More

    ಪರವಾನಗಿ ಇಲ್ಲದೆ ಕಟ್ಟಡ ಕಾಮಗಾರಿ

    ಕುಮಟಾ: ಪಟ್ಟಣದಲ್ಲಿ ಪರವಾನಗಿ ಇಲ್ಲದೆ ನಡೆಸುತ್ತಿದ್ದ 15 ಕಟ್ಟಡ ಕಾಮಗಾರಿಯನ್ನು ನಿಲ್ಲಿಸಿದ ಪುರಸಭೆಯವರು 40 ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

    ಪಟ್ಟಣದಲ್ಲಿ ಪುರಸಭೆಯ ಅನುಮತಿ ಪಡೆಯದೇ ನಿರ್ವಣವಾಗಿದ್ದ 25ಕ್ಕೂ ಹೆಚ್ಚು ಕಟ್ಟಡಗಳಿಗೆ ಈಗಾಗಲೇ ಮುಖ್ಯಾಧಿಕಾರಿ ಎಂ.ಕೆ. ಸುರೇಶ ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದರೆ ಅನಧಿಕೃತ ಕಟ್ಟಡಗಳು ನಿರಂತರ ತಲೆ ಎತ್ತುತ್ತಿರುವ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿದ ಮುಖ್ಯಾಧಿಕಾರಿ ಎಂ.ಕೆ. ಸುರೇಶ ಸಿಬ್ಬಂದಿಯೊಂದಿಗೆ ನಿರ್ವಣಹಂತದಲ್ಲಿರುವ ಕಟ್ಟಡಗಳನ್ನು ಪರಿಶೀಲಿಸಿದರು. ಪರವಾನಗಿ ಇಲ್ಲದೆ ಬಸ್ತಿಪೇಟೆ, ಬಾಳಗಿ ವೃತ್ತ, ಗುಡಿಗಾರಗಲ್ಲಿ ಮುಂತಾದ ಕಡೆಗಳಲ್ಲಿನ 15 ಕಟ್ಟಡ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸುವಂತೆ ತಾಕೀತು ಮಾಡಿ ನೋಟಿಸ್ ನೀಡಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016 ರ ಏಪ್ರಿಲ್ ಬಳಿಕ ಕಟ್ಟಡ ಪರವಾನಗಿಯನ್ನು ಆನ್​ಲೈನ್​ವುೂಲಕವೇ ನೀಡಲಾಗುತ್ತಿದೆ. 2020ರ ಜನವರಿ ಬಳಿಕ ಯಾವುದೇ ಹೊಸ ಕಟ್ಟಡ ಪರವಾನಗಿಗಾಗಿ ಅರ್ಜಿಯೇ ಬಂದಿಲ್ಲ. ಅಕ್ರಮವಾಗಿ ಕಟ್ಟಡ ನಿರ್ವಿುಸಿದರೆ ದುಪ್ಪಟ್ಟು ತೆರಿಗೆ ವಸೂಲಿ ನಿಯಮವಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts