More

    ಧಾರವಾಡದಲ್ಲಿ 234 ಜನರಿಗೆ ಸೋಂಕು

    ಧಾರವಾಡ: ಜಿಲ್ಲೆಯಲ್ಲಿ ಗುರುವಾರ 234 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 10154ಕ್ಕೆ ಏರಿದೆ. ಈವರೆಗೆ 7243 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2623 ಪ್ರಕರಣಗಳು ಸಕ್ರಿಯವಾಗಿವೆ. ಶೇ. 75ರಷ್ಟು ಸೋಂಕಿತರು ಕರೊನಾ ವೈರಸ್​ಅನ್ನು ಗೆದ್ದು ಬಂದಿದ್ದಾರೆ ಎಂಬುದು ಸ್ವಲ್ಪ ಸಮಾಧಾನದ ಸಂಗತಿ.

    ಸದ್ಯ 68 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಒಟ್ಟು 289 ಜನ ಕರೊನಾದಿಂದ ಮೃತಪಟ್ಟಿದ್ದಾರೆ. ಆದರೆ, ಗುರುವಾರದಂದು ಸಾವು ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.

    ಈ ದಿನ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ ಸುಮಾರು 50 ಪ್ರದೇಶಗಳಲ್ಲಿ ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಹುಬ್ಬಳ್ಳಿ ನಗರ, ಗ್ರಾಮೀಣ ಸೇರಿ ಅಂದಾಜು 70 ಪ್ರದೇಶಗಳಲ್ಲಿ ಪ್ರಕರಣಗಳು ಕಂಡುಬಂದಿವೆ. ಇವುಗಳಲ್ಲಿ ನಗರದ ಜನರೇ ಜಾಸ್ತಿ ಇದ್ದಾರೆ.

    ಕಲಘಟಗಿ ತಾಲೂಕಿನ ಭೋಗೆನಾಗರಕೊಪ್ಪ, ಹುಲ್ಲಂಬಿ, ಹುಲಿಕಟ್ಟಿ, ಸೂರಶೆಟ್ಟಿಕೊಪ್ಪ, ಮಿಶ್ರಿಕೋಟಿ; ನವಲಗುಂದದ ಶಿರೂರ ಗ್ರಾಮದ ಚಿಟ್ಟೆ ಓಣಿ, ಶಲವಡಿ ಗ್ರಾಮದ ಶಾನುಭೋಗರ ಓಣಿ; ಅಣ್ಣಿಗೇರಿಯ ನಲವಡಿ; ಕುಂದಗೋಳದ ನೀಲಗುಂದ, ಹರ್ಲಾಪುರ, ಗುಡಗೇರಿ, ಕೂಬಿಹಾಳ, ಸಂಶಿಯ ಅಂಬೇಡ್ಕರ ನಗರದಲ್ಲಿ ಪ್ರಕರಣ ಪತ್ತೆ ಯಾಗಿವೆ.ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಹಾವೇರಿಯ ಬೆಳವಲಕೊಪ್ಪದ ಸೋಂಕಿತರು ಧಾರವಾಡ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts