More

    ಜಿ.ಮಾದೇಗೌಡರ ದ್ವಿತೀಯ ವರ್ಷದ ಪುಣ್ಯಸ್ಮರಣೆ

    ಕೆ.ಎಂ.ದೊಡ್ಡಿ: ಸಮೀಪದ ಹನುಮಂತನಗರದಲ್ಲಿ ರೈತ ಹೋರಾಟಗಾರ ಹಾಗೂ ಮಾಜಿ ಸಂಸದ ಜಿ.ಮಾದೇಗೌಡ ಅವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಭಾನುವಾರ ಜರುಗಿತು.
    ಗಾಂಧಿವಾಧಿ ಜಿ.ಮಾದೇಗೌಡರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹನುಮಂತನಗರದಲ್ಲಿ ಚಿರಶಾಂತಿ ವನದಲ್ಲಿರುವ ಸ್ಮಾರಕಕ್ಕೆ ಆಗಮಿಸಿದ ವಿಧಾನಪರಿಷತ್ ಸದಸ್ಯ ಮಧು ಜಿ. ಮಾದೇಗೌಡ, ಮೊಮ್ಮಗ ಆಶಯ್ ಮಧು ಜಿ.ಮಾದೇಗೌಡ, ಸೊಸೆ ಬಿಂಧು ಮಧು ಮಾದೇಗೌಡ ಸೇರಿದಂತೆ ಕುಟುಂಬಸ್ಥರು, ಮುಖಂಡರು, ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಬ್ಬಂದಿ ಹಾಗೂ ಸಾವಿರಾರು ಅಭಿಮಾನಿಗಳು ಗೌಡರ ಸಮಾಧಿಗೆ ಪೂಜೆ ಸಲ್ಲಿಸಿದರು.
    ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ತಂದೆಯ ಹೋರಾಟ, ಹೆಜ್ಜೆಗುರುತುಗಳು ನಮ್ಮ ಇಡೀ ಬದುಕಿಗೆ ಆದರ್ಶವಾಗಿದ್ದು, ಕುಗ್ರಾಮದಲ್ಲಿ ಜನಿಸಿದ್ದರೂ ಕೂಡ ಜನರ ಸಮಸ್ಯೆಗಳನ್ನು ಆಳುವ ಸರ್ಕಾರಗಳ ಮುಂದಿಟ್ಟು ಜನಮನ್ನಣೆ ಗಳಿಸಿ ಶಾಸಕರು, ಸಂಸದರು, ಸಚಿವರಾಗಿ ಮಾಡಿರುವ ಸಾಧನೆಯೇ ನನ್ನ ಬದುಕಿನ ಪ್ರೇರಣೆಯಾಗಿದೆ ಎಂದರು.
    ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಸ್ಥಾಪಿಸಿದ ಭಾರತೀ ಎಜುಕೇಷನ್ ಟ್ರಸ್ಟ್ ಹೆಮ್ಮರವಾಗಿ ಬೆಳೆದಿದ್ದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಂಸ್ಥೆಯನ್ನು ಇನ್ನು ಅಭಿವೃದ್ಧಿಪಡಿಸಿ ಕಡಿಮೆ ದರದಲ್ಲಿ ಬಡಮಕ್ಕಳಿಗೆ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
    ಗೌಡರ ಹನುಮಂತನಗರದ ನೆಚ್ಚಿನ ತಾಣದ ಚಿರಶಾಂತಿ ವನದಲ್ಲಿ ಸ್ಮಾರಕ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಮ್ಯೂಸಿಯಂ ನಿರ್ಮಿಸಲು ಎಲ್ಲ ತಯಾರಿ ಮಾಡಿ ಕೊಳ್ಳಲಾಗಿದೆ. ಮಾದೇಗೌಡರ ಹೋರಾಟದ ಹಾದಿ ಸೇರಿದಂತೆ ಅವರ ಬದುಕಿನ ಚಿತ್ರಣ ಒಳಗೊಂಡ ಹಲವು ವಿಶೇಷತೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

    ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಸಿಇಒ ಆಶಯ್‌ಮಧು, ಜಿ.ಪಂ.ಮಾಜಿ ಸದಸ್ಯ ಎ.ಎಸ್.ರಾಜೀವ್, ತಾ.ಪಂ.ಮಾಜಿ ಸದಸ್ಯ ಬಿ.ಗಿರೀಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೇವರಹಳ್ಳಿ ದೊಡ್ಡೇಗೌಡ, ಮುಖಂಡರಾದ ಗುರುದೇವರಹಳ್ಳಿ ಮೋಹನ್, ಕೆ.ಎಸ್.ಗೌಡ, ಅಣ್ಣೂರು ಸಿದ್ದಪ್ಪ, ದಾಸೇಗೌಡ, ಮಾದರಹಳ್ಳಿ ಸಿದ್ದಪ್ಪ ಸೇರಿದಂತೆ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts