More

    ದುಶ್ಚಟ ದುಷ್ಪರಿಣಾಮದ ಅರಿವು ಅಗತ್ಯ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲೀಲಾವತಿ ಅಭಿಪ್ರಾಯ



    ಮೈಸೂರು : ಹದಿಹರೆಯದ ವಯಸ್ಸಿನಿಂದ ಯೌವನಾವಸ್ಥೆಗೆ ಕಾಲಿಡುತ್ತಿರುವ ಸಂದರ್ಭದಲ್ಲಿ ದುಶ್ಚಟಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಅಗತ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದರು.

    ಪಿರಿಯಾಪಟ್ಟಣದ ಹಿಟ್ನೆಹೆಬ್ಬಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


    ಸಾಮಾನ್ಯವಾಗಿ ಹದಿಹರೆಯದ ವಿದ್ಯಾರ್ಥಿಗಳು ಬಹಳ ಬೇಗ ಮಾದಕ ವಸ್ತುಗಳ ಬಗ್ಗೆ ಆಕರ್ಷಣೆಗೆ ಒಳಗಾಗಲಿದ್ದು, ಮೊದಮೊದಲು ಮೋಜಿಗೆ, ಶೋಕಿಗಾಗಿ ಆರಂಭವಾಗುವ ಈ ಸೇವನೆ, ನಂತರದ ದಿನಗಳಲ್ಲಿ ದುಶ್ಚಟಗಳಾಗಿ ಪರಿಣಮಿಸಿ ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತವೆ ಎಂದರು.
    ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವ ಮಾದಕ ಪದಾರ್ಥಗಳ ಸೇವನೆಯು ಸಾವಿನೆಡೆಗೆ ಕೊಂಡೊಯ್ಯುತ್ತದೆ.

    ಹದಿಹರೆಯದ ಯುವ ಸಮಾಜವು ದುಶ್ಚಟಗಳ ಆಕರ್ಷಣೆಗೆ ಒಳಗಾಗದೆ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರವಾದ ಜೀವನಶೈಲಿ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.


    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಿರಿಯಾಪಟ್ಟಣ ವಲಯದ ಯೋಜನಾಧಿಕಾರಿ ಸುರೇಶ್‌ಶೆಟ್ಟಿ ಮಾತನಾಡಿ, ಮಾದಕ ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಈಡಾಗುವ ಸಾಧ್ಯತೆಗಳಿದ್ದು, ಮಾದಕ ವ್ಯಸನಗಳು ಮತ್ತು ವಸ್ತುಗಳಿಂದ ದೂರವಿರಬೇಕು. ತಂಬಾಕು, ಮದ್ಯಸೇವನೆ, ಡಗ್ಸ್ ಸೇವನೆ ಮುಂತಾದ ದುಶ್ಚಟಗಳಿಂದ ಅಂತರ ಕಾಯ್ದುಕೊಂಡಲ್ಲಿ ಉತ್ತಮ ವಿದ್ಯಾರ್ಥಿ ಜೀವನನ್ನು ಕಾಣಬಹುದಾಗಿದೆ ಎಂದರು.
    ಮಾದಕ ಪದಾರ್ಥಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶಾಲಾ, ಕಾಲೇಜುಗಳಲ್ಲಿ ಮಾಸಾಚರಣೆ ಹಮ್ಮಿಕೊಳ್ಳುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.


    ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನವೀನ್‌ಕುಮಾರ್ ಅವರು, ದುಶ್ಚಟಗಳು ಮತ್ತು ಅವುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಮಾದಕ ಪದಾರ್ಥಗಳ ಸೇವನೆಯಿಂದ ದೇಹದ ಮೇಲೆ ಮತ್ತು ಮಾನಸಿಕತೆಯ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


    ಗ್ರಾ.ಪಂ. ಅಧ್ಯಕ್ಷ ಕಾಮರಾಜು, ಎಸ್‌ಡಿಎಂಸಿ ಅಧ್ಯಕ್ಷ ಶಂಕರ್, ಶಾಲಾ ಮುಖ್ಯ ಶಿಕ್ಷಕ ಎಚ್.ಎಂ.ಶ್ರೀನಿವಾಸ್, ಗ್ರಾಮದ ಯಜಮಾನರಾದ ಶಂಕರ್, ಮುಖಂಡ ವಿನೋದ್‌ಕುಮಾರ್, ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ ಗೀತಾ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts