More

    ಧರ್ಮಜಾಗೃತಿ ಬೇರೂರಲು ಶ್ರಮಿಸಿ

    ಕೆಂಭಾವಿ : ಆಧುನಿಕತೆಯಿAದಾಗಿ ಯುವಕರು ಧರ್ಮ, ಸಂಸ್ಕೃತಿ ಮತ್ತು ಭಕ್ತಿ-ಶ್ರದ್ಧೆ ಮರೆಯುತ್ತಿದ್ದಾರೆ. ಹೀಗಾಗಿ ಹಿರಿಯರು ಪ್ರತಿಯೊಬ್ಬರಲ್ಲಿ ಧರ್ಮಜಾಗೃತಿ ಬೇರೂರುವಂತೆ ಮಾಡಲು ಶ್ರಮಿಸಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

    ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಮಹಾಶಕ್ತಿ ಜಗನ್ಮಾತೆ ಶ್ರೀದೇವಿ, ಗೋತ್ರ ಪುರುಷ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ, ದೇವಾಲಯ ಲೋಕಾರ್ಪಣೆ, ಕಳಸಾರೋಹಣ, ಶ್ರೀಮಠದ ಶಿಲಾ ಮಂಟಪ ಶಂಕುಸ್ಥಾಪನೆ, ಅಯ್ಯಾಚಾರ, ಶಿವದೀಕ್ಷೆ ಹಾಗೂ ಭಾವೈಕ್ಯ ಜನಜಾಗೃತಿ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದಿನ ಶಿಕ್ಷಣ ಭರಾಟೆಯಲ್ಲಿ ಯುವಕರು ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಜತೆಗೆ ಅಧ್ಯಾತ್ಮ ಚಿಂತನದ ಶಿಕ್ಷಣ ನೀಡುವಂತಾಗಬೇಕು ಎಂದು ಆಶಿಸಿದರು.

    ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಅತ್ಯಂತ ಶ್ರೇಷ್ಠ. ಅಂತಹ ಮಾನವ ಧರ್ಮದ ತಳಹದಿ ಮೇಲೆ ನಮ್ಮ ವೀರಶೈವ ಧರ್ಮ ಮುನ್ನಡೆಯುತ್ತಿದೆ. ಅಗಸ್ತö್ಯ ಋಷಿಗಳಿಗೆ ರೇಣುಕಾಚಾರ್ಯರು ಹತ್ತು ಧರ್ಮದ ಬೋಧನೆ ಮಾಡಿದ್ದರು. ಅಂಥ ಧರ್ಮಾಧಾರಿತ ತತ್ವಗಳ ಮೇಲೆ ವೀರಶೈವ ಧರ್ಮ ಮುಂದುವರಿದಿದೆ. ಧರ್ಮ ಕಾರ್ಯದಲ್ಲಿ ಕೆಂಭಾವಿ ಹಿರೇಮಠ ಸಂಸ್ಥಾನದ ಶ್ರೀ ಚನ್ನಬಸವ ಶಿವಾಚಾರ್ಯರು ಮಾಡುತ್ತಿರುವ ಕಾರ್ಯ ಅಭಿನಂದನಾರ್ಹ ಎಂದು ಕೊಂಡಾಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ ಲಿಂಗನಗೌಡ ಮಾಲಿಪಾಟೀಲ್ ಮಾತನಾಡಿ, ಕೆಂಭಾವಿಯ ಶ್ರೀ ರೇವಣಸಿz್ದೆÃಶ್ವರ ದೇವಸ್ಥಾನಕ್ಕೂ ಮತ್ತು ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೂ ಇರುವ ಅವಿನಾಭಾವ ಸಂಬAಧದ ಬಗ್ಗೆ ತಿಳಿಸಿದರು.

    ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಿವಮೂರ್ತಿ ಶಿವಾಚಾರ್ಯ, ಶ್ರೀ ಸೋಮನಾಥ ಶಿವಾಚಾರ್ಯ, ಶ್ರೀ ಮರಳ ಮಹಾಂತ ಶಿವಾಚಾರ್ಯ, ಶ್ರೀ ಸೋಮೇಶ್ವರ ಶಿವಾಚಾರ್ಯ, ಶ್ರೀ ರಾಜಯೋಗಿ ವಿರಾಜೇಂದ್ರ ಸ್ವಾಮೀಜಿ, ಶ್ರೀ ಭುವನೇಶ್ವರ ಸ್ವಾಮೀಜಿ, ಶ್ರೀ ಗಜದಂಡ ಶಿವಾಚಾರ್ಯ, ಶ್ರೀ ಶಿವಪ್ರಕಾಶ ಶರಣು, ಪುರಸಭೆ ಸದಸ್ಯರಾದ ಪ್ರಿಯಾ ರಾಮನಗೌಡ, ಮಹ್ಮದ್ ಆರಿಫ್ ಖಾಜಿ, ಮುಖಂಡರಾದ ವಾಮನರಾವ ದೇಶಪಾಂಡೆ, ಸುರೇಶ ಸಜ್ಜನ್, ಶರಣಬಸ್ಸು ಡಿಗ್ಗಾವಿ, ಅಮೀನರೆಡ್ಡಿ ಪಾಟೀಲ್ ಯಾಳಗಿ, ಅರುಣೋದಯ ಸೊನ್ನದ, ಸಾಹೇಬ್‌ಲಾಲ್ ಆಂದೇಲಿ, ಮಹಿಪಾಲರೆಡ್ಡಿ ಡಿಗ್ಗಾವಿ, ಕೃಷ್ಣಯ್ಯ ಗುತ್ತೇದಾರ್, ಪಿಎಸ್‌ಐ ವೆಂಕಣ್ಣ ಶಹಾಪುರ, ಎಎಸ್‌ಐ ಬಲರಾಮ ರಾಠೋಡ ಇತರರಿದ್ದರು.

    ನಿಂಗನಗೌಡ ದೇಸಾಯಿ ಸ್ವಾಗತಿಸಿದರು. ರಾಜಶೇಖರಯ್ಯ ಹಿರೇಮಠ ವಂದಿಸಿದರು. ಡಾ.ವೆಂಕನಗೌಡ ಪೊಲೀಸ್ ಪಾಟೀಲ್ ಹಾಗೂ ಅಮರಯ್ಯ ಸ್ವಾಮಿ ಜಾಲಿಬಂಚಿ ನಿರೂಪಣೆ ಮಾಡಿದರು.

    ಕರ‍್ಯಕ್ರಮಕ್ಕೂ ಮೊದಲು ಕೆಂಭಾವಿಗೆ ಆಗಮಿಸಿದ ರಂಭಾಪುರಿ ಜಗದ್ಗುರುಗಳನ್ನು ಸಾರೋಟಿನಲ್ಲಿ ಸುಮಂಗಲೆಯರು ಪೂರ್ಣಕುಂಭ, ಡೊಳ್ಳು ವಾದ್ಯ, ಬಾಜಾ-ಭಜಂತ್ರಿಯೊAದಿಗೆ ಮೆರವಣಿಗೆ ಮೂಲಕ ಬರಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts