More

    ನಿಗದಿತ ಸಮಯಕ್ಕೆ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಅಗತ್ಯ


    ನ್ಯಾಯಾಧೀಶ ಕೆ.ಜೆ.ಸತೀಶ್ ಅಭಿಮತ


    ಎಚ್.ಡಿ.ಕೋಟೆ: ಮಾನಸಿಕ ರೋಗಿಗಳಿಗೆ ನಿಗದಿತ ಸಮಯಕ್ಕೆ ಚಿಕಿತ್ಸೆ ನೀಡಿದಲ್ಲಿ ಗುಣಮುಖರಾಗುತ್ತಾರೆ ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜೆ.ಸತೀಶ್ ತಿಳಿಸಿದರು.

    ಸಮೀಪದ ಶಾಂತಿಪುರ ಗ್ರಾಮದಲ್ಲಿರುವ ಚಿತ್ತ ಧಾಮ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸಲು ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಿಸಬೇಕು ಎಂದರು.

    ಹಿರಿಯ ವಕೀಲ ಡಾ.ಎಂ.ಎನ್.ರವಿಶಂಕರ್ ಮಾತನಾಡಿ, ಮಾನಸಿಕ ರೋಗ ಗುಣಪಡಿಸಬಹುದಾದ ಕಾಯಿಲೆ. ರೋಗಿಗಳನ್ನು ಕುಟುಂಬದವರು ಜಾಗ್ರತೆಯಿಂದ ನೋಡಿಕೊಳ್ಳಬೇಕು ಎಂದರು.

    ಕಾರ್ಯಕ್ರಮದ ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಹಿಳಾ ಸ್ವಸಹಾಯ ಸಂಘಗಳಿಗೆ ಕೋಳಿ ವಿತರಣೆ ಮಾಡಲಾಯಿತು. ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

    ಪಡುವಲು ಶ್ರೀ ವಿರಕ್ತ ಮಠದ ಮಹದೇವ ಸ್ವಾಮೀಜಿ, ಚಿತ್ತಪ್ರಕಾಶ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ರವಿಶಂಕರ್‌ರಾವ್, ಪುರಸಭಾ ಸದಸ್ಯ ಲೋಕೇಶ್, ವಕೀಲರ ಸಂಘದ ಅಧ್ಯಕ್ಷ ಎ.ಸಿ ರವಿಕುಮಾರ್, ಡಾ.ಮಂಜುನಾಥ್, ಡಾ.ಸಂಜೀವಿನಿ ಜೈನ್, ಡಾ.ನಿಖಿತಾ ಕುಲಕರ್ಣಿ, ಎಸ್‌ಐ ಸುರೇಶ್‌ನಾಯಕ, ಚಿತ್ತ ಧಾಮದ ಸಿಬ್ಬಂದಿ ಮಹದೇವ ಸ್ವಾಮಿ, ಮಂಜುಳಾ, ಬಸವರಾಜು, ಮಂಜುನಾಥ್, ಕಮಲಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts