More

    ಜೆಡಿಎಸ್ ಪಕ್ಷ ಇಲ್ಲದಿದ್ದರೆ ಸಿದ್ಧರಾಮಯ್ಯ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ / ಹತ್ತಿದ ಏಣಿ ಒದೆಯುವ ಕೆಲಸ ಬೇಡ / ಸಂಸದ ಮುನಿಸ್ವಾಮಿ

    ವಿಜಯವಾಣಿ ಸುದ್ದಿಜಾಲ ಕೋಲಾರ / ಮುಳಬಾಗಿಲು

    ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ ಅಂತ ಕೇಳುವ ಸಿದ್ದರಾಮಯ್ಯನವರೇ ಜೆಡಿಎಸ್ ಪಕ್ಷ ಇಲ್ಲದೇ ಇದ್ದಿದ್ರೆ ನೀನು ಯಾರು ಅನ್ನೋದು ರಾಜ್ಯಕ್ಕೆ ಗೊತ್ತಾಗುತ್ತಲೇ ಇರಲಿಲ್ಲ. ದೇವೇಗೌಡರು ನಿನ್ನನ್ನು ಸಚಿವ, ಉಪಮುಖ್ಯಮಂತ್ರಿ ಮಾಡಿದ್ದಕ್ಕೆ ಈಗ ಕಾಂಗ್ರೆಸ್ ನಲ್ಲಿ ಯಾರೋ ಕಟ್ಟಿದ ಕೋಟೆಯಲ್ಲಿ ರಾಜನಾಗಿ ಮೆರಿತಿದೀಯ ಅಷ್ಟೇ, ಮೊದಲು ಮೇಲೇರಿದ ಏಣಿಯನ್ನು ಒದೆಯುವ ನೀಚ ಬುದ್ದಿಯನ್ನು ಬಿಟ್ಟರೆ ನಿಮಗೆ ಒಳ್ಳೆಯದಾಗುತ್ತದೆ ಎಂದು ಸಿದ್ದರಾಮಯ್ಯರಿಗೆ ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದರು.

    ಮುಳಬಾಗಿಲು ತಾಲ್ಲೂಕಿನಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ರವರ ಸಾಯಿ ಕುಟೀರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಿದ್ದರಾಮಯ್ಯವರಿಗೆ ಕೊರೋನ ಸಮಯದಲ್ಲಿ ನರೇಂದ್ರ ಮೋದಿಯವರು ಕೊಟ್ಟಂತಹ ಉಚಿತ ಕೊರೋನ ಲಸಿಕೆ ಹಾಕದಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ತೀರಿಕೊಳ್ತಿದ್ರು, ದೇಶದ ಎಲ್ಲಾ ಕಾಂಗ್ರೆಸ್ ನಾಯಕರುಗಳಿಗೆ ಮೋದಿಯವರು ಕೊಟ್ಟ ಕೊರೋನ ಲಸಿಕೆಯಿಂದ ಬದುಕುಳಿದಿದ್ದಾರೆ. ಕೊರೋನ ಸಂದರ್ಭದಲ್ಲಿ ಪ್ರತಿಯೊಬ್ಬರ ಹಸಿವು ನೀಗಿಸಲು ಉಚಿತವಾಗಿ ಅಕ್ಕಿ ನೀಡಿ ಜನರಿಗೆ ಆಸರೆಯಾದರು ಎಂದರು.

    ಮೂರು ತಲೆಮಾರಿಗೆ ಆಗುವಷ್ಟು ಹಣ ಕಾಂಗ್ರೆಸ್‌ನವರು ಮಾಡಿಕೊಂಡಿದ್ದೇವೆ ಮತ್ತು ಅಂಬೇಡ್ಕರ್ ರವರನ್ನು ಹೀನಾಯವಾಗಿ ನಡೆಸಿಕೊಂಡಿದ್ದು, ಕಾಂಗ್ರೆಸ್ ಪಕ್ಷ ಎಂದು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ರವರೇ ಹೇಳಿದ್ದಾರೆ, ಇದು ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಅದಕ್ಕಾಗಿ ಮತ ಚಲಾಯಿಸುವಾಗ ಯೋಚಿಸಿ ಮತದಾನ ಮಾಡಲು ಮನವಿ ಮಾಡಿದರು.

    ಕಳೆದ ೬೦ ವರ್ಷಗಳಿಂದ ಕಾಂಗ್ರೆಸ್ ಪಕ್ಷ ದೇಶದ ಜನರನ್ನು ಯಾಮಾರಿಸಿಕೊಂಡು ಬಂದಿದೆ, ದೇಶದ ಜನರನ್ನು ಸದೃಢಪಡಿಸಬೇಕಾದ್ರೆ ಕರ್ನಾಟಕದ ಮೂಡಲಬಾಗಿಲು ಆದಂತಹ ಕೋಲಾರ ಕ್ಷೇತ್ರ ಮೊದಲ ಗೆಲುವಾಗಬೇಕು, ಅದಕ್ಕಾಗಿ ಕೋಲಾರ ಲೋಕಸಭಾ ಕ್ಷೇತ್ರದ ಜನರು ಒಗ್ಗಟ್ಟಿನಿಂದ ಜೆಡಿಎಸ್ ಪಕ್ಷದ ಚಿಹ್ನೆಯ ಅಭ್ಯರ್ಥಿ ಮಲ್ಲೇಶ್ ಬಾಬು ರವರಿಗೆ ಮತ ಚಲಾಯಿಸಲು ಮನವಿ ಮಾಡಿದರು..

    ಕಳೆದ ಐದು ವರ್ಷಗಳಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ೧೫ ಸಾವಿರ ಕೋಟಿ ಅನುದಾನ ತಂದು ಅಭಿವೃದ್ದಿಪಡಿಸಿದ್ದೇನೆ. ಯರಗೋಳ್ ಯೋಜನೆಗೆ ಹಣ ಕೊಟ್ಟಿದ್ದು ಕುಮಾರಸ್ವಾಮಿಯವರು ಮತ್ತು ಸದಾನಂದಗೌಡರು ಆದರೆ ಕಾಂಗ್ರೆಸ್ ನವರು ಆ ಯೋಜನೆಗಳ ಹಣವನ್ನು ಲೂಟಿ ಹೊಡೆದಿದ್ದು ಯೋಜನೆಗಳು ನಾವು ಮಾಡಿದ್ದು ಎಂದು ಬಿಟ್ಟಿ ಪ್ರಚಾರ ಪಡೆದುಕೊಳ್ತಿದ್ದಾರೆ ಎಂದು ಗುಡುಗಿದರು.

    ಬಲಗೈ, ಎಡಗೈ ಅಂತ ಕಿತ್ತಾಡಿ ಇಡೀ ದೇಶದ ಜನರ ಮುಂದೆ ರಾಜೀನಾಮೆಯ ನಾಟಕವಾಡಿ ಕೊನೆಗೆ ಸ್ಥಳೀಯರಿಗೆ ಟಿಕೆಟ್ ಕೊಡಿಸಲು ಯೋಗ್ಯತೆ ಇಲ್ಲದೆ ಎಲ್ಲಿಯೋ ಬೆಂಗಳೂರಿನಿAದ ಸೂಟ್ ಕೇಸ್ ವ್ಯಕ್ತಿಯನ್ನು ತಂದಿದ್ದಾರೆ, ಇನ್ನು ಇಪ್ಪತ್ತು ದಿನ ಓಡಾಡಿ ಸೂಟ್ ಕೇಸ್ ನಲ್ಲಿರುವ ಹಣ ಖಾಲಿ ಮಾಡಿಕೊಂಡು ಸೋತು ವಾಪಸ್ ಬೆಂಗಳೂರಿಗೆ ಓಡಿಹೋಗುತ್ತಾರೆ ಎಂದು ಭವಿಷ್ಯ ನುಡಿದರು.

    ಡಿ.ಕೆ ಶಿವಕುಮಾರ್‌ನಿಗೆ ಕಾಟ ಕೊಡ್ತಿರೋದು, ಡಿಕೆಶಿ ನ ಜೈಲಿಗೆ ಕಳಿಸಿದ್ದು, ಎಲ್ಲಾ ಕುತಂತ್ರ ಮಾಡ್ತಿರೋದು ಸಿದ್ದರಾಮಯ್ಯ ಅಂತ ಸ್ವತಃ ಡಿ.ಕೆ ಶಿವಕುಮಾರ್ ರವರ ತಾಯಿಯೇ ಹೇಳಿದ್ದಾರೆ. ಈ ಎಲ್ಲಾ ದೊಂಬರಾಟಗಳಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಮತದಾನ ಮಾಡುವ ಮೂಲಕ ಬುದ್ದಿ ಕಲಿಸಬೇಕು ಎಂದರು.

    ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಭಾರಿ ಸೋತಿರುವ ವ್ಯಕ್ತಿಯನ್ನು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ನಿಲ್ಲಿಸಲಾಗಿದೆ, ನರೇಂದ್ರ ಮೋದಿಯವರು ಜೆಡಿಎಸ್ ಪಕ್ಷವನ್ನು ನಂಬಿ ರಾಜ್ಯದಲ್ಲಿ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ ರಾಜ್ಯದಲ್ಲಿ ಮೂರೂ ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಿಸಿಕೊಟ್ಟರೆ ಕುಮಾರಣ್ಣನವರು ಮೋದಿಯವರ ಮುಂದೆ ಧೈರ್ಯವಾಗಿ ತಲೆಯೆಟ್ಟಿ ನಿಲ್ಲಬಹುದು ಆದ್ದರಿಂದ ಮೋದಿಯವರಿಗೆ ಮತ್ತು ಕುಮಾರಣ್ಣನವರಿಗೆ ಗೌರವ ತರುವಂತಹ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

    ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಹೋದಲ್ಲಿ ಬಂದಲ್ಲೆಲ್ಲಾ ನನ್ನ ವಿರುದ್ದ ಅಪಪ್ರಚಾರ ಮಾಡಿಕೊಂಡು ಓಡಾಡ್ತಿದ್ದಾರೆ ಅವರ ಬಂಡವಾಳ ಹೇಳಿದ್ರೆ ನಾಚಿಕೆಯಾಗುತ್ತದೆ. ರಾಜೀನಾಮೆ ಕೊಡ್ತೀನಿ ಅಂತ ನಾಟಕ ಮಾಡಿ ನಗೆಪಾಟಲು ಆಗಿಬಿಟ್ಟರು. ರಾಜ್ಯ ಕಾಂಗ್ರೆಸ್ ನವರಿಗೆ ಜೆಡಿಎಸ್ ಕಂಡರೆ ಭಯ, ಹೋದಲ್ಲಿ ಬಂದಲ್ಲೆಲ್ಲಾ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೆಡಿಎಸ್ ವಿರುದ್ದ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳಾದರೂ ರಾಜ್ಯದ ಯಾವುದೇ ಶಾಸಕರಿಗೂ ನಯಾ ಪೈಸೆ ಅನುದಾನ ಕೊಡ್ತಿಲ್ಲ, ಅನುದಾನ ಕೊಡುತ್ತೇವೆಂದು ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ರನ್ನು ಎಷ್ಟೇ ಹೊಗಳಿದರೂ ಅನುದಾನ ಕೊಡಲಿಲ್ಲ, ರಾಜ್ಯದಲ್ಲಿ ಕುಡಿಯುವ ನೀರಿಗೂ ಅನುದಾನ ಕೊಡಲಾಗದಷ್ಟು ಹೀನಾಯ ಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದೆ, ಉಚಿತ ಭಾಗ್ಯಗಳನ್ನು ಕೊಡುತ್ತಿದ್ದೇವೆಂದು ಜನರ ಮುಖಕ್ಕೆ ಮಂಕುಬೂದಿ ಹಚ್ಚಿ ರಾಜ್ಯವನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಬಿಟ್ಟಿ ಭಾಗ್ಯಗಳು ಹೀಗೆ ಮುಂದುವರೆದರೆ ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಅದಷ್ಟಕ್ಕೆ ಅದೇ ಉರುಳಿ ಬೀಳುತ್ತದೆ ಎಂದು ಭವಿಷ್ಯ ನುಡಿದರು.

    ಕೋಲಾರ ಲೋಕಸಭಾ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ಚುನಾವಣೆ ನಡೆಯುತ್ತಿರುವುದು ನರೇಂದ್ರ ಮೋದಿಯವರಿಗೆ, ದೇಶದ ಹಿತ ದೃಷ್ಟಿಯಿಂದ ಮತ ಚಲಾಯಿಸಬೇಕಾಗಿರುವುದರಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು, ನಾನು ಎರಡು ಭಾರಿ ಚುನಾವಣೆಯಲ್ಲಿ ಸೋತರೂ ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದೇನೆ ದಯವಿಟ್ಟು ಈ ಭಾರಿ ನನಗೆ ಆಶೀರ್ವಾದ ಮಾಡಬೇಕಾಗಿ ಮನವಿ ಮಾಡಿದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಜೆಡಿಎಸ್ ಮುಖಂಡರಾದ ಕಾಡೇನಹಳ್ಳಿ ನಾಗರಾಜ್, ರಘುಪತಿರೆಡ್ಡಿ, ಶ್ಯಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಮುರಳಿ, ಶ್ರೀನಿವಾಸರೆಡ್ಡಿ, ನಂಗಲಿ ಕಿಶೋರ್ ಮುಂತಾದವರಿದ್ದರು.

    ಚಿತ್ರ ೦೩ ಕೆ.ಎಲ್.ಆರ್. ೦೩ : ಮುಳಬಾಗಿಲಿನಲ್ಲಿ ಜೆಡಿಎಸ್ ಬಿಜೆಪಿ ಸಮನ್ವಯ ಸಭೆ ಉದ್ಘಾಟಿಸಿದ ಸಂಸದ ಮುನಿಸ್ವಾಮಿ, ಶಾಸಕ ಸಮೃದ್ಧಿ ಮಂಜುನಾಥ್, ಎನ್.ಡಿ.ಎ. ಅಭ್ಯಥಿ ಎಂ. ಮಲ್ಲೇಶ್‌ಬಾಬು, ಕಾಡೇನಹಳ್ಳಿ ನಾಗರಾಜ್ ಮುಂತಾದವರಿದ್ದರು.

    ಜೆಡಿಎಸ್ ಪಕ್ಷ ಇಲ್ಲದಿದ್ದರೆ ಸಿದ್ಧರಾಮಯ್ಯ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ / ಹತ್ತಿದ ಏಣಿ ಒದೆಯುವ ಕೆಲಸ ಬೇಡ / ಸಂಸದ ಮುನಿಸ್ವಾಮಿ
    ಜೆಡಿಎಸ್ ಪಕ್ಷ ಇಲ್ಲದಿದ್ದರೆ ಸಿದ್ಧರಾಮಯ್ಯ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ / ಹತ್ತಿದ ಏಣಿ ಒದೆಯುವ ಕೆಲಸ ಬೇಡ / ಸಂಸದ ಮುನಿಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts