More

    ನರೇಗಾ ಕೂಲಿ ಕಾರ್ವಿುಕ ಸಾವು

    ನರಗುಂದ: ನರೇಗಾ ಕೂಲಿ ಕೆಲಸಕ್ಕೆ ತೆರಳಿದ್ದ ಕಾರ್ವಿುಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಬೆನಕನಕೊಪ್ಪ ಗ್ರಾಮದ ಹನುಮಪ್ಪ ಬಾಲಪ್ಪ ಗುಡಿಸಲಮನಿ (50) ಮೃತಪಟ್ಟವರು. ಇವರು ಮಂಗಳವಾರ ಬೆಳಗ್ಗೆ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಬೆನಕನಕೊಪ್ಪ ಗ್ರಾಮದ ಬಸವ್ವ ಸಿದ್ದಪ್ಪ ಭೂಮಣ್ಣವರ ಎಂಬುವರ ಜಮೀನಿನಲ್ಲಿ ಗ್ರಾಪಂ ವತಿಯಿಂದ ಕೈಗೊಂಡಿದ್ದ ಬದುವು ನಿರ್ಮಾಣ ಕಾಮಗಾರಿಗೆ ತೆರಳಿದ್ದರು. ಆಗ ಎದೆನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪಿಡಿಒ ಹಾಗೂ ಇನ್ನ್ನುಳಿದ ಕೆಲ ಕೂಲಿ ಕಾರ್ವಿುಕರು ತಕ್ಷಣ ಪಕ್ಕದ ಚಿಕ್ಕನರಗುಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಕಾರ್ವಿುಕ ಹನುಮಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ ಮಾತನಾಡಿ, ಮೃತ ಕಾರ್ವಿುಕನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಹೀಗಾಗಿ ನರೇಗಾ ಯೋಜನೆಯಡಿ 75 ಸಾವಿರ ರೂ. ಪರಿಹಾರ ನೀಡುವಂತೆ ಜಿ.ಪಂ.ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ನರಗುಂದ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ಉದ್ಯೋಗ ಖಾತ್ರಿ ಯೋಜನೆಯ ಪ್ರತಿಯೊಬ್ಬ ಕೂಲಿ ಕಾರ್ವಿುಕನಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಸರ್ಕಾರದಿಂದ ಕಾರ್ವಿುಕನ ಕುಟುಂಬಕ್ಕೆ ದೊರೆಯಬೇಕಾದ ಪ್ರತಿಯೊಂದು ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡಬೇಕು ಎಂದು ತಾಪಂ ಇಒ ಸಿ.ಆರ್. ಕುರ್ತಕೋಟಿ ಅವರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts