More

    ನಗರಸಭೆ ಆದಾಯಕ್ಕೆ ಕೊಕ್ಕೆ!

    ಶಿರಸಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ನಿರ್ವಣವಾದ ನಗರಸಭೆಗೆ ಹಸ್ತಾಂತರಿಸಲ್ಪಟ್ಟ ಕಟ್ಟಡದ ಬಾಡಿಗೆ ನೀಡದೆ ವರ್ಷ ಸಮೀಪಿಸುತ್ತಿದೆ. ನಗರ ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದಾಗಿ ಲಕ್ಷಾಂತರ ರೂಪಾಯಿ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

    ಯಲ್ಲಾಪುರ ರಸ್ತೆಯ ಪಕ್ಕ ಈ ಕಟ್ಟಡವನ್ನು 20 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ಕಳೆದ ಫೆ. 5ರಂದು ಕಟ್ಟಡವನ್ನು ನಗರಸಭೆಗೆ ಹಸ್ತಾಂತರಿಸಲಾಗಿತ್ತು. ವಾಣಿಜ್ಯ ಉದ್ದೇಶಕ್ಕೆ ನೀಡಲು ಈ ಕಟ್ಟಡ ನಿರ್ವಿುಸಲಾಗಿತ್ತು. ಆದರೆ, ಈವರೆಗೂ ಬಳಕೆಯಾಗದೆ ಬೀಗ ಹಾಕಿದಂತೆ ಇದೆ.

    ಒಂಬತ್ತು ತಿಂಗಳು ಕಳೆಯುತ್ತ ಬಂದರೂ ಬಾಡಿಗೆ ನೀಡುವ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗಿ, ತೆರಿಗೆ ಹಣ ಅನಗತ್ಯವಾಗಿ ಪೋಲಾದಂತಾಗುತ್ತಿದೆ. ಮೊದಲಿದ್ದ ಮೀನು ಮಾರುಕಟ್ಟೆ ತೆರವುಗೊಳಿಸಿ ಈ ಕಟ್ಟಡ ನಿರ್ವಿುಸಲಾಗಿದೆ. ಆದರೆ, ಕಟ್ಟಡದ ಎದುರು ಜಲ್ಲಿಕಲ್ಲು, ಮರಳಿನ ರಾಶಿ ಸುರಿಯಲಾಗುತ್ತಿದೆ. ಕಟ್ಟಡವನ್ನು ಬಾಡಿಗೆಗೆ ನೀಡುವಂತಾಗಬೇಕು ಎಂಬುದು ಸ್ಥಳೀಯರಾದ ದಿನೇಶ ನಾಯ್ಕ, ಗಣೇಶ ಮುಕ್ರಿ ಇತರರ ಆಗ್ರಹವಾಗಿದೆ.

    ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದು ಸರ್ಕಾರಿ ಇಲಾಖೆಗಳಿಗೆ ಸಲೀಸು ಎಂಬ ಆರೋಪಕ್ಕೆ ವಿದ್ಯಾನಗರದಲ್ಲಿ ನಿರ್ವಿುಸಿದ ಕಟ್ಟಡ ಸಾಕ್ಷಿಯಾಗಿದೆ. ಬಾಡಿಗೆ ನೀಡದೆ ಕಟ್ಟಡ ಖಾಲಿ ಇರುವ ಕಾರಣಕ್ಕೆ ಅಲ್ಲಿ ಅಕ್ರಮ ಚಟುವಟಿಕೆಗೆ ಆಸ್ಪದ ನೀಡಿದಂತಾಗಿದೆ. ಮದ್ಯವ್ಯಸನಿಗಳು ಇಲ್ಲಿ ಕುಡಿದು ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಲಕ್ಷಾಂತರ ರೂ. ವೆಚ್ಚ ಮಾಡಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಿದಂತಾಗಿದೆ.
    | ಕಿರಣ ಶೇಟ್ ನಗರಸಭೆ ಸದಸ್ಯ

    ಕಟ್ಟಡ ಹಸ್ತಾಂತರಗೊಂಡ ಬೆನ್ನಲ್ಲೆ ಕರೊನಾ ಕಾರಣಕ್ಕೆ ಲಾಕ್​ಡೌನ್ ಆಯಿತು. ಇದರಿಂದ ಕಟ್ಟಡವನ್ನು ಬಾಡಿಗೆಗೆ ನೀಡುವ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ಕಟ್ಟಡ ಬಾಡಿಗೆ ನೀಡುವ ಬಗ್ಗೆ ರ್ಚಚಿಸಿ ಒಪ್ಪಿಗೆ ಪಡೆಯಲಾಗಿದೆ. ಕಟ್ಟಡದ ಬಾಡಿಗೆ ಮೌಲ್ಯದ ಬಗ್ಗೆ ವರದಿ ನೀಡಲು ನಿರ್ವಿುತಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಪ್ರಸ್ತುತ ನಗರಾಡಳಿತಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಅವರ ಜತೆ ರ್ಚಚಿಸಿ ಶೀಘ್ರವೇ ಕ್ರಮ ವಹಿಸಲಾಗುವುದು.

    | ರಮೇಶ ನಾಯಕ ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts