More

    ನ.20 ರಂದು ಸಚಿವೆ ಜೊಲ್ಲೆ ಜನ್ಮದಿನ

    ನಿಪ್ಪಾಣಿ, ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ ಅವರ ಜನ್ಮದಿನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.

    ಪಟ್ಟಣದಲ್ಲಿ ಗುರುವಾರ ಜರುಗಿದ ಸಚಿವೆ ಶಶಿಕಲಾ ಜೊಲ್ಲೆ ಅವರ ಜನ್ಮದಿನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನ.20 ರಂದು ಹಮ್ಮಿಕೊಂಡಿರುವ ಶಶಿಕಲಾ ಜೊಲ್ಲೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದರು.

    ಬಸವಜ್ಯೋತಿ ಯೂಥ್ ೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಸಚಿವೆ ಜೊಲ್ಲೆ ಜನ್ಮದಿನದ ಅಂಗವಾಗಿ ಎರಡು ದಿನ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನ.20ರಂದು ಅಕ್ಕೋಳ ಗ್ರಾಮದಲ್ಲಿ 2 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಸರ್ಕಾರಿ ಐಟಿಐ ಮಹಾವಿದ್ಯಾಲಯದ ಕಟ್ಟಡವನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಲೋಕಾರ್ಪಣೆಗೊಳಿಸುವರು. ಉನ್ನತ ಶಿಕ್ಷಣ ಇಲಾಖೆಯಡಿ ಪಟ್ಟಣದ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಶಾಲೆಯ ಮೈದಾನದಲ್ಲಿ ಸಚಿವೆ ಜೊಲ್ಲೆಯವರ ಜನ್ಮದಿನ ಆಚರಿಸಲಾಗುವುದು ಎಂದರು.

    ಮನರಂಜನೆ ಕಾರ್ಯ ಕ್ರಮಗಳು ಜರುಗಲಿವೆ. ನ.21ರಂದು ಶಾಲಾ ಮಕ್ಕಳ ಹಬ್ಬ ದ ನಿಮಿತ್ತ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ಬೋರಗಾಂವವಾಡಿಯ ಪಿಕೆಪಿಎಸ್ ಅಧ್ಯಕ್ಷ ಸಂಜಯ ಸೌಂದಲಗೆ, ನಗರಸಭಾಧ್ಯಕ್ಷ ಜಯವಂತ ಭಾಟಲೆ, ನಗರ ಯೋಜನಾ ಪ್ರಾಧಿಕಾರದ ಚೇರ್ಮನ್ ಅಭಯ ಮಾನವಿ, ಜೊಲ್ಲೆ ಗ್ರೂಪ್‌ನ ನಿರ್ದೇಶಕ ವಿಜಯ ರಾವುತ, ಸರೋಜ ಜಮದಾಡೆ, ಸುನೀಲ ರಾವುತ, ನಗರಸಭೆ ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೇಶಾ, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಣವ ಮಾನವಿ, ಹಾಲಶುಗರ್ ವೈಸ್-ಚೇರ್ಮನ್ ಮಲಕಗೊಂಡ ಪಾಟೀಲ, ನಿರ್ದೇಶಕ ಆರ್.ವೈ. ಪಾಟೀಲ, ಕಲ್ಲಪ್ಪ ನಾಯಿಕ, ಅವಿನಾಶ ಪಾಟೀಲ, ಅಮಿತ ರಣದಿವೆ, ಕಿರಣ ನಿಕಾಡೆ, ಪ್ರಕಾಶ ಶಿಂಧೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts