More

    ಡಾ. ಜಗಜೀವನರಾಮ್ ಮಾದರಿ ಸೇವೆ

    ಹಳಿಯಾಳ: ಕೋವಿಡ್-19 ಹಿನ್ನೆಲೆಯಲ್ಲಿ ಡಾ. ಬಾಬು ಜಗಜೀವನರಾಮ್ ಅವರ 114ನೇ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು. ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತ ಹಾಗೂ ಪಟ್ಟಣದ ವಿವಿಧ ದಲಿತ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಮಾರಂಭ ಉದ್ದೇಶಿಸಿ ಮಾತನಾಡಿದ ತಾ.ಪಂ. ಇಒ ಪ್ರವೀಣಕುಮಾರ ಸಾಲಿ, ‘ದೇಶದ ಇತಿಹಾಸದಲ್ಲಿ ಹಸಿರು ಕ್ರಾಂತಿಯ ಹರಿಕಾರರೆಂದೇ ಅಚ್ಚಳಿಯದ ಮಾದರಿ ಸೇವೆಯನ್ನು ಸಲ್ಲಿಸಿದ ಡಾ. ಜಗಜೀವನರಾಮ್ ಅವರು ದೇಶದ ಅರ್ಥಿಕತೆಗೆ ಕೃಷಿರಂಗವೂ ಮೂಲ ಆಧಾರವಾಗಿದೆ ಎಂದು ತೋರಿಸಿದ ಮಹಾನುಭಾವರಾಗಿದ್ದಾರೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ವಹಿಸಿದ್ದರು. ಬಿಇಒ ಸಮೀರ ಮುಲ್ಲಾ, ಪುರಸಭಾ ಮುಖ್ಯಾಧಿಕಾರಿ ಕೇಶವ ಚೌಗಲೆ, ಲೋಕೋಪಯೋಗಿ ಎಇಇ ಹಂಚಿನಮನೆ, ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ದಲಿತ ಮುಖಂಡರಾದ ಗುರು ದಾನಪ್ಪನವರ, ಪೋಮನ್ನ ದಾನಪ್ಪನವರ, ಹನುಮಂತ ಹರಿಜನ, ಮಂಜುನಾಥ ಚಲವಾದಿ, ಯಲಪ್ಪ ಹೊನ್ನೊಜಿ, ಪೀಶಪ್ಪ ಹರಿಜನ, ರಾಮಚಂದ್ರ ವಡ್ಡರ, ಕವಿತಾ ಮಾದರ ಇದ್ದರು.

    ಬಾಬೂಜಿ ಜನ್ಮದಿನೋತ್ಸವ: ಸಿದ್ದಾಪುರ: ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪಪಂ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 114ನೇ ಜನ್ಮದಿನೋತ್ಸವ ಸೋಮವಾರ ಆಚರಿಸಲಾಯಿತು. ತಹಸೀಲ್ದಾರ್ ಪ್ರಸಾದ ಎಸ್.ಎ. ಮಾತನಾಡಿದರು. ತಾಪಂ ಉಪಾಧ್ಯಕ್ಷೆ ದಾಕ್ಷಾಯಣಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸದಸ್ಯೆ ಗಿರಿಜಾ ಗೌಡ, ಪಪಂ ಸದಸ್ಯ ನಂದನ ಬೋರ್ಕರ್, ಶಿಕ್ಷಕ ಆರ್.ಬಿ. ರಾಠೋಡ್, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಪಿ. ನರೋನ್ಹಾ ಇದ್ದರು. ಶಿಕ್ಷಕ ವೆಂಕಟೇಶ ಮಡಿವಾಳ ಅವರು ಡಾ. ಬಾಬು ಜಗಜೀವನರಾಮ್ ಅವರ ಜೀವನ ಕುರಿತು ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts