More

    ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸ್ಥಾನದಲ್ಲಿ ಏರಿಕೆ

    ಜಿಲ್ಲೆಯ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 64.99% ರಷ್ಟು ಫಲಿತಾಂಶ ಪಡೆದು ಕೊಂಚ ಸುಧಾರಿಸಿಕೊಂಡಿದೆ. ಕಳೆದ ವರ್ಷ 31ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಮೂರು ಸ್ಥಾನ ಮೇಲಕ್ಕೆ ಜಿಗಿದು, 28ನೇ ಸ್ಥಾನ ಪಡೆದಿದೆ.
    ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಲಕರು 11,337 ಪರೀಕ್ಷೆಗೆ ಹಾಜರಾಗಿದ್ದು, 6,336 ಉತ್ತೀರ್ಣರಾಗಿದ್ದಾರೆ. ಬಾಲಕಿಯರು 11,082 ಹಾಜರಾಗಿದ್ದು 8,105 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ ಫ್ರೌಡ ಶಾಲೆಯ 11,769 ವಿದ್ಯಾರ್ಥಿಗಳಲ್ಲಿ 6,849 ಮತ್ತು ಅನುದಾನಿತ ಶಾಲೆಯ 3,324 ವಿದ್ಯಾರ್ಥಿಗಳಲ್ಲಿ 1,869 ಹಾಗೂ ಅನುದಾನ ರಹಿತ ಪ್ರೌಢ ಶಾಲೆಯ 7,326 ವಿದ್ಯಾರ್ಥಿಗಳಲ್ಲಿ 5,729 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಜಿಲ್ಲೆಯ 22,419 ವಿದ್ಯಾರ್ಥಿಗಳ ಪೈಕಿ 14,441 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ. 64.99 ರಷ್ಟು ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳ ಪೈಕಿ ಪ್ರಥಮ ಭಾಷೆ ಕನ್ನಡ ಶೇ.77 ರಷ್ಟು, ದ್ವಿತೀಯ ಭಾಷೆ ಶೇ.73 ರಷ್ಟು, ತೃತೀಯ ಭಾಷೆ ಶೇ.78 ರಷ್ಟು, ಗಣಿತ ಶೇ.70, ವಿಜ್ಞಾನ ಶೇ.67, ಸಮಾಜ ವಿಜ್ಞಾನ ಶೇ.74 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
    ಬಳ್ಳಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಪ್ರತಿವರ್ಷ ಏರಿಳಿತ ಕಂಡುಬರುತ್ತಿದೆ. 2022ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ 28ನೇ ಸ್ಥಾನ ಗಳಿಸಿದ್ದ ಗಣಿಜಿಲ್ಲೆ ಬಳ್ಳಾರಿ, 2023ನೇ ಸಾಲಿನಲ್ಲಿ 31ನೇ ಸ್ಥಾನಕ್ಕೆ ಕುಸಿಯಿತು. ಈ ಬಾರಿ ಶೇ. 64.99% ರಷ್ಟು ಫಲಿತಾಂಶ ಪಡೆದಿದೆ. ಇದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಪಂ, ಜಿಲ್ಲಾಡಳಿತ ಕೈಗೊಂಡಿರುವ ನಿರಂತರವಾಗಿ ಗೈರಾಗುತ್ತಿದ್ದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ’ಮರಳಿ ಶಾಲೆಗೆ ಬಾ’, ವಿದ್ಯಾರ್ಥಿಗಳ ಕಲಿಕೆಗೆ ಕಲಿಕಾ ’ಆಸೆರೆ’ ಹಾಗೂ ’ ಪ್ರತಿಬಿಂಬ ’ ಎಂಬ ಪುಸ್ತಕಗಳನ್ನು ವಿತರಿಸಲಾಗಿತ್ತು. ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವುದು ಹೇಗೆ ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಸಂಡೂರು ಪ್ರಥಮ : ಜಿಲ್ಲೆಯಲ್ಲಿ ಸಂಡೂರು ತಾಲೂಕು ಶೇ.75.55 ರಷ್ಟು ಫಲಿತಾಂಶ ಗಳಿಸಿ ಪ್ರಥಮ ಸ್ಥಾನಗಳಿಸಿದೆ. ಸಿರುಗುಪ್ಪ ತಾಲೂಕು ಶೇ.69.93 ದ್ವಿತೀಯ, ಬಳ್ಳಾರಿ ಪಶ್ಚಿಮ ಶೇ.62.89 ರಷ್ಟು ತೃತೀಯ, ಬಳ್ಳಾರಿ ಪೂರ್ವ ಶೇ.54.71 ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನಗಳಿಸಿದೆ.

    ಜಿಲ್ಲೆಯ ಟಾಪರ್ಸ್‌ : ಜಿಲ್ಲೆಯ ಅನುದಾನ ರಹಿತ ಶಾಲೆಯ ವಿದ್ಯಾರ್ಥಿಗಳಾದ ವೆಂಕಟ ರಾಹುಲ್ (620) ಬಿ. ಕೀರ್ತನ (619), ಡಿ.ಮಣಿಕಂಠ (617), ಟಿ. ಸಾಯಿ ಸಕೇತ ವಿರಾಜ್, ಜಿ. ರೇಷ್ಮಾ, ಪಿ.ನಂದುಶ್ರೀ, ಜಿ. ಕೀರ್ತಿ ತಲಾ (614), ಕೆ. ತ್ರಿಷಾ (613), ಆರ್.ಎಸ್.ಜೆ. ಅರುಣಾ ಹಾಗೂ ಸಂಡೂರಿನ ಆದರ್ಶ ವಿದ್ಯಾಲಯದ ಎಚ್. ಸುದೀಪ್ ತಲಾ (612) ಅಂಕ ಪಡೆದು ಜಿಲ್ಲೆಯ ಟಾಪ್‌ರ್ಸ್‌ ಆಗಿದ್ದಾರೆ.
    ಬಾಕ್ಸ್ : ಬಳ್ಳಾರಿಯ ಕೌಲಬಜಾರ್ ಪ್ರದೇಶದಲ್ಲಿನ ರಾಯಲ್ ಅಂಗ್ಲ ಮಾಧ್ಯಮ ಅನುದಾನ ರಹಿತ ಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದಿದೆ. ಈ ಶಾಲೆಯಿಂದ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಮೂವರು ಅನುತ್ತೀರ್ಣರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts