More

    ನಾಟಕಗಳು ಮೂಡಿಸಲಿ ಸಾಮಾಜಿಕ ಎಚ್ಚರ: ಡಾ.ಎಂ.ಜಿ.ಈಶ್ವರಪ್ಪ

    ದಾವಣಗೆರೆ: ನಾಟಕಗಳು ಸಾಮಾಜಿಕ ಎಚ್ಚರವನ್ನು ನೀಡುವ ಅಗತ್ಯವಿದೆ ಎಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.
    ಇಲ್ಲಿನ ಧರಾಮ ವಿಜ್ಞಾನ ಕಾಲೇಜಿನಲ್ಲಿ ಭಾನುವಾರ, ಅಭಿಯಂತರಂಗ ವೇದಿಕೆಯಡಿ ನಿವೃತ್ತ ಪ್ರಾಧ್ಯಾಪಕ ಎಸ್. ಚಿದಾನಂದ್ ಅವರ ‘ದಿವ್ಯಜ್ಯೋತಿ’ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರವೂ ಬಹುಮುಖ್ಯವಾಗಿದೆ. ಬಸವಪ್ಪ ಶಾಸ್ತ್ರಿ, ಕುವೆಂಪು, ಬೇಂದ್ರೆ ಮೊದಲಾದವರ ನಾಟಕ ಕೃತಿಗಳು ಓದುಗರನ್ನು ಎಲ್ಲಿಯವರೆಗೆ ಓದಿಸಿಕೊಂಡು ಹೋಗುತ್ತದೆ ಎಂಬುದು ಮುಖ್ಯವಾಗಲಿದೆ. ನಾಟಕ ಕೃತಿಗಳು ಬಿಡುಗಡೆಯಾದ ಬಳಿಕ ಅದರ ಟೀಕೆ-ಪ್ರಶಂಸೆ ವಿಚಾರದಲ್ಲಿ ಸಮಾಜದ ಸ್ವತ್ತು ಎಂದರು.
    ಗಿರೀಶ್ ಕಾರ್ನಾಡರ ತುಘಲಕ್ ನಾಟಕ ಬರುದಿನಗಳ ನಂತರ ಬೆಂಗಳೂರಿನಲ್ಲಿ ಮತ್ತೆ ರಂಗ ಪ್ರಯೋಗವಾಗಲಿದೆ. 96 ವರ್ಷದ ಎಂ.ಎಸ್.ಸತ್ಯು ರಂಗ ಸಜ್ಜಿಕೆ ಮಾಡುತ್ತಿದ್ದಾರೆ. ಈ ಬಾರಿ ಕೋಟು ಸೂಟು ಹಾಕಿದ ವೇಷದಲ್ಲಿ ತುಘಲಕ್ ಪಾತ್ರಧಾರಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ನಾಟಕಗಳು ಪ್ರದರ್ಶನವಾದಾಗಲೆ ಅದರ ನಿಜವಾದ ಸತ್ವ ಅನಾವರಣವಾಗಲಿದೆ. ನಾಟಕಗಳು ಓದವುದರ ಜತೆಗೆ ಆಡುವಂತಹ ಮತ್ತು ನೋಡುವಂಥಹ ನಾಟಕಗಳಾಗಬೇಕು ಎಂದು ಆಶಿಸಿದರು.
    ಕೃತಿ ಬಿಡುಗಡೆಗೊಳಿಸಿದ ಕಲಾವಿದ ಆರ್.ಟಿ.ಅರುಣ್‌ಕುಮಾರ್ ಮಾತನಾಡಿ ನಾಟಕಗಳು ನಮ್ಮಲ್ಲಿ ಆತ್ಮವಿಶ್ವಾಸ, ಧೈರ್ಯ ಮೂಡಿಸುತ್ತವೆ ಎಂದರು. ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕ ಎಸ್. ಚಿದಾನಂದ್ ಅವರಿಂದಾಗಿ ಕಂಡುಕೊಂಡ ನಾಟಕಾಸಕ್ತಿಯ ಸೆಳೆತದಿಂದಾಗಿ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶದಿಂದ ದೂರ ಸರಿದೆ. ಚಿದಾನಂದ್ ಅವರು ಪ್ರತಿಭೆ ಜತೆಗೆ ಪ್ರಬುದ್ಧತೆಯ ಅಗತ್ಯತೆಯನ್ನು ಕಲಿಸಿದರು ಎಂದು ಹೇಳಿದರು.
    ನಿವೃತ್ತ ಪ್ರಾಧ್ಯಾಪಕ ಎಸ್.ಚಿದಾನಂದ್,
    ಪ್ರೌಢಶಾಲಾ ಶಿಕ್ಷಕ ವೆಂಕಟೇಶ್, ಪ್ರಕಾಶಕ ಸಿ.ಜಿ.ದಿನೇಶ್, ಧರಾಮ ಕಾಲೇಜಿನ ಪ್ರಾಚಾರ್ಯೆ ಆರ್. ವನಜಾ ಇದ್ದರು. ಶರಣಬಸಪ್ಪ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts