More

    ತಪ್ಪು ತಿದ್ದಿಕೊಂಡು ನಡೆದರೆ ಜೀವನ ಸ್ವರ್ಗ

    ಪಂಚನಹಳ್ಳಿ: ಕೃತಜ್ಞತೆ ಎನ್ನುವುದು ಮನುಷ್ಯನ ವಿಶೇಷ ಗುಣವಾಗಿದ್ದು, ಅದನ್ನು ಎಲ್ಲರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಿರಿಗೆರೆ ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಅಪಘಾತದಲ್ಲಿ ಮೃತಪಟ್ಟ ಅಜಿತ್ ಹೆಸರಿನಲ್ಲಿ ಪಾಲಕರು ಸಿಂಗಟಗೆರೆಯಲ್ಲಿ ಆರಂಭಿಸಿರುವ ಅಜಿತ್ ಸಹಾನುಭೂತಿ ಸಂಸ್ಥೆ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದ ಅವರು, ಉಪಕಾರ ಮಾಡಿದವರನ್ನು ನೆನೆಯಬೇಕು. ನೆನಪು ಮಾಡಿಕೊಳ್ಳದಿರುವುದು ದುರ್ಗಣ. ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡದೆ ತಿದ್ದಿಕೊಂಡು ನಡೆದರೆ ಜೀವನ ಸ್ವರ್ಗವಾಗುತ್ತದೆ. ಶಿಕ್ಷಣದಿಂದ ವ್ಯಕ್ತಿಗತ ಜೀವನ ರೂಪಿಸಿಕೊಳ್ಳಬೇಕು. ಸತ್ಯ ಮತ್ತು ಧರ್ಮದಿಂದ ನಡೆದರೆ ಬದುಕು ಹಸನಾಗಲಿದೆ ಎಂದು ಹೇಳಿದರು.

    ಜಾತಿ ಭೇದ ಮರೆತು ಸಂತೋಷದಿಂದ ಬದುಕುವ ಕಾಲ ಬರಬೇಕು. ಸದ್ಯದ ವಿದ್ಯಮಾನಗಳನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಸರಿಯಾಗಿ ಧರ್ಮವನ್ನು ಅರ್ಥ ಮಾಡಿಕೊಳ್ಳದವರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಉಪದೇಶ ಮಾಡುವುದರಲ್ಲಿ ಧರ್ಮವಿಲ್ಲ. ಸನ್ನಡತೆ ಮತ್ತು ನೀತಿವಂತ ಜೀವನ ನಡೆಸುವುದು ನಿಜವಾದ ಧರ್ಮ ಎಂದು ತಿಳಿಸಿದರು.

    ಮಾಜಿ ಶಾಸಕ ವೈಎಸ್​ವಿ ದತ್ತ ಮಾತನಾಡಿ, ಸಾವು ಎಲ್ಲರ ಮನೆಯಲ್ಲೂ ಘಟಿಸುತ್ತದೆ. ಆದರೆ ಸಾವಿನಲ್ಲೂ ಸಾರ್ಥಕತೆ ಕಾಣುವ ಕೆಲಸವನ್ನು ಅಜಿತ್ ಪಾಲಕರು ಮಾಡುತ್ತಿದ್ದಾರೆ. ಆಸ್ತಿ ಅಂತಸ್ತನ್ನು ಕ್ರೋಡೀಕರಣ ಮಾಡುವ ಜನರು ಹೆಚ್ಚಾಗಿರುವ ಈ ದಿನಗಳಲ್ಲಿ ಸೇವೆ ಮೂಲಕ ಮಗನ ಹೆಸರನ್ನು ಚಿರಸ್ಥಾಯಿ ಮಾಡಲು ಹೊರಟಿರುವ ಪ್ರಯತ್ನ ಅಭಿನಂದನಾರ್ಹ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts