More

    ತಪ್ಪಿನ ಅರಿವಾಗಿ ಕಾಂಗ್ರೆಸ್ ಬೆಂಬಲಿಸುತ್ತಿರುವ ಜನತೆ

    ನಾಗಮಂಗಲ: ಕಳೆದ 5 ವರ್ಷಗಳಲ್ಲಿನ ದುರಾಡಳಿತ ನೋಡಿರುವ ಜನತೆ ತಮ್ಮ ತಪ್ಪಿನ ಅರಿವಾಗಿ ನನ್ನ ಆಡಳಿತದಲ್ಲಿನ ಅಭಿವೃದ್ಧಿ ಕೆಲಸ ಮೆಚ್ಚಿ ಕಾಂಗ್ರೆಸ್ ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದು ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಹೇಳಿದರು.
    ತಾಲೂಕಿನ ಇಜ್ಜಲಘಟ್ಟದಲ್ಲಿನ ತಮ್ಮ ನಿವಾಸದಲ್ಲಿ ಕೊಪ್ಪ ಹೋಬಳಿಯ ದೊಡ್ಡಹೊಸಗಾವಿ ಗ್ರಾಮದಲ್ಲಿ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿದರು.

    ಕಳೆದ ಬಾರಿ ನಾನು ಜೆಡಿಎಸ್‌ಗೆ ದ್ರೋಹ ಮಾಡಿದ್ದೇನೆ ಎಂದು ಜನತೆ ತಪ್ಪಾಗಿ ತಿಳಿದುಕೊಂಡು ನನಗೆ ಮತ ಹಾಕಲು ಹಿಂಜರಿದರು. ಆದರೆ ಜೆಡಿಎಸ್‌ಗೆ ನಾನು ಮೋಸ ಮಾಡಿಲ್ಲ. ಪಕ್ಷವೇ ನನಗೆ ಮೋಸ ಮಾಡಿದೆ ಎಂಬುದನ್ನು ಜನತೆ ತಡವಾಗಿ ಅರ್ಥಮಾಡಿಕೊಂಡು ಈ ಬಾರಿ ನನ್ನ ಕೈಬಲಪಡಿಸುತ್ತಿದ್ದಾರೆ ಎಂದರು.

    ಕಳೆದ ಬಾರಿ ಜಾತಿ ವ್ಯಾಮೋಹ ಹಾಗೂ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕೆಂದು ಮುಂದಾಗಿ ಜನತೆ ಜೆಡಿಎಸ್‌ಗೆ ಮತ ಹಾಕಿದರು. ಆದರೆ ಕುಮಾರಸ್ವಾಮಿ ಸಿಎಂ ಆದರೂ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದರು ಎಂದರು.

    ಜಿಲ್ಲೆಯಲ್ಲಿ ಕಳೆದ ಬಾರಿ 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆಲ್ಲಿಸಿದ ಜನರಿಗೆ 7 ಶಾಸಕರು ಏನು ಕೊಡುಗೆ ನೀಡಿದ್ದಾರೆ. ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿರುವುದೇ ಅವರ ಕೊಡುಗೆಯಾಗಿದೆ. ಪಕ್ಕದ ರಾಮನಗರ, ತುಮಕೂರು ಹಾಸನ ಹಾಗೂ ಮೈಸೂರು ಜಿಲ್ಲೆಗಳು ಕೈಗಾರಿಕೆ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿ ಹೊಂದಿವೆ. ಆದರೆ ಮಂಡ್ಯ ಜಿಲ್ಲೆ ಮಾತ್ರ ಅಭಿವೃದ್ಧಿಯಲ್ಲಿ ಹಿಮ್ಮುಖವಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಿ ಎಂದು ಕೋರಿದರು.

    ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಸಮಾನತೆಯಿಂದ ಕಾಣುತ್ತದೆ. ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದ ಯಾರೊಬ್ಬರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವ ಪ್ರವೃತ್ತಿ ನನಗಿಲ್ಲ. ದ್ವೇಷದ ರಾಜಕಾರಣ ಮಾಡುವ ಅಭ್ಯಾಸ ನನ್ನ ಜೀವಮಾನದಲ್ಲಿಲ್ಲ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ನನ್ನನ್ನು ಗೆಲ್ಲಿಸಿ. ನಿಮ್ಮ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಂಡುಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿನಂತಿಸಿದರು.
    ಕೊಪ್ಪ ಹೋಬಳಿಯ ದೊಡ್ಡಹೊಸಗಾವಿ ಗ್ರಾಮದ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts