ನಾಗಠಾಣ ಕ್ಷೇತ್ರದಲ್ಲಿ ಶಾಸಕ ದೇವಾನಂದ ದಂಪತಿಯ ಭವ್ಯ ಮೆರವಣಿಗೆ, ರಸ್ತೆ ನಿರ್ಮಾಣ ಕಾಮಗಾರಿ ಹಿನ್ನೆಲೆ‌ ಜನರ ಸಂಭ್ರಮಾಚರಣೆ

6

ವಿಜಯಪುರ: ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದ ರಸ್ತೆ ಕಾಮಗಾರಿಗೆ ಚಾಲನೆ‌ ನೀಡಲು ಬಂದ ಶಾಸಕ ದೇವಾನಂದ ಚವಾಣ್ ದಂಪತಿಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ಚಡಚಣ ಪಟ್ಟಣದಲ್ಲಿ 2022-23 ನೇ ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ -4 ರಡಿ ಕೈಗೊಳ್ಳಲಾದ ಪಟ್ಟಣ ಪಂಚಾಯತ್ ಮುಖ್ಯ ಅಗಸಿಯಿಂದ – ಜೀರಂಕಲಗಿ , ಸೊನ್ನಲಗಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಸಮಾರಂಭಕ್ಕೆ ಆಗಮಿಸಿದ್ದ ಶಾಸಕ ದೇವಾನಂದ ಚವಾಣ್ ಹಾಗೂ ಪತ್ನಿ ಸುನಿತಾಗೆ ಶನಿವಾರ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

ಪಟ್ಟಣದ ಮುಖಂಡರುಗಳು, ರೈತ ಬಂಧುಗಳು ಹಾಗೂ ಕಾರ್ಯಕರ್ತರು ಎತ್ತಿನ ಗಾಡಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಅಭೂತಪೂರ್ವ ಸ್ವಾಗತ ಕೋರಿದರು.

ವಿರಕ್ತ ಮಠದ ಪರಮಪೂಜ್ಯ ಷಡಕ್ಷರ ಮಹಾಸ್ವಾಮಿಗಳು, ಆಲಮೇಲ ವಿರಕ್ತ ಮಠದ ಪರಮಪೂಜ್ಯ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಬಾಬುಗೌಡ ಪಾಟೀಲ, ಸಂಗಮೇಶ ಆವಜಿ, ಮುರ್ತುಜಾ ನದಾಪ, ಕಾಂತುಗೌಡ ಪಾಟೀಲ, ಚಂದ್ರಕಾಂತ ನಿರಾಳೆ, ಶೇಖು ನಿರಾಣಿ, ಸುನಿಲ ಮುತ್ತಿನ, ಜಟ್ಟಪ್ಪ ಬನಸೋಡೆ, ಅಮಸಿದ್ದ ಬಳಗಾನೂರ, ಸಿಕಂದರ ಸಾವಳಸಂಗ, ರಾಜಶೇಖರ ಡೋಣಗಾವ, ಬಾಬು ಚವ್ಹಾಣ, ಭೀಮಾಶಂಕರ ವಾಳಿಕಿಂಡಿ, ವಿಠ್ಠಲ ವಡಗಾವ, ಮಹಾದೇವ ಶಿಂಧೆ, ಮಹಾದೇವ ಹಿರೇಕುರುಬರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.