More

    ದಾವಣಗೆರೆ ಜಿಲ್ಲೆಯಲ್ಲಿ ಮಳೆಯಿಂದ ಬೆಳೆಗೆ ಹಾನಿ


    ದಾವಣಗೆರೆ : ತುಂಗಭದ್ರಾ ನದಿಯಲ್ಲಿ ನೀರು ಅಪಾಯದ ಮಟ್ಟವನ್ನು ಸಮೀಪಿಸಿದೆ. ಹರಿಹರದ ಗಂಗಾನಗರದ 5 ಕುಟುಂಬಗಳನ್ನು ಎಪಿಎಂಸಿಯಲ್ಲಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
    ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಹತ್ತೂರು, ಮಾದೇನಹಳ್ಳಿ, ದೊಡ್ಡೇಹಳ್ಳಿಯಲ್ಲಿ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ. ನದಿ ತೀರದ ಜನತೆಗೆ ಸುರಕ್ಷಿತ ಸ್ಥಳಗಳಿಗೆ ಹೋಗಲು ತಾಲೂಕು ಆಡಳಿತ ಮನವಿ ಮಾಡಿದೆ.
    ಹೊನ್ನಾಳಿ ಪಟ್ಟಣದ ಒಡ್ಡಿನಕೆರೆ ಹಳ್ಳದ ಸುತ್ತಮುತ್ತ, ಸರ್ ಎಂ. ವಿಶ್ವೇಶ್ವರಯ್ಯ ಶಾಲೆಗೆ ನೀರು ನುಗ್ಗಿತ್ತು. ಜಿಲ್ಲೆಯಲ್ಲಿ 7 ಮಿ.ಮೀ. ಮಳೆಯಾಗಿದ್ದು, 11.60 ಲಕ್ಷ ರೂ. ನಷ್ಟವಾಗಿದೆ.
    ದಾವಣಗೆರೆ ತಾಲೂಕಿನಲ್ಲಿ 1, ಹರಿಹರ 6 ಮನೆಗಳಿಗೆ ಹಾನಿಯಾಗಿದೆ. ನ್ಯಾಮತಿ ತಾಲೂಕಿನಲ್ಲಿ 3 ಮನೆ ಮತ್ತು 2 ದನದ ಕೊಟ್ಟಿಗೆಗೆ ಹಾನಿಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ 7 ಮನೆಗಳಿಗೆ ಹಾನಿಯಾಗಿದೆ.
    ಚನ್ನಗಿರಿ 10.5 ಮಿ.ಮೀ, ದಾವಣಗೆರೆ 7 ಮಿ.ಮೀ, ಹರಿಹರ 5 ಮಿ.ಮೀ, ಹೊನ್ನಾಳಿ 11.9 ಮಿ.ಮೀ, ಜಗಳೂರು 2.5 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 10 ಮಿ.ಮೀ. ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts