೊಂಡಿದ್ದೆ. ಓದುವ ಮನಸ್ಸು ಬಂದಾಗ ಶ್ರದ್ಧೆಯಿಂದ ಓದುತ್ತಿದ್ದೆ. ಮನೆಯವರ ಸಹಕಾರ ಕೂಡ ಲಭಿಸಿದ ಕಾರಣ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು. | ಸನ್ನಿಧಿ ಹೆಗಡೆ,ರ್ಯಾಂಕ್ ಪಡೆದ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts