More

    ನೂರಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

    ಸರಗೂರು: ತಾಲೂಕಿನ ಹುಸ್ಕೂರು ಹಾಡಿಯಲ್ಲಿ ನೂರಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ, ಕೊಂಡೋತ್ಸವ ಗುರುವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.


    ಜಾತ್ರೆ ಹಿನ್ನೆಲೆಯಲ್ಲಿ ನುಗು ಜಲಾಶಯದ ಹಿನ್ನೀರಿನಲ್ಲಿರುವ ದೇವಸ್ಥಾನವನ್ನು ಅಲಂಕೃತಗೊಳಲಾಗಿತ್ತು. ನುಗು ಜಲಾಶಯಕ್ಕೆ ದೇವರನ್ನು ಕೊಂಡೊಯ್ದು ಗಂಗಾಸ್ನಾನ ಮಾಡಿಸಿ, ದೇವಸ್ಥಾನದ ಬಳಿಗೆ ತರಲಾಯಿತು. ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಸೇವೆ ಮಾಡಿದರು. ವಾದ್ಯ ಗೋಷ್ಠಿಗಳು ಮೆರವಣಿಗೆಗೆ ಮೆರುಗು ನೀಡಿದವು.

    ದಾರಿಯುದ್ದಕ್ಕೂ ಭಕ್ತರು ದೇವರಿಗೆ ನಮಿಸಿ ಕತ್ತಿ ಹಿಡಿದು ಭಕ್ತಿ ಭಾವ ಮೆರೆದರು. ಮಕ್ಕಳು ಬೀಗ ಹಾಕಿ ಸೇವೆ ಮಾಡಿ ಹರಕೆ ತಿರಿಸಿದರು. ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಕೊಂಂಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಕೊಂಡೋತ್ಸವನ್ನು ಮಾಡಲಾಯಿತು. ನಂತರ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನಿತರಾದರು. ಹುಸ್ಕೂರುಹಾಡಿ, ದಡದಹಳ್ಳಿ, ಹಳಿಯೂರು, ಹೊಸಬಿರ್ವಾಳ್, ಹಲಸೂರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts