More

    ದಲಿತಕೇರಿಯಲ್ಲಿ ಜನರ ಕಷ್ಟ ಕೇಳಿದ ಡಿಸಿ, ಕೆಲ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದ ಜಿಲ್ಲಾಧಿಕಾರಿ ಶ್ರೀನಿವಾಸ್, ಶಾಲೆಯಲ್ಲೇ ಊಟ, ನಿದ್ರೆ

    ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಕಲ್ಲುಕುಂಟೆ ಅಗ್ರಹಾರದ ದಲಿತ ಕೇರಿಗಳಲ್ಲಿ ಕಾಲ್ನಡಿಗೆ ಮೂಲಕ ತೆರಳಿ ಜನರ ಕುಂದುಕೊರತೆ ಆಲಿಸುವ ಮೂಲಕ ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಭಾನುವಾರ ತೆರೆಬಿದ್ದಿತು.

    ಹರಿಜನ ಕಾಲನಿ ನಿವಾಸಿ ಮುನಿಯಪ್ಪ ಅವರ ಮನೆಯಲ್ಲಿ ಬೆಳಗ್ಗೆ ಉಪಾಹಾರ ಸೇವಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಅಧಿಕಾರಿಗಳ ತಂಡ, ಬಳಿಕ ದಲಿತ ಕೇರಿಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿತು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಸೂಚಿಸಲಾಯಿತು. ಕೆಲವೊಂದು ಸಮಸ್ಯೆಗಳನ್ನು ಕಾಲಮಿತಿ ನಿಗದಿಗೊಳಿಸಿ ಅಷ್ಟರೊಗಳಗೆ ಪರಿಹಾರ ಸೂಚಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಶಾಲೆಯಲ್ಲಿ ವಾಸ್ತವ್ಯ: ೆ.19 ಶನಿವಾರ ಬೆಳಗ್ಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ 360 ಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತು ವಿತರಿಸಲಾಯಿತು. ಸಂಜೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ನಡೆಸಿ ರಾತ್ರಿಯವರೆಗೆ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಾಯಿತು. ನಂತರ ರಂಗನಾಥ ಶಾಲೆಯಲ್ಲಿ ಊಟ ಮುಗಿಸಿ ಶಾಲೆಯಲ್ಲೇ ವಾಸ್ತವ್ಯ ಹೂಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts