More

    ನಗನೂರು ಗ್ರಾಪಂ ಚುನಾವಣೆಯಲ್ಲಿ ಅಕ್ರಮ

    ಯಾದಗಿರಿ : ಸುರಪುರ ತಾಲೂಕಿನ ನಗನೂರು ಗ್ರಾಮ ಪಂಚಾಯಿತಿ ಅಧ್ಯP್ಷÀ-ಉಪಾಧ್ಯP್ಷÀ ಚುನಾವಣೆಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಗ್ರಾಪಂ ೧೦ ಸದಸ್ಯರು ಆರೋಪಿಸಿದ್ದಾರೆ.

    ಆ.೪ರಂದು ಅಧ್ಯP್ಷÀ-ಉಪಾಧ್ಯP್ಷÀರ ಚುನಾವಣೆಯಲ್ಲಿ ಚುನಾವಣಾಧಿಕಾರಿ ಬದಲು ಗ್ರಾಪಂ ಪಿಡಿಒ ಎಲ್ಲ ಪ್ರಕ್ರಿಯೆ ಮುಗಿಸಿರುವುದು ಕಾನೂನು ಬಾಹಿರ ಎಂದು ಸದಸ್ಯ ಶಂಕರಗೌಡ ಪಾಟೀಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ೧೯ ಸದಸ್ಯಬಲದ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದು, ಅಧ್ಯP್ಷÀ ಸ್ಥಾನಕ್ಕೆ ನಾನು ಸಹ ಆಕಾಂಕ್ಷಿಯಾಗಿದ್ದೆ. ನಮ್ಮ ಪೆನಾಲ್‌ನ ಬಹುತೇಕ ಸದಸ್ಯರು ಅನP್ಷÀರಸ್ಥರಾದ ಕಾರಣ ಪಿಡಿಒ ಮೂಲಕ ಮತದಾನ ಮಾಡಿಸಲಾಗಿತ್ತು. ಆದರೆ ಒಂದು ಮತ ಅಸಿಂಧುಗೊಳಿಸುವ ಮೂಲಕ ನಾನು ಅಧ್ಯP್ಷÀನಾಗುವುದನ್ನು ತಡೆಯಲಾಗಿದೆ. ಈ ಬಗ್ಗೆ ಚುನಾವಣೆ ದಿನವೇ ನಮ್ಮ ಪೆನಾಲ್ ಸದಸ್ಯರು ವಿರೋಧಿಸಿದರೂ ಲಾಟರಿ ಮೂಲಕ ಅಧ್ಯP್ಷÀರ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಹೀಗಾಗಿ ಪಿಡಿಒ ಶ್ರೀಶೈಲ್ ಹಳ್ಳಿ ವಿರುದ್ಧ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಅಧ್ಯP್ಷÀರ ಆಯ್ಕೆ ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದು, ಇದರಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಶಂಕ್ರಣ್ಣ ವಣಿಕ್ಯಾಳ ಹಸ್ತಕ್ಷೇಪವಿದೆ. ಪ್ರತಿಸ್ಪರ್ಧಿಗಳು ನಮ್ಮವರಿಗೆ ಸಾಕಷ್ಟು ಆಮಿಷ ಒಡ್ಡಿದ್ದರು. ಇದಾವುದಕ್ಕೂ ಜಗ್ಗದ ಕಾರಣ ಚುನಾವಣೆಯಲ್ಲಿ ಈ ಕುತಂತ್ರ ಮಾಡಲಾಗಿದೆ. ಕೂಡಲೇ ಜಿಲ್ಲಾಡಳಿತ ಮರು ಚುನಾವಣೆ ಮಾಡಬೇಕು. ಇಲ್ಲವಾದರೆ ಎಲ್ಲ ೧೦ ಸದಸ್ಯರು ಗ್ರಾಮಸ್ಥರೊಂದಿಗೆ ಚರ್ಚಿಸಿ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಸಿದರು.
    ಸದಸ್ಯರಾದ ವಿಶ್ವನಾಥರಡ್ಡಿ ಸಾವೂರ, ಸಿದ್ದಮ್ಮ, ಯಮುನಮ್ಮ, ನೀಲಗಂಗಮ್ಮ, ಲಚಮವ್ವ, Áತಿಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts