More

    ದಾವಣಗೆರೆಯಲ್ಲಿ ಗುರುವಂದನಾ ಕಾರ್ಯಕ್ರಮ- ಅನ್ನದಾನಕ್ಕಿಂತ ವಿದ್ಯಾದಾನ ಮಿಗಿಲು-ಆರ್.ಸಿ. ಕೃಷ್ಣಮೂರ್ತಿ

    ದಾವಣಗೆರೆ: ಅನ್ನದಾನಕ್ಕಿಂತ ವಿದ್ಯಾದಾನವು ಸ್ಮರಣೀಯ. ಅನ್ನದಾನ ಒಂದು ಹೊತ್ತಿನ ಹಸಿವನ್ನು ಇಂಗಿಸಿದರೆ ವಿದ್ಯಾದಾನ ವ್ಯಕ್ತಿಯ ಭವಿಷ್ಯವನ್ನು ರೂಪಿಸಿ ಜೀವನವಿಡೀ ಕಾಪಾಡಲಿದೆ ಎಂದು ನಿವೃತ್ತ ಶಿಕ್ಷಕ ಆರ್.ಸಿ. ಕೃಷ್ಣಮೂರ್ತಿ ಹೇಳಿದರು.
    ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳು ಇಲ್ಲಿನ ಕುವೆಂಪು ಕನ್ನಡಭವನದಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.
    ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯಗತ್ಯ. ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಇಂತಹ ಗುರುವಂದನಾ ಕಾರ್ಯಕ್ರಮಗಳಿಂದಾಗಿ ಸಂಧ್ಯಾ ಕಾಲದಲ್ಲಿರುವ ಶಿಕ್ಷಕರ ಆಯುಷ್ಯವನ್ನು ಹೆಚ್ಚಿಸಲಿದೆ. ಜೀವನೋತ್ಸಾಹ ತುಂಬಲಿದೆ ಎಂದು ಹೇಳಿದರು.
    ಸನ್ಮಾನಿತರಾದ ಕೆ. ಹಾಲಪ್ಪ ಮಾತನಾಡಿ ಗುರುವಂದನೆ ಗುರು-ಶಿಷ್ಯರು ಪರಸ್ಪರ ಸಿಹಿ ಕಹಿ ಹಂಚಿಕೊಳ್ಳುವ ಶುಭ ಸಂದರ್ಭ. ನಿಮ್ಮ ಸನ್ಮಾನ ನಮ್ಮ ಆಯುಷ್ಯ ಆರೋಗ್ಯವನ್ನು ವೃದ್ಧಿಸಿದೆ ಎಂದು ಹೇಳಿದರು.
    ಸನ್ಮಾನಿತರಾಗಿ ಮಾತನಾಡಿದ ಸಿ.ಶಿವಾನಂದಪ್ಪ, ವಿದ್ಯಾರ್ಥಿಗಳು ಸಾಮಾನ್ಯಜ್ಞಾನ ಬೆಳೆಸಿಕೊಂಡು ವಿದ್ಯಾರ್ಜನೆ ಮಾಡಿದರೆ ಜೀವನ ಉತ್ತಮವಾಗಲಿದೆ. ಸುಖ ಜೀವನದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ತೃಪ್ತಿ ಸಿಗಲಿದೆ ಎಂದು ಹೇಳಿದರು.
    ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಬಿ. ರಂಗನಾಥ್ ಮಾತನಾಡಿ ಇಂದು ಎಲ್ಲೆಡೆ ಸಾಮಾಜಿಕವಾಗಿ ಮನಸ್ಸನ್ನು ಕೆರಳಿಸುವ ಕಾರ್ಯಗಳೇ ಹೆಚ್ಚಿವೆ. ಮನಸ್ಸನ್ನು ಅರಳಿಸುವ ಅವಕಾಶಗಳು ವಿರಳವಾಗಿವೆ. ಗುರುವಂದನಾ ಕಾರ್ಯಕ್ರಮ ಅರ್ಥಗರ್ಭಿತವಾಗಿದೆ ಎಂದರು.
    ಸಿರಿಗೆರೆಯ ಹಿರಿಯ ಶ್ರೀಗಳ ಈ ನೆಲದಲ್ಲಿ ಅವರ ದೂರದರ್ಶಿತ್ವದ ಶಿಕ್ಷಣದ ಪರಿಣಾಮ ಇಲ್ಲಿ ಓದಿದ ವಿದ್ಯಾರ್ಥಿಗಳು ಸ್ಪೂರ್ತಿ ಪಡೆದು ಉತ್ತಮ ಸಂಸ್ಕಾರ ರೂಢಿಸಿಕೊಂಡು ದೇಶ ವಿದೇಶಗಳಲ್ಲಿ ಜೀವನ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
    ಹಾಸ್ಟೆಲ್ ನಿಲಯ ಪಾಲಕ ಎಸ್.ರೇವಣಸಿದ್ದಯ್ಯ, ಹಿರಿಯ ವಿದ್ಯಾರ್ಥಿಗಳಾದ ಕಡ್ಲೆಬಾಳ್ ಸಿದ್ದೇಶ್, ಡಾ.ಸಿ ಎಲ್ ಶಿವಮೂರ್ತಿ, ಡಾ.ಶ್ರೀನಿವಾಸ್, ಯಶಸ್ವಿನಿ ಹೆಗಡೆ, ಕಿರಣಕುಮಾರ್ ಸಜ್ಜನ್ ಮಾತನಾಡಿದರು.
    ಶಿಕ್ಷಕರಾದ ಆರ್.ಸಿ. ಕೃಷ್ಣಮೂರ್ತಿ ಶೆಟ್ಟಿ, ಎಸ್.ಎಸ್.ಮೂಲಿಮನಿ, ಎಸ್.ಆರ್. ರೇವಣಸಿದ್ದಯ್ಯ, ಟಿ.ಆರ್. ಸಿದ್ದಯ್ಯ, ಜೆ.ಆರ್.ಓಂಕಾರಪ್ಪ, ಎನ್. ಜಯಪ್ಪ, ಜಿ.ಎಲ್. ಬಣಕಾರ್, ಎಲ್.ಎಸ್, ಕುಬಸದ್, ಎ.ಎಸ್.ನಾಗರಾಜ್, ಟಿ,ಎಂ. ಪರಮೇಶ್ವರಯ್ಯ, ಎಚ್.ಎಸ್. ಪಾಟೀಲ್, ಕೆ.ಜಿ.ಕುಬೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts