More

    ನಗರಸಭಾ ಸದಸ್ಯರ ಪ್ರತಿಭಟನೆ

    ಚಾಮರಾಜನಗರ : ಕೊಳ್ಳೇಗಾಲ ನಗರಸಭೆ ಕೌನ್ಸಿಲ್ ನಿರ್ಣಯ ಉಲಂಘಿಸಿ ಸರ್ವಾಧಿಕಾರಿ ಧೋರಣೆ ಮೆರೆದು ಶಾಸಕ ಎನ್.ಮಹೇಶ್ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ನಡೆಸುತ್ತಿದ್ದಾರೆಂದು ನಗರಸಭಾ ಸದಸ್ಯರು ನಗರದ ಬಸ್ ನಿಲ್ದಾಣ ಎದುರು ಪ್ರತಿಭಟಿಸಿದರು.
    ನಗರಸಭಾ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು ಫಲಕಗಳನ್ನು ಹಿಡಿದು ಪ್ರತಿಭಟಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಸೂಚನೆ ನೀಡಿದರು. ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಸಚಿವ ವಿ.ಸೋಮಣ್ಣ ಅವರೊಂದಿಗೆ ಮಾತನಾಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
    ನಗರಸಭೆ ಅಧ್ಯಕ್ಷೆ ರೇಖಾ ಮಾತನಾಡಿ, ಶಾಸಕರ ಸ್ವಂತ ಪ್ರಚಾರಕ್ಕೆ ಬಸ್ ನಿಲ್ದಾಣ ಉದ್ಘಾಟನೆ ಮಾಡುತ್ತಿದ್ದಾರೆ. ನಗರಸಭಾ ಸದಸ್ಯರನ್ನು ಕಡೆಗಣಿಸಿದ್ದಾರೆ. ಕಾಮಗಾರಿ ಅಪೂರ್ಣವಾಗಿದೆ. ಶೌಚಗೃಹಕ್ಕೆ ಯುಜಿಡಿ, ನೀರಿನ ವ್ಯವಸ್ಥೆಯಿಲ್ಲ. ಪ್ರಯಾಣಿಕರು ಬಕೆಟ್ ನೀರು ಹಿಡಿದು ಶೌಚಗೃಹಕ್ಕೆ ಹೋಗಬೇಕಿದೆ. ಇದರಿಂದ ಮಹಿಳೆಯರಿಗೆ ತೊಂದರೆಯಾಗಲಿದೆ. ಇವೆಲ್ಲ ಸಮಸ್ಯೆ ಇದ್ದರೂ ಸರ್ವಾಧಿಕಾರಿ ಧೋರಣೆ ನಡೆಸುತ್ತ ಬಸ್ ಟರ್ಮಿನಲ್ ಉದ್ಘಾಟನೆಗೆ ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭಾ ಸದಸ್ಯರಾದ ಶಾಂತರಾಜು, ಜಿ.ಪಿ ಶಿವಕುಮಾರ್ ಮಾತನಾಡಿ ಶಾಸಕರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
    ಸಚಿವರ ಭೇಟಿ: ಶಾಸಕ ಎನ್.ಮಹೇಶ್, ಸಿ.ಎನ್.ನಿರಂಜನ್, ಜಿಲ್ಲಾಧಿಕಾರಿ ಡಿ.ಎಸ್ ರಮೇಶ್, ಎಸ್ಪಿ ಪದ್ಮಿನಿ ಸಾಹು ಅವರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ, ಸಾರ್ವಜನಿಕ ಸೇವೆಗೆ ಬಸ್ ನಿಲ್ದಾಣ ಉದ್ಘಾಟನೆ ಮಾಡಲಾಗುತ್ತಿದೆ. ಸಮಾಧಾನದಿಂದ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
    ಸಚಿವರ ಎದುರೇ ಶಾಸಕ ಎನ್.ಮಹೇಶ್ ವಿರುದ್ಧ ಪ್ರತಿಭಟನಾಕಾರರು ಅಕ್ರೋಶ ಹೊರಹಾಕಿದರು. ಶಾಸಕ ಎನ್.ಮಹೇಶ್ ವಿರುದ್ಧ ಘೋಷಣೆ ಕೂಗಿ, ಫಲಕಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts