More

    ತವಂದಿಯಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ

    ನಿಪ್ಪಾಣಿ: ತಾಲೂಕಿನ ತವಂದಿ ಗ್ರಾಮದಲ್ಲಿ ಹದಗೆಟ್ಟ ರಸ್ತೆಗಳಲ್ಲಿ ಕಾಲಿಡಲು ಬರುತ್ತಿರಲಿಲ್ಲ. ಹೀಗಾಗಿ, ರಸ್ತೆ ಸೇರಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

    ತವಂದಿ ಗ್ರಾಮದಲ್ಲಿ ಈಚೆಗೆ ಜರುಗಿದ ಅರಿಶಿಣ-ಕುಂಕುಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ನಿವೃತ್ತ ಸೈನಿಕರಿಗೆ 10 ಎಕರೆ ಜಾಗ ಕಲ್ಪಿಸಿ, ಕಾಲನಿ ಮಾಡುವ ಚಿಂತನೆ ನಡೆದಿದೆ. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ವಿಸ್ತರಿಸಿದ್ದರಿಂದ ಕ್ಷೇತ್ರದ 500 ಯುವಕರಿಗೆ ಉದ್ಯೋಗವಕಾಶ ನೀಡಲಾಗಿದೆ ಎಂದರು. ಮುಖಂಡ ಮಲಗೊಂಡ ಪಾಟೀಲ ಮಾತನಾಡಿ, ದೇವಾಲಯ ಸೇರಿ ಕ್ಷೇತ್ರದ ಎಲ್ಲ ಮಸೀದಿಗಳ ಜೀರ್ಣೋದ್ಧಾರಕ್ಕೂ ಸಚಿವೆ ಶಶಿಕಲಾ ಜೊಲ್ಲೆ ಅನುದಾನ ಕಲ್ಪಿಸಿದ್ದಾರೆ ಎಂದರು. ಹಾಲಶುಗರ್ಸ್‌ ಕಾರ್ಖಾನೆ ಉಪಕಾರ್ಯಾಧ್ಯಕ್ಷ ಎಂ.ಪಿ.ಪಾಟೀಲ, ಸಿದ್ದು ನರಾಟೆ, ಅಶೋಕ ಪಾಟೀಲ ಮಾತನಾಡಿದರು. ರವೀಂದ್ರ ಶೆಟ್ಟಿ, ಮೀನಾಕ್ಷಿ ಸುತಾರ, ಶಾರದಾ ನಾಯಿಕ, ಬಾಜಿರಾವ ಭೋಸಲೆ, ರೂಪಾಲಿ ಪಾಟೀಲ, ಸುಗಂಧಾ ಪಾಟೀಲ, ಮುಕುಂದ ಪಾಟೀಲ, ಅನಿತಾ ಪಾಟೀಲ, ಬಬನ್ ಪಾಟೀಲ, ಬಾಳಾಸಾಹೇಬ ಪಾಟೀಲ, ಸಂಜಯ ಸುತಾರ, ಸಂಗೀತಾ ಸುತಾರ, ಸಂಗೀತಾ ಭಿಲವಡೆ ಇತರರಿದ್ದರು. ಅಮರ ಪಾಟೀಲ ಸ್ವಾಗತಿಸಿದರು. ರಾಜು ಶಿರೋಳೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts