More

    ತ್ಯಾಜ್ಯ ವಿಲೇವಾರಿ ಕಿರು ಉದ್ಯಮವಾಗಲಿ

    ಯಾದಗಿರಿ : ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ವಿಂಗಡನೆ ಮಾಡಲು ಸೂಕ್ತ ತರಬೇತಿ ನೀಡಿದ್ದಲ್ಲಿ ಭವಿಷ್ಯದಲ್ಲಿ ಅದೊಂದು ಕಿರು ಉದ್ಯಮವಾಗಲಿದೆ ಎಂದು ಜಿಪಂ ಸಿಇಒ ಗರೀಮಾ ಪನ್ವಾರ್ ಸಲಹೆ ನೀಡಿದರು.

    ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದಲ್ಲಿ ಶನಿವಾರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಹಾಗೂ ಸಂಸ್ಕರಣೆ ಮಾಡುವ ಕುರಿತು ಗ್ರಾಪಂ ಸ್ವಚ್ಛತಾಗಾರರಿಗೆ ಹಾಗೂ ಪಂಚಾಯಿತಿ ಮಟ್ಟದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಗಾರದ ಸಮಾರೋಪದಲ್ಲಿ ಮಾತನಾಡಿದರು.

    ಗ್ರಾಮದ ಪ್ರತಿಯೊಂದು ಮನೆಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ಯೋಜಿತ ಕ್ರಮದಲ್ಲಿ ಸಂಗ್ರಹಿಸಿ ಮಾರಾಟ ಮಾಡುವುದರಿಂದ ಆದಾಯ ಗಳಿಸಬಹುದು ಎಂಬ ನಂಬಿಕೆ ಗ್ರಾಮೀಣ ಜನರಲ್ಲಿ ಬರಬೇಕಿದೆ ಎಂದರು.

    ಬಳಕೆ ಮಾಡಿದ ಪ್ಲಾಸ್ಟಿಕ್ ಸುಡುವುದರಿಂದ ವಿಷಕಾರಿ ಅನಿಲ ಹೊರಸೂಸುತ್ತವೆ. ಕಸವನ್ನು ಚರಂಡಿಗಳಲ್ಲಿ ಎಸೆದರೆ ನೀರಿಗೆ ಅಡ್ಡಲಾಗಿ ನಿಂತು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡಿ ಇಡೀ ವಾತಾವರಣ ಹಾಳಾಗುತ್ತದೆ. ಜನರು ತಮ್ಮ ಮನೆಯ ಕಸವನ್ನು ಚರಂಡಿ, ಮನೆ ಮುಂದಿನ ರಸ್ತೆಗೆ ಬಿಸಾಡುವುದು, ಸುಡುವುದನ್ನು ಬಿಟ್ಟು ಹಸಿಕಸ ಒಣಕಸ ಎಂದು ಮನೆಯ ಹಂತದಲೇ ವಿಂಗಡಿಸಬೇಕು ಎಂದು ಸಲಹೆ ನೀಡಿದರು.

    ಗ್ರಾಪಂನಿAದ ಬರುವ ಸ್ವಚ್ಛತಾ ವಾಹಿನಿ ವಾಹನದಲ್ಲಿ ಕಸವನ್ನು ವಿಲೇವಾರಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಕಟ್ಟಡ ತ್ಯಾಜ್ಯ, ಚರಂಡಿ ನೀರು, ಹಸಿಕಸ, ಒಣಕಸ, ಪ್ಲಾಸ್ಟಿಕ್ ತ್ಯಾಜ್ಯ, ಪೇಪರ್ ಗ್ಲಾಸ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ಆದಾಯ ಗಳಿಸುವ ಜತೆ ಮರುಬಳಕೆಯ ವಸ್ತುಗಳು ಹಾಗೂ ಉಪ ಉತ್ಪನ್ನಗಳನ್ನು ತಯಾರಿಸಬಹುದು ಎಂದು ತಿಳಿಸಿದರು.

    ಶಹಾಪುರ ತಾಪಂ ಇಒ ಸೋಮಶೇಖರ ಬಿರಾದಾರ, ಸಹಾಯಕ ನಿರ್ದೇಶಕ ಭೀಮರಾಯ ಬಿರಾದಾರ, ಗ್ರಾಪಂ ಅಧ್ಯಕ್ಷೆ ದೇವಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts