More

    ನಿತ್ಯ ಜೀವನದಲ್ಲಿ ವಾಲ್ಮೀಕಿ ಆದರ್ಶಗಳನ್ನು ಪಾಲಿಸೋಣ

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಶ್ರೀ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ನಮ್ಮ ನಿತ್ಯಜೀವನದಲ್ಲೂ ಅಳವಡಿಸಿಕೊಳ್ಳೋಣವೆಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.
    ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸರಳವಾಗಿ ಆಯೋಜಿಸಿದ್ದ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವ ತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಆದಿಕವಿ ವಾಲ್ಮೀಕಿ ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ಬದುಕಿಗೆ ಅಗತ್ಯವಿರುವ ಆದ ರ್ಶಗಳನ್ನು ತಿಳಿಸಿದ್ದಾರೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ,ಮಹನೀಯರ ತತ್ವ ಸಿದ್ಧಾಂತ,ಆದೇಶಗಳನ್ನು ಅಳವಡಿಸಿ ಕೊಂ ಡು ಜೀವನದಲ್ಲಿ ಪಾಲಿಸುವಂತಾಗಬೇಕು. ಮಹರ್ಷಿಯ ಆಶಯದಂತೆ ನಮ್ಮ ದೇಶವನ್ನು ರಾಮರಾಜ್ಯ ಮಾಡಲು ಶ್ರಮಿಸೋಣವೆಂದರು.
    ಎಸ್ಪಿ.ಜಿ.ರಾಧಿಕಾ ಮಾತನಾಡಿ,ರಾಮಾಯಣಕ್ಕೆ ಇಡೀ ಪ್ರಪಂಚದಾದ್ಯಂತ ಮಹತ್ವವಾದ ಸ್ಥಾನವಿದೆ. ಅದು ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದ್ದು,ಅದರಲ್ಲಿರುವ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು. ಜಿಪಂಸಿಇಒ ಟಿ.ಯೋಗೇಶ್ ಮಾತನಾಡಿ, ವಾಲ್ಮೀಕಿಯವರು ನಾಡು,ದೇಶಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಭಾರತ ದೇಶದ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆಂದರು. ಕುಡಾ ಟಿ.ಬದರಿನಾಥ್ ಮಾತನಾಡಿದರು.
    ಎಡಿಸಿ ಸಿ.ಸಂಗಪ್ಪ,ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್,ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ,ಕಾಂಗ್ರೆಸ್ ಮುಖಂಡ ಸಂಪತ್ ಕುಮಾರ್,ಸಮಾಜ ಕಲ್ಯಾಣಾಧಿಕಾರಿ ಟಿ.ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು,ಸಮಾಜದ ಮುಖಂಡರು ಇದ್ದರು.
    (ಸಿಟಿಡಿ 31 ವಾಲ್ಮೀಕಿ)

    ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಡಿಸಿ ಕವಿತಾ ಎಸ್. ಮನ್ನಿಕೇರಿ ಪುಷ್ಪ ನಮನ ಸಲ್ಲಿಸಿದರು. ಜಿಪಂ ಸಿಇಒ ಟಿ.ಯೋಗೇಶ್,ಕುಡಾ ಅಧ್ಯಕ್ಷ ಟಿ.ಬದ್ರಿನಾಥ್,ಎಡಿಸಿ ಸಿ.ಸಂಗಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts