More

    ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶ ಪಾಲನೆ

    ಬೇಲೂರು: ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ಮುಸ್ಲಿಂ ಧರ್ಮಗುರು ಕುರ್‌ಆನ್ ಪಠಣ ಮಾಡುವ ಬಗ್ಗೆ ಪರ-ವಿರೋಧ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ನೀಡಿರುವ ಆದೇಶದಂತೆ ಆಡಳಿತ ಮಂಡಳಿ ನಡೆದುಕೊಳ್ಳಲಿದೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ವಿದ್ಯುಲತಾ ಹೇಳಿದರು.


    ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದಿದ್ದರಿಂದ ಆಗಮಿಕ ಪಂಡಿತರನ್ನು ಕಳುಹಿಸಿದ್ದರು. ಅವರು ಇಲ್ಲಿನ ಮ್ಯಾನ್ಯೂಯಲ್ ಕೈಪಿಡಿ ಪರಶೀಲಿಸಿ ಸ್ಥಳೀಯರ ಅಭಿಪ್ರಾಯ ಪಡೆದು ಆಯುಕ್ತರಿಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಮಗೆ ಆದೇಶ ಕಳುಹಿಸಿದ್ದಾರೆ. ಇದರಲ್ಲಿ ನಮಗೆ ಸ್ಪಷ್ಟವಾಗಿ ತಿಳಿಸಿದ್ದು, ಮ್ಯಾನ್ಯೂಯಲ್‌ನಲ್ಲಿ ಎಲ್ಲೂ ಕುರ್‌ಆನ್ ಪಠಣ ಹಾಗೂ ರಥದ ಮುಂದೆ ಓದಬೇಕು ಎಂದು ತಿಳಿಸಿಲ್ಲ. ಅವರು ಬಂದು ದೇವರಿಗೆ ವಂದನೆ ಸಲ್ಲಿಸಿದ ನಂತರ ದೇಗುಲದಿಂದ ಏನು ಮರ್ಯಾದೆ ಸಲ್ಲಿತ್ತದೊ ಅದನ್ನು ಸ್ವೀಕರಿಸಬೇಕು ಎಂದು ತಿಳಿಸಿದ್ದಾರೆ.


    ಈ ಆದೇಶವನ್ನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಪೊಲೀಸರ ಗಮನಕ್ಕೂ ತಂದಿದ್ದು, ಆಯುಕ್ತರ ಆದೇಶದಂತೆ ಆಡಳಿತ ಮಂಡಳಿ ನಡೆದುಕೊಳ್ಳಲಿದ್ದೇವೆ. ಈ ಸಂಬಂಧ ದೊಡ್ಡಮೇದೂರಿನ ಮುಸ್ಲಿಂ ಧರ್ಮಗುರು ಸಯ್ಯದ್ ಸಜ್ಜಾದ್ ಬಾಷಾ ಖಾದ್ರಿ ಅವರ ಗಮನಕ್ಕೂ ತಂದಿದ್ದೇವೆ. ಅವರು ಬರುತ್ತೇವೆ ಎಂದು ತಿಳಿಸಿದ್ದಾರೆ. ಅವರು ಬಂದಲ್ಲಿ ದೇವರ ಉತ್ಸವ ಮೂರ್ತಿ ಕೂರಿಸುವ ಸ್ಥಳದಲ್ಲಿ ದೇವರಿಗೆ ವಂದನೆ ಸಲ್ಲಿಸಲು ಅವರಿಗೆ ಅವಕಾಶ ಮಾಡಿ ಕೊಡಲಿದ್ದೇವೆ ಎಂದರು.
    ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸದಸ್ಯರಾದ ಮೋಹನ್‌ಕುಮಾರ್, ವಿಜಯಲಕ್ಷ್ಮೀ, ರವೀಂದ್ರ, ಪ್ರಮೋದ್, ರವಿಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts