More

    ನಿವೇಶನ ಇನ್ನೂ ಮರೀಚಿಕೆ

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಕೆಲವೇ ದಿನಗಳಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ ನಿವೇಶನ ರಹಿತ ಕುಟುಂಬಗಳಿಗೆ ಸೂರು ಭಾಗ್ಯ ದೊರೆಯಲಿದೆ ಎಂಬ ಆಶಾಭಾವ ಹೊಂದಿದವರಿಗೆ ಮತ್ತೆ ನಿರಾಸೆ ಎದುರಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆ ಸೇರಿದಂತೆ ಇತರೆ ವಸತಿ ಯೋಜನೆಗಳ ಅನುಷ್ಠಾನಕ್ಕೆ ನಿವೇಶನದ ಕೊರತೆ ಎದುರಾಗಿತ್ತು. ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲು ಹೊಸದಾಗಿ ಜಮೀನು ಕಾದಿರಿಸಲು ಸರ್ಕಾರಿ ಜಮೀನು ಲಭ್ಯವಿಲ್ಲ. ಈ ಬಗ್ಗೆ ನಗರಸಭೆ ಕಂದಾಯ ಇಲಾಖೆಯಿಂದ ಸರ್ಕಾರಿ ಜಮೀನು ಗುರುತಿಸಿ ನಗರಸಭೆಗೆ ಹಸ್ತಾಂತರಿಸುವಂತೆ ಕೇಳಿಕೊಳ್ಳುತ್ತಲೇ ಇದೆ. ನಿವೇಶನಕ್ಕಾಗಿ ಹುಡುಕಾಟ ನಡೆಸಿದ ಕಂದಾಯ ಇಲಾಖೆ ನಗರಸಭೆಗೆ ಈ ಹಿಂದೆ ನೀಡಿದ್ದ ಜಮೀನಲ್ಲೇ ಖಾಲಿ ಇರುವ ಜಾಗ ಗುರುತಿಸಿದೆ. ಬನ್ನೂರು ಗ್ರಾಮದಲ್ಲಿ 9.47ಎಕರೆ ಕಾದಿರಿಸಿದ್ದು, ಈ ಪೈಕಿ 1.88ಎಕರೆ ಖಾಲಿ ಇದೆ. ಬಲ್ನಾಡು ಗ್ರಾಮದಲ್ಲಿ 4.99 ಎಕರೆ ಕಾದಿರಿಸಿದ್ದು, ಈ ಪೈಕಿ 3.5 ಎಕರೆ ಖಾಲಿ ಇದೆ. ಪಡ್ನೂರು ಗ್ರಾಮದಲ್ಲಿ 1 ಎಕರೆ ಕಾದಿರಿಸಿದ್ದು, ಇದೂ ಖಾಲಿ ಇದೆ. ಪುತ್ತೂರು ಕಸ್ಪಾ ಗ್ರಾಮದಲ್ಲಿ 9.70 ಎಕರೆ ಕಾದಿರಿಸಿದ್ದು, ಈ ಪೈಕಿ 0.98 ಎಕರೆ ಖಾಲಿ ಇದೆ. ಹೀಗೆ ಖಾಲಿ ಇರುವ ಒಟ್ಟು 7.36 ಎಕರೆ ಜಮೀನಿನಲ್ಲಿ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಸೂಚಿಸಲಾಗಿತ್ತು. ಈ 7.36 ಎಕರೆ ವ್ಯಾಪ್ತಿಯಲ್ಲಿ ಗೋಮಾಳ ಹಾಗೂ ಡೀಮ್ಡ್ ಾರೆಸ್ಟ್ ಜಮೀನು ತೊಡಕಾಗಿ ಪರಿಣಮಿಸುತ್ತಿದೆ ಎಂಬುದು ನಗರಸಭೆಯ ವಾದ.

    ಗೋಮಾಳ, ಡೀಮ್ಡ್ ಾರೆಸ್ಟ್: ಈ ಹಿಂದೆ ಕಂದಾಯ ಇಲಾಖೆಯಿಂದ ನಗರಸಭೆಗೆ ನೀಡಿದ ನಿವೇಶನ ವ್ಯಾಪ್ತಿಯ ಕೆಲವು ಭಾಗ ಗೋಮಾಳ ಹಾಗೂ ಡೀಮ್ಡ್ ಾರೆಸ್ಟ್ ಎಂದು ತಿಳಿದುಬಂದಿರುವುದರಿಂದ ಆ ಪ್ರದೇಶ ಬಿಟ್ಟು ಉಳಿದ ಭಾಗದಲ್ಲಿ ನಿವೇಶನ ಮಂಜೂರಾತಿ ಮಾಡಲಾಗಿದೆ. ಆದರೆ ಕಂದಾಯ ಇಲಾಖೆ ಇದೇ ಪ್ರದೇಶವನ್ನು ನಿವೇಶನಕ್ಕೆ ಗೊತ್ತುಪಡಿಸಿರುವುದರಿಂದ ಇದರಲ್ಲಿ ಮಂಜೂರಾತಿ ಕಷ್ಟ ಎಂದು ನಗರಸಭೆ ಹೇಳಿದೆ. ಈ ಮಧ್ಯೆ ಚಿಕ್ಕಮುಡ್ನೂರಿನಲ್ಲಿರುವ 2.5 ಎಕರೆ ಪ್ರದೇಶದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಮಂಜೂರಾತಿಗೆ ನಗರಸಭೆ ಯೋಜನೆ ರೂಪಿಸಿದೆ. ನಗರಸಭಾ ವ್ಯಾಪ್ತಿಯಲ್ಲಿ 2720ಕ್ಕೂ ಅಧಿಕ ನಿವೇಶನ ರಹಿತರಿದ್ದು, ಕೆಲವು ಕುಟುಂಬಗಳಿಗೆ ಮಾತ್ರ ಇಲ್ಲಿ ನಿವೇಶನ ದೊರೆಯಲು ಸಾಧ್ಯ ಎಂದು ನಗರಸಭೆ ತಿಳಿಸಿದೆ.

    ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸೂರು ರಹಿತರು ಇರಬಾರದೆಂಬುದು ನನ್ನ ಬಯಕೆ. ಪ್ರಸ್ತುತ ಕೆಲವು ತಾಂತ್ರಿಕ ಸಮಸ್ಯೆಯಿಂದ ಈ ಹಿಂದೆ ಗುರುತಿಸಿರುವ ನಿವೇಶನ ಖಾಲಿ ಉಳಿದಿದೆ. ಇದನ್ನು ಸರಿಪಡಿಸಿ ನಗರಸಭೆಗೆ ಪೂರ್ಣ ಪ್ರಮಾಣದಲ್ಲಿ ಈ ಜಮೀನನ್ನು ವರ್ಗಾಯಿಸುವ ಕಾರ್ಯ ಮಾಡಲು ಪ್ರಯತ್ನ ನಡೆಯುತ್ತಿದೆ.
    ಸಂಜೀವ ಮಠಂದೂರು, ಶಾಸಕ

    ಈಗಾಗಲೇ ಕಂದಾಯ ಇಲಾಖೆ ಸೂಚಿಸಿದ ಜಾಗ ಗೋಮಾಳ, ಡೀಮ್ಡ್ ಾರೆಸ್ಟ್ ಎಂಬುದಾಗಿ ತಿಳಿದು ಬಂದುದರಿಂದ ಇದನ್ನು ನಿವೇಶನ ಮಂಜೂರಾತಿಗೊಳಿಸಲು ಸಾಧ್ಯವಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಶಾಸಕರ ಸಮ್ಮುಖದಲ್ಲೇ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ.
    ರೂಪಾ ಶೆಟ್ಟಿ ಪುತ್ತೂರು ನಗರಸಭಾ ಪೌರಾಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts