More

    ನೂರೊಂಬತ್ತು ಜನರಿಗೆ ಸೋಂಕು

    ಕಾರವಾರ: ಕರೊನಾ ಜಿಲ್ಲೆಯಲ್ಲಿ ಮತ್ತೊಮ್ಮೆ ಶತಕ ಭಾರಿಸಿದೆ. ಮಂಗಳವಾದ 109 ಜನರಿಗೆ ಸೋಂಕು ತಗುಲಿದ್ದು ಖಚಿತವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಹೊನ್ನಾವರ ಹಾಗೂ ಅಂಕೋಲಾದಲ್ಲಿ ತಲಾ 5, ಭಟ್ಕಳದಲ್ಲಿ 21, ಕಾರವಾರ ಮತ್ತು ಕುಮಟಾದಲ್ಲಿ ತಲಾ ಇಬ್ಬರು ಗುಣ ಹೊಂದಿದ್ದಾರೆ.

    ಹಳಿಯಾಳ ಮತ್ತು ದಾಂಡೇಲಿಯಲ್ಲಿ ಸೋಂಕಿನ ಅಬ್ಬರ ಮುಂದುವರಿದಿದ್ದು, ಒಟ್ಟು 44 ಜನರಲ್ಲಿ ಕೋವಿಡ್ ಇರುವುದು ಕಂಡುಬಂದಿದೆ. ಭಟ್ಕಳದಲ್ಲಿ 5, ಹೊನ್ನಾವರ- 13, ಜೊಯಿಡಾ-2, ಕಾರವಾರ- 8, ಕುಮಟಾ-7, ಮುಂಡಗೋಡ- 6, ಶಿರಸಿ-22, ಯಲ್ಲಾಪುರ ಹಾಗೂ ಸಿದ್ದಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ಇರುವುದು ಕಂಡುಬಂದಿದೆ.

    ಒಟ್ಟಾರೆ ಸೋಂಕಿತರಲ್ಲಿ 43 ಜನರಿಗೆ ರೋಗಿಗಳ ಸಂಪರ್ಕದಿಂದ ವೈರಸ್ ಬಂದಿರುವುದು ಖಚಿತವಾಗಿದ್ದು, 62 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಜ್ವರದಿಂದ ಬಳಲುತ್ತಿದ್ದ ಇಬ್ಬರಿಗೆ, ಪಾಲಕರ ಜತೆ ವಿದೇಶದಿಂದ ಬಂದ ಹಳಿಯಾಳದ 1 ವರ್ಷದ ಮಗುವಿಗೆ ಸೋಂಕು ಖಚಿತವಾಗಿದೆ.

    ಹಳಿಯಾಳದಲ್ಲಿ ಹೆಚ್ಚು: ದಾಂಡೇಲಿಯ ಗಾಂಧಿ ನಗರದಲ್ಲಿ 7, ಸರ್ಕಾರಿ ಆಸ್ಪತ್ರೆ ಕ್ವಾರ್ಟರ್ಸ್​ನಲ್ಲಿ 1, ಟೌನ್​ಶಿಪ್​ನಲ್ಲಿ1, ವೆಸ್ಟ್​ಕೋಸ್ಟ್ ಕ್ವಾರ್ಟರ್ಸ್​ನಲ್ಲಿ ಒಬ್ಬರಿಗೆ ಸೋಂಕು ಕಂಡುಬಂದಿದೆ. ಹಳಿಯಾಳ ನಗರದ ಮೇದಾರ ಗಲ್ಲಿಯಲ್ಲಿ ಬಿಜೆಪಿ ಮುಖಂಡರ ಕಾರು ಚಾಲಕನಿಗೆ, ಆನೆಗುಂದಿ ಲೇಔಟ್ ಹಾಗೂ ದುರ್ಗಾ ನಗರದ ತಲಾ ಒಬ್ಬರಿಗೆ, ಇನ್ನು ಬಿ.ಕೆ.ಹಳ್ಳಿ, ಬೆಳವಟಗಿ, ಕೆ.ಕೆ.ಹಳ್ಳಿ, ಕಮಟಿಕೊಪ್ಪ, ತೇರಗಾಂವ, ದೊಡ್ಡಕೊಪ್ಪ, ಯಡೋಗಾ, ಮುರ್ಕವಾಡ, ಮುಂಡವಾಡದ ಯುವಕರಲ್ಲಿ, ಹುಣದವಾಡದ ಒಂದೇ ಕುಟುಂಬದಲ್ಲಿ 85 ವರ್ಷದ ಅಜ್ಜಿ, 13 ಹಾಗೂ 16 ವರ್ಷದ ಇಬ್ಬರು ಮಕ್ಕಳು ಹಾಗೂ 45 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಶಿರಸಿಯ ಕಸ್ತೂರಬಾ ನಗರ ಹಾಗೂ ರಾಜೀವ ನಗರಗಳಲ್ಲಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ.

    ಒಂದೇ ಕುಟುಂಬದ 7 ಜನರಿಗೆ: ಕುಮಟಾ ಮಿರ್ಜಾನ್​ನಲ್ಲಿ ಬೆಂಗಳೂರಿನಿಂದ ಬಂದ ಒಬ್ಬ ಯುವಕನಿಂದ ಅವರ ಇಡೀ ಕುಟುಂಬ ಅಂದರೆ ಏಳು ಜನರಿಗೆ ಕರೊನಾ ಹರಡಿದೆ. ಮುಂಡಗೋಡ ಪಟ್ಟಣದ ವಿವೇಕಾನಂದ ನಗರದ ವೈದ್ಯರ ಸಂಪರ್ಕದಿಂದ 15 ದಿನದ ಹೆಣ್ಣು ಮಗು ಹಾಗೂ ಮಹಿಳೆಗೆ, ನರ್ಸ್ ಸಂಪರ್ಕಕ್ಕೆ ಬಂದ ಆನಂದ ನಗರದ ಬಾಲಕಿ ಹಾಗೂ ಮಹಿಳೆಗೆ, ಎಕ್ಸ್​ರೇ ಟೆಕ್ನೀಷಿಯನ್ ಸಂಪರ್ಕದಲ್ಲಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಲಕನಿಗೆ ಹಾಗೂ ಹಿರೇಹಳ್ಳಿ ಗ್ರಾಮದ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಕಾರವಾರದ ನಗರದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಬೈತಖೋಲ, ಕೋಡಿಬೀರ ದೇವಸ್ಥಾನ ಸಮೀಪ, ನಂದನಗದ್ದಾ ಹಾಗೂ ಕಾಜುಬಾಗದ ಒಬ್ಬರಿಗೆ, ಕೆರವಡಿಯ ಮೂವರು, ಮುದಗಾದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ.

    ಭಟ್ಕಳದ ಮಹಿಳೆ, ದಾಸನಕೊಪ್ಪದ ವೃದ್ಧ ಸಾವು
    ಅನ್ಯ ಕಾಯಿಲೆ ಹಾಗೂ ಕರೊನಾದಿಂದ ಬಳಲುತ್ತಿದ್ದ ಇಬ್ಬರು ಕಾರವಾರ ಕ್ರಿಮ್್ಸ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಭಟ್ಕಳದ 65 ವರ್ಷದ ಮಹಿಳೆ ಜು.19 ಕ್ಕೆ ಕ್ರಿಮ್ಸ್​ಗೆ ದಾಖಲಾಗಿದ್ದರು. ನ್ಯುಮೋನಿಯಾ , ರಕ್ತದೊತ್ತಡ, ಮಧುಮೇಹ, ಹಾಗೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಗೆ ಕರೊನಾ ಕೂಡ ದಾಳಿ ಮಾಡಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಜು.20 ರಂದು ಕ್ರಿಮ್ಸ್​ಗೆ ದಾಖಲಾದ ಶಿರಸಿಯ ದಾಸನಕೊಪ್ಪದ 76 ವರ್ಷದ ವೃದ್ಧನಿಗೂ ಈ ಎಲ್ಲ ಕಾಯಿಲೆಗಳೂ ಇದ್ದವು ಎಂದು ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ ಅವರು ತಿಳಿಸಿದ್ದಾರೆ. ಸದ್ಯ ಕರೊನಾದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕಾರವಾರ ಹಾಗೂ ಯಲ್ಲಾಪುರದ ಇಬ್ಬರು ಯುವಕರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts