More

    ನಿಯಮ ಅನುಸರಿಸಿ ಹಬ್ಬ ಆಚರಿಸಿ

    ನರೇಗಲ್ಲ: ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಗಣೇಶೋತ್ಸವ ಹಾಗೂ ಮೊಹರಂ ಹಬ್ಬ ಆಚರಿಸುವುದಕ್ಕೆ ನಿಯಮ, ಮಾರ್ಗಸೂಚಿ ಜಾರಿಗೊಳಿಸಿದೆ. ಎಲ್ಲ ಗ್ರಾಮಗಳ ಸಾರ್ವಜನಿಕರು ನಿಯಮ ಪಾಲಿಸುವ ಮೂಲಕ ಹಬ್ಬಗಳನ್ನು ಶಾಂತಿ, ಸರಳತೆ ಹಾಗೂ ಸೌಹಾರ್ದದಿಂದ ಆಚರಿಸಬೇಕು ಎಂದು ಪಿಎಸ್​ಐ ಬಸವರಾಜ ಕೊಳ್ಳಿ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

    ಗಣೇಶ ಮೂರ್ತಿಯನ್ನು ಮನೆಗಳಿಗೆ ತರುವಾಗ ಮತ್ತು ವಿಸರ್ಜನೆ ವೇಳೆ ಮೆರವಣಿಗೆ ಮಾಡಲು ಅವಕಾಶವಿಲ್ಲ. ಪಾರಂಪರಿಕ ಗಣೇಶೋತ್ಸವಕ್ಕಾಗಿ ಗಣೇಶೋತ್ಸವ ಸಮಿತಿ, ಮಂಡಳಿಗಳು ಕಡ್ಡಾಯವಾಗಿ ಸ್ಥಳೀಯ ಆಡಳಿತದ ಅನುಮತಿ ಪಡೆಯಬೇಕು. ಒಂದು ವಾರ್ಡ್​, ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಇಂತಹ ಸ್ಥಳಗಳಲ್ಲಿ 20ಕ್ಕೂ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು. ಮೊಹರಂ ಅನ್ನು ಸರ್ಕಾರದ ಮಾರ್ಗಸೂಚಿ ಅನುಸಾರವಾಗಿ ಆಚರಿಸಬೇಕು ಎಂದರು.

    ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎ. ನವಲಗುಂದ, ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ, ಅಶೋಕ ಬೇವಿನಕಟ್ಟಿ, ಕರವೇ ಅಧ್ಯಕ್ಷ ಹನಮಂತ ಅಬ್ಬಿಗೇರಿ, ಬಸವರಾಜ ವಂಕಲಕುಂಟಿ, ನಿಂಗಪ್ಪ ಕಣವಿ, ನಾಗಪ್ಪ ನರಗುಂದ, ನಜೀರ ಹದ್ಲಿ, ಯಲ್ಲಪ್ಪ ಮಣ್ಣೊಡ್ಡರ, ಮೌನೇಶ ಹೊಸಮನಿ, ಕುಮಾರಸ್ವಾಮಿ ಕೋರಧ್ಯಾನಮಠ, ಮಹ್ಮದ್ ಹೊಸಳ್ಳಿ, ಅಬ್ದುಲ್ ರೆಹಮಾನಸಾಬ್ ರಾಹುತ, ಅಬ್ಬಿಗೇರಿ, ಹೊಸಳ್ಳಿ, ಹಾಲಕೆರೆ, ಜಕ್ಕಲಿ, ಕಳಕಾಪುರ, ನಿಡಗುಂದಿ, ನಿಡಗುಂದಿಕೊಪ್ಪ, ಬೂದಿಹಾಳ, ಮಾರನಬಸರಿ, ಗುಜಮಾಗಡಿ, ಡ.ಸ. ಹಡಗಲಿ, ಯರೇಬೇಲೇರಿ, ನಾಗರಾಳ, ಕುರುಡಗಿ ಗ್ರಾಮಗಳ ಮುಖಂಡರು ಪಾಲ್ಗೊಂಡಿದ್ದರು. ಎಎಸ್​ಐ ಎಂ.ಎಸ್. ಬುಸಗತ್ತಿ, ಮಂಜುನಾಥ ಬಂಡಿವಡ್ಡರ ಹಾಗೂ ವಿಜಯ ಗೋದಿಗನೂರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts