More

    ಡಿಸಿಸಿ ಬ್ಯಾಂಕ್ ನೌಕರನ ವಿರುದ್ಧ ಕ್ರಮಕ್ಕೆ ಆಗ್ರಹ

    ಮಳವಳ್ಳಿ: ಪಟ್ಟಣದ ಡಿಸಿಸಿ ಬ್ಯಾಂಕ್‌ನಲ್ಲಿ ನೌಕರರಿಬ್ಬರು ಬಡಿದಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬ್ಯಾಂಕ್ ಆವರಣದಲ್ಲಿ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

    ಅಂಬೇಡ್ಕರ್ ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಎಂ.ಆರ್.ಮಹೇಶ್ ಮಾತನಾಡಿ, ಇತ್ತೀಚೆಗೆ ಬ್ಯಾಂಕ್‌ನ ನೌಕರರಾದ ನಂದಕುಮಾರ ಮತ್ತು ಮುಜಾಮಿನ್ ಷರೀಫ್ ಅವರು ಕರ್ತವ್ಯದ ಸಮಯದಲ್ಲಿ ಕ್ಷುಲ್ಲಕ ಕಾರಣಗಳಿಗೆ ಮಾತಿನ ಚಕಮಕಿ ನಡೆದು ನಂದಕುಮಾರ್ ಮೇಲೆ ಮುಜಾಮಿನ್ ಷರೀಫ್ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾಗಿರುವ ನೌಕರ ದಲಿತ ಸಮುದಾಯದವನಾಗಿದ್ದು, ಬ್ಯಾಂಕ್‌ನಲ್ಲೇ ಮುಜಾಮಿನ್ ಷರೀಫ್ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇಷ್ಟೆಲ್ಲ ಅನುಚಿತ ವರ್ತನೆಗಳು ಶಾಖಾ ವ್ಯವಸ್ಥಾಪಕರ ಸಮ್ಮುದಲ್ಲೇ ನಡೆದಿದ್ದರೂ ಆತನ ವಿರುದ್ಧ ಯಾವುದೇ ಕ್ರಮ ವಹಿಸಿದೆ ತಟಸ್ಥ ನೀತಿ ಅನುಸರಿಸುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆಂದು ಆರೋಪಿಸಿದರು. ಇದು ದಲಿತರಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಶಾಖಾ ವ್ಯವಸ್ಥಾಪಕ ಮತ್ತು ಹಲ್ಲೆ ನಡೆಸಿರುವ ನೌಕರನ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಆಗ್ರಹಿಸಿದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಸ್ಥಳಕ್ಕೆ ಆಗಮಿಸಿ, ಬ್ಯಾಂಕ್ ಉದ್ಯೋಗಿಗಳಿಬ್ಬರು ಕೆಲಸದ ವಿಚಾರವಾಗಿ ಬಡಿದಾಡಿಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಕೂಡಲೇ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಒಂದು ದಿನ ಕಾಲಾವಕಾಶ ನೀಡುವಂತೆ ಪ್ರತಿಭಟನಾ ನಿರತರ ಮನವೊಲಿಸಿದರು. ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕಿ ವನಜಾಕ್ಷಿ , ಶಂಕರ್ ಇದ್ದರು.

    ಪ್ರತಿಭಟನೆಯಲ್ಲಿ ಮುಖಂಡರಾದ ಯತೀಶ್, ಎಂ.ಆರ್.ಪ್ರಸಾದ್, ದುಗ್ಗನಹಳ್ಳಿ ನಾಗರಾಜು, ಲಿಂಗದೇವರು, ಸಂದೇಶ, ಲೋಕೇಶ್, ಷರೀಫ್, ಮರಿಸ್ವಾಮಿ, ಕಿರಣ್ ಶಂಕರ್, ವಿಜಯ್ಕುಮಾರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts