More

    ಜಿಲ್ಲೆಯ ಅತಿದೊಡ್ಡ ಪಂಚಾಯಿತಿ ಅಕ್ಕಿಆಲೂರ

    ಹಾವೇರಿ: ಜಿಲ್ಲೆಯಲ್ಲಿರುವ 209 ಗ್ರಾಪಂಗಳ 1,056 ಕ್ಷೇತ್ರಗಳ 2,967 ಸದಸ್ಯರಾಯ್ಕೆಗೆ ಎರಡು ಹಂತದಲ್ಲಿ ಚುನಾವಣೆ ಘೊಷಣೆಯಾಗಿದೆ. ಜಿಲ್ಲೆಯ 8 ತಾಲೂಕುಗಳಲ್ಲಿ 223 ಗ್ರಾಪಂಗಳು ಅಸ್ತಿತ್ವದಲ್ಲಿದ್ದು, ಇದರಲ್ಲಿ ಡಿಸೆಂಬರ್ 2020ರ ನಂತರ 14 ಗ್ರಾಪಂಗಳ ಅವಧಿ ಪೂರ್ಣಗೊಳ್ಳುವ ಕಾರಣ ಪ್ರಸ್ತುತ ಚುನಾವಣೆ ನಡೆಸುತ್ತಿಲ್ಲ. ಅವಧಿ ಪೂರ್ಣಗೊಂಡ 209 ಗ್ರಾಪಂಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

    ಚುನಾವಣೆ ನಡೆಯುವ ಹಾವೇರಿ ತಾಲೂಕಿನ ಹಾಂವಶಿ, ಹೊಂಬರಡಿ ಹಾಗೂ ಹಾನಗಲ್ಲ ತಾಲೂಕಿನ ಸುರಳೇಶ್ವರ ಅತಿ ಕಡಿಮೆ ಅಂದರೆ ಕೇವಲ 6 ಸದಸ್ಯ ಸ್ಥಾನ ಹೊಂದಿರುವ ಅತಿಚಿಕ್ಕ ಗ್ರಾಮ ಪಂಚಾಯಿತಿಗಳಾಗಿವೆ. ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಜಿಲ್ಲೆಯಲ್ಲಿಯೇ ಅತಿದೊಡ್ಡ ಗ್ರಾಪಂ ಆಗಿದ್ದು, 31 ಸದಸ್ಯರ ಬಲ ಹೊಂದಿದೆ. ಇದನ್ನು ಹೊರತುಪಡಿಸಿದರೆ ಹಾವೇರಿ ತಾಲೂಕಿನ ಹೊಸರಿತ್ತಿ 29, ಹಿರೇಕೆರೂರು ತಾಲೂಕಿನ ಚಿಕ್ಕೇರೂರು 28, ಶಿಗ್ಗಾಂವಿ ತಾಲೂಕಿನ ತಡಸ 27 ಹಾಗೂ ರಟ್ಟಿಹಳ್ಳಿ ತಾಲೂಕಿನ ಮಾಸೂರು 26 ಅತಿಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಗ್ರಾಮ ಪಂಚಾಯಿತಿಗಳಾಗಿವೆ.

    ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದಲೇ ಗ್ರಾಪಂಗಳನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಬಹುತೇಕ ಗ್ರಾಪಂಗಳು 10ರಿಂದ 16 ಸ್ಥಾನಗಳನ್ನು ಹೊಂದಿವೆ. ಕೆಲವು ಗ್ರಾಪಂಗಳು ಒಂದೇ ಗ್ರಾಮ ಹೊಂದಿದ್ದರೆ, ಕೆಲ ಗ್ರಾಪಂಗಳು ಎರಡರಿಂದ ಮೂರು ಗ್ರಾಮಗಳನ್ನೊಳಗೊಂಡಿವೆ. ಈ ಮೊದಲ ಅತಿಹೆಚ್ಚು ಸದಸ್ಯ ಬಲವನ್ನು ಹೊಂದಿದ್ದ ಗುತ್ತಲ, ರಟ್ಟಿಹಳ್ಳಿ ಪಪಂಗಳಾಗಿ ಮೇಲ್ದರ್ಜೆಗೇರಿವೆ. ಮುಂದಿನ ದಿನಗಳಲ್ಲಿ ಅಕ್ಕಿಆಲೂರ ಸಹ ಪಟ್ಟಣ ಪಂಚಾಯಿತಿಯಾದರೆ ಅತಿದೊಡ್ಡ ಗ್ರಾಪಂಗಳ ಸಂಖ್ಯೆ ಕುಸಿಯಲಿದೆ.

    ತಾಲೂಕುವಾರು ಮತದಾರರ ವಿವರ: ಹಾವೇರಿ ತಾಲೂಕಿನಲ್ಲಿ 81,010 ಪುರುಷ, 75,012 ಮಹಿಳೆ ಹಾಗೂ ಇತರೆ ಐದು ಜನರು ಸೇರಿ 1,56,027 ಮತದಾರರು ಇದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 37,753 ಪುರುಷ, 35,575 ಮಹಿಳೆ ಸೇರಿ 73,328 ಮತದಾರರಿದ್ದಾರೆ. ರಾಣೆಬೆನ್ನೂರ ತಾಲೂಕಿನಲ್ಲಿ 81,026 ಪುರುಷ ಹಾಗೂ 76,564 ಮಹಿಳೆ ಹಾಗೂ ಇತರೆ 10 ಜನ ಸೇರಿ 1,57,600 ಮತದಾರರು ಇದ್ದಾರೆ. ಹಿರೇಕೆರೂರ ತಾಲೂಕಿನಲ್ಲಿ 40,977 ಪುರುಷ, 38,058 ಮಹಿಳಾ ಹಾಗೂ ಎರಡು ಜನ ಇತರೆ ಸೇರಿ 79,037 ಮತದಾರರು. ರಟ್ಟಿಹಳ್ಳಿ 40,117 ಪುರುಷರು, 46,479 ಮಹಿಳಾ ಹಾಗೂ ಇತರೆ ಒಬ್ಬರು ಸೇರಿ 77,804 ಮತದಾರರು. ಸವಣೂರ 49,877 ಪುರುಷ ಹಾಗೂ 46,479 ಮಹಿಯರು ಸೇರಿ 96,356 ಮತದಾರರು. ಶಿಗ್ಗಾಂವಿ 54,403 ಪುರುಷ, 49,484 ಮಹಿಳೆಯರು ಹಾಗೂ ಇತರೆ ಐದು ಜನ ಸೇರಿ 1,68,238 ಮತದಾರರು. ಹಾನಗಲ್ಲ ತಾಲೂಕಿನಲ್ಲಿ 88,091 ಪುರುಷ, 80,142 ಮಹಿಳೆಯರು ಹಾಗೂ ಇತರೆ ಐದು ಜನರು ಸೇರಿ 1,68,238 ಮತದಾರರಿದ್ದಾರೆ.

    ತಾಲೂಕುವಾರು ಮತಗಟ್ಟೆ ವಿವರ: ಹಾವೇರಿ ತಾಲೂಕಿನಲ್ಲಿ 172 ಮೂಲ, 58 ಹೆಚ್ಚುವರಿ ಒಳಗೊಂಡಂತೆ 230 ಮತಗಟ್ಟೆಗಳಿವೆ. ಬ್ಯಾಡಗಿ ತಾಲೂಕಿನ 83 ಮೂಲ ಹಾಗೂ 26 ಹೆಚ್ಚುವರಿ ಸೇರಿ 109, ರಾಣೆಬೆನ್ನೂರ ತಾಲೂಕಿನಲ್ಲಿ 186 ಮೂಲ ಹಾಗೂ 50 ಹೆಚ್ಚುವರಿ ಸೇರಿ 236, ಹಿರೇಕೆರೂರು ತಾಲೂಕಿನಲ್ಲಿ 94 ಮೂಲ ಹಾಗೂ 28 ಹೆಚ್ಚುವರಿ ಸೇರಿ 122, ರಟ್ಟಿಹಳ್ಳಿ ತಾಲೂಕಿನಲ್ಲಿ 92 ಮೂಲ ಹಾಗೂ 29 ಹೆಚ್ಚುವರಿ ಸೇರಿ 121, ಸವಣೂರು ತಾಲೂಕಿನಲ್ಲಿ 116 ಮೂಲ ಹಾಗೂ 30 ಹೆಚ್ಚುವರಿ ಸೇರಿ 146, ಶಿಗ್ಗಾಂವಿ ತಾಲೂಕಿನಲ್ಲಿ 122 ಮೂಲ ಹಾಗೂ 36 ಹೆಚ್ಚುವರಿ ಸೇರಿ 158, ಹಾನಗಲ್ಲ ತಾಲೂಕಿನಲ್ಲಿ 202 ಮೂಲ ಹಾಗೂ ಹೆಚ್ಚುವರಿ 55 ಸೇರಿ 257 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts